ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಎನ್​ಡಿಎ ಮೈತ್ರಿ ತೊರೆಯುವ ಮಾತೇ ಇಲ್ಲ - ವದಂತಿಗಳಿಗೆ ಪುಲ್‌ ಸ್ಟಾಪ್ ಇಟ್ಟ ಪವನ್ ಕಲ್ಯಾಣ್

12:01 PM Jun 05, 2024 IST | Bcsuddi
Advertisement

ಪವನ್ ಕಲ್ಯಾಣ್ ಸದ್ಯ ಮೊದಲ ಗೆಲುವಿನ ಖುಷಿಯಲ್ಲಿದ್ದಾರೆ. ಇದು ಐತಿಹಾಸಿಕ ತೀರ್ಪಿನ ದಿನ. ನಾವು ಆಂಧ್ರಪ್ರದೇಶದ ಜನರಿಗೆ ಜವಾಬ್ದಾರಿಯುತ ಸರ್ಕಾರ ನೀಡಲು ಬದ್ಧರಾಗಿದ್ದೇವೆ.

Advertisement

ಎನ್​ಡಿಎ ಸರ್ಕಾರ ಅದನ್ನು ಗೌರವಿಸುತ್ತದೆ ಎಂದು ಪವನ್ ಕಲ್ಯಾಣ್ ಸಾರ್ವಜನಿಕವಾಗಿ ಹೇಳಿದ್ದಾರೆ. ಜನ ಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್, ಚುನಾವಣೆಯಲ್ಲಿ ಮೊದಲ ಗೆಲುವು ಕಂಡಿದ್ದಾರೆ.

ವಿಧಾನಸಭೆಯಲ್ಲಿ ಅವರ ಪಕ್ಷಕ್ಕೆ ನೀಡಿದ 21 ಕ್ಷೇತ್ರಗಳಲ್ಲಿ 21 ಕ್ಷೇತ್ರ, ಲೋಕಸಭೆಯಲ್ಲಿ ನೀಡಿದ ಎರಡಕ್ಕೆ ಎರಡು ಸ್ಥಾನಗಳನ್ನು ಗೆದ್ದಿದೆ. ಎನ್​​ಡಿಎ ಜೊತೆ ಸೇರಿ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದರು.

ಈ ಗೆಲುವಿನ ಬಳಿಕ ಪವನ್ ಕಲ್ಯಾಣ್ಅವರು ಖುಷಿ ಖುಷಿಯಿಂದ ಮಾತನಾಡಿದ್ದಾರೆ. ಎನ್​ಡಿಎ ಮೈತ್ರಿ ತೊರೆಯುವ ಮಾತೇ ಇಲ್ಲ ಎಂದಿದ್ದಾರೆ. ಪ್ರಧಾನಿ ಮೋದಿ ಜೊತೆ ಮಾತುಕತೆ ನಡೆದಿಲ್ಲ.

ನಾವು ಎನ್​ಡಿಎ ಜೊತೆ ಸಂಪೂರ್ಣವಾಗಿ ಕಮಿಟ್ ಆಗಿದ್ದೇವೆ. ಎರಡನೇ ಆಲೋಚನೆಯೇ ಇಲ್ಲ ಎಂದಿದ್ದಾರೆ. ಚಂದ್ರಬಾಬು ನಾಯ್ಡು ಅವರ ಟಿಡಿಪಿ, ಪವನ್ ಕಲ್ಯಾಣ್ ಅವರ ಜನ ಸೇನಾ ಪಕ್ಷ, ಬಿಜೆಪಿ ಮೈತ್ರಿಯೊಂದಿಗೆ ಸ್ಪರ್ಧಿಸಿತ್ತು.

Advertisement
Next Article