ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಎಣ್ಣೆ ಪ್ರಿಯರಿಗೆ ಸಿಹಿ ಸುದ್ದಿ - ಇನ್ನುಮುಂದೆ ದುಬಾರಿ ಮದ್ಯ ಕಡಿಮೆ ಬೆಲೆಗೆ

05:39 PM Aug 22, 2024 IST | BC Suddi
Advertisement

ಬೆಂಗಳೂರು : ಎಣ್ಣೆ ಪ್ರಿಯರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ಕೊಟ್ಟಿದೆ. ರಾಜ್ಯದಲ್ಲಿ ಸೆಪ್ಟೆಂಬರ್ 1 ರಿಂದ ದುಬಾರಿ ಮದ್ಯವನ್ನು ಅಗ್ಗದ ದರದಲ್ಲಿ ನೀಡಲು ಚಿಂತನೆ ನಡೆಸಿದೆ ಎಂದು ವರದಿಯಾಗಿದೆ.

Advertisement

ಅಬಕಾರಿ ಆದಾಯ ಹೆಚ್ಚಿಸಲು ಮದ್ಯದ ದರ ಇಳಿಕೆಗೆ ರಾಜ್ಯ ಸರ್ಕಾರ ಮುಂದಾಗಿದೆ. ಸೆಪ್ಟೆಂಬರ್ 1 ರಿಂದ ರಾಜ್ಯದಲ್ಲಿ ಮದ್ಯದ ದರ ಇಳಿಕೆಯಾಗಲಿದೆ. ದರ ಇಳಿಕೆ ಮಾಡುವಂತೆ ಅಬಕಾರಿ ಇಲಾಖೆಗೆ ಸಿಎಂ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಜುಲೈ1 ರಿಂದ ಮದ್ಯ ದರ ಇಳಿಕೆಗೆ ಅಬಕಾರಿ ಇಲಾಖೆ ಮುಂದಾಗಿತ್ತು. ಆದ್ರೆ ಮದ್ಯ ಉತ್ಪಾದಕರು ಹಾಗೂ ಅಬಕಾರಿ ಇಲಾಖೆ ನಡುವಿನ ಸಂಘರ್ಷದಿಂದ ದರ ಇಳಿಕೆ ಮಾಡಿರಲಿಲ್ಲ. ಆದರೆ ಇದೀಗ ಮದ್ಯದ ದರ ಇಳಿಕೆಗೆ ಅನುಮತಿ ಸಿಕ್ಕಿದೆ.

ಸೆಪ್ಟೆಂಬರ್ 1 ರಿಂದ ರಾಜ್ಯದಲ್ಲಿ ದುಬಾರಿ ಮದ್ಯ ಕಡಿಮೆ ಬೆಲೆಗೆ ಸಿಗಲಿದೆ. ದುಬಾರಿ ಬೆಲೆಯ ಬ್ರಾಂದಿ,ವಿಸ್ಕಿ ಜಿನ್,ರಮ್ ಆಗಸ್ಟ್ ರಿಂದ ಅಗ್ಗವಾಗಲಿದೆ. ಪ್ರತಿ ಬ್ರ್ಯಾಂಡ್ ಮದ್ಯದ ಪರಿಷ್ಕೃತ ದರ ಪಟ್ಟಿ ನಾಳೆ ಅಥವಾ ನಾಡಿದ್ದು ಬಿಡುಗಡೆಯಾಗುವ ಸಂಭವವಿದೆ.

 

ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ

 

Advertisement
Next Article