For the best experience, open
https://m.bcsuddi.com
on your mobile browser.
Advertisement

ಎಕ್ಸ್‌ಪೊಸ್ಯಾಟ್‌ ಉಪಗ್ರಹ ನಭಕ್ಕೆ, ಹೊಸ ಭಾಷ್ಯ ಬರೆದ ಇಸ್ರೋ: ಇದು ಜಗತ್ತಿನಲ್ಲೇ ದ್ವಿತೀಯ ಪ್ರಯತ್ನ.!

09:30 AM Jan 01, 2024 IST | Bcsuddi
ಎಕ್ಸ್‌ಪೊಸ್ಯಾಟ್‌ ಉಪಗ್ರಹ ನಭಕ್ಕೆ  ಹೊಸ ಭಾಷ್ಯ ಬರೆದ ಇಸ್ರೋ  ಇದು ಜಗತ್ತಿನಲ್ಲೇ ದ್ವಿತೀಯ ಪ್ರಯತ್ನ
Advertisement

ಶ್ರೀಹರಿಕೋಟ: ದೇಶದ ಹೆಮ್ಮೆಯ ಬಾಹ್ಯಾಕಾಶ ಸಂಶೋಧನ ಸಂಸ್ಥೆ ಇಸ್ರೋ ನೂತನ ವರ್ಷದ ಮೊದಲ ದಿನ ಹೊಸ ಭಾಷ್ಯ ಬರೆದಿದೆ ಬಾಹ್ಯಾಕಾಶದಲ್ಲಿ ಕಂಡುಬರುವ ಪ್ರಬಲವಾದ ಕ್ಷಕಿರಣಗಳನ್ನು ಅಧ್ಯ ಯನ ಮಾಡುವ ತನ್ನ ಚೊಚ್ಚಲ X-ರೇ ಪೋಲಾರಿಮೀಟರ್ ಉಪಗ್ರಹವನ್ನು (XPoSat) ಸೋಮವಾರ ಇಸ್ರೋ ಯಶಸ್ವಿಯಾಗಿ ಉಡಾವಣೆ ಮಾಡಿದೆ.

ಆಂಧ್ರಪ್ರದೇಶದ ಶ್ರೀಹರಿಕೋಟದ ಉಡಾವಣ ನೆಲೆಯಿಂದ ಬೆಳಗ್ಗೆ 9.10ಕ್ಕೆ ಪಿಎಸ್‌ಎಲ್‌ವಿ-ಸಿ58 ರಾಕೆಟ್‌ ಮೂಲಕ ಎಕ್ಸ್‌ಪೋಸ್ಯಾಟ್‌ ನಭಕ್ಕೆ ನೆಗೆದಿದೆ.

ಪಿಎಸ್‌ಎಲ್‌ವಿ- ಸಿ58ಕ್ಕೆ ಇದು 60ನೇ ಉಡಾವಣೆ. ಬಾಹ್ಯಾಕಾಶದಲ್ಲಿರುವ ಕಪ್ಪುಕುಳಿ (ಬ್ಲ್ಯಾಕ್‌ ಹೋಲ್‌) ಸಹಿತ ಅಲ್ಲಿ ಹೊರಹೊಮ್ಮುವ ಕ್ಷಕಿರಣಗಳ ಮೂಲ ವನ್ನು ಅಧ್ಯಯನ ಮಾಡಲು ಇಸ್ರೋ ಮೊದಲ ಬಾರಿ ಹೆಜ್ಜೆ ಇರಿಸಿದೆ. ಹಾಗಾಗಿ ಇಡೀ ಜಗತ್ತು ಈ ಉಡಾವಣೆಯನ್ನು ಕುತೂಹಲದಿಂದ ನೋಡುತ್ತಿದೆ. ಇದು ಜಗತ್ತಿನಲ್ಲೇ ದ್ವಿತೀಯ ಪ್ರಯತ್ನ.

Advertisement

Author Image

Advertisement