For the best experience, open
https://m.bcsuddi.com
on your mobile browser.
Advertisement

ಎಂ.ಕೆ.ವಿನಯ್‌ಗೆ ಪಿ.ಹೆಚ್.ಡಿ ಪದವಿ

07:51 AM Jan 10, 2024 IST | Bcsuddi
ಎಂ ಕೆ ವಿನಯ್‌ಗೆ ಪಿ ಹೆಚ್ ಡಿ ಪದವಿ
Advertisement

ಚಿತ್ರದುರ್ಗ:  , ಹೊಳಲ್ಕೆರೆ ತಾಲ್ಲೂಕು ತಾಳೀಕಟ್ಟೆ ಗ್ರಾಮದ ಎಂ.ಕೆ.ವಿನಯ್ ಅವರ ‘ಪ್ರಾಚೀನ ಕರ್ನಾಟಕದಲ್ಲಿ ಪಶುಪಾಲನೆ ಮತ್ತು ಪಶು ಸಂಬಂಧಿತ ಸಂಘರ್ಷಗಳು’ ಎಂಬ ಮಹಾಪ್ರಬಂಧವು ಹಂಪಿ ಕನ್ನಡ ವಿಶ್ವ ವಿದ್ಯಾಲಯ ಪಿ.ಹೆಚ್.ಡಿ ಪದವಿ ಭಾಜನವಾಗಿದೆ.

ಹಂಪಿ ಕನ್ನಡ ವಿಶ್ವ ವಿದ್ಯಾಲಯದ ಬುಡಕಟ್ಟು ಅಧ್ಯಯನ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ.ಗಂಗಾಧರ ದೈವಜ್ಞ ಅವರ ಮಾರ್ಗದರ್ಶನದಲ್ಲಿ ಎಂ.ಕೆ.ವಿನಯ್ ತಮ್ಮ ಸಂಶೋಧನಾ ಮಹಾಪ್ರಬಂಧ ರಚಿಸಿ, ವಿಶ್ವ ವಿದ್ಯಾಲಯದ ಶಾಸನಶಾಸ್ತç ವಿಭಾಗಕ್ಕೆ ಸಲ್ಲಿಸಿದ್ದರು.  ವಿಶ್ವ ವಿದ್ಯಾಲಯದ ಪರೀಕ್ಷಾ ಮಂಡಳಿ, ಕನ್ನಡ ವಿಶ್ವ ವಿದ್ಯಾಲಯ ಅಧಿನಿಯಮ ಹಾಗೂ ಪಿ.ಹೆಚ್.ಡಿ ಪದವಿ ನಿಯಮಗಳ ಅನುಸಾರ ಎಂ.ಕೆ.ವಿನಯ್ ಅವರ ‘ಪ್ರಾಚೀನ ಕರ್ನಾಟಕದಲ್ಲಿ ಪಶುಪಾಲನೆ ಮತ್ತು ಪಶು ಸಂಬAಧಿತ ಸಂಘರ್ಷಗಳು’ ಎಂಬ ಮಹಾಪ್ರಬಂಧ ಅತ್ಯುತ್ತಮ ಶ್ರೇಣಿಯದ್ದು ಎಂದು ಪರಿಗಣಿಸಿ ಪಿ.ಹೆಚ್.ಡಿ ಪದವಿಯನ್ನ ನೀಡಿದೆ.

ಜನವರಿ 10 ರಂದು ಜರುಗಲಿರುವ ಕನ್ನಡ ವಿಶ್ವ ವಿದ್ಯಾಲಯದ 32ನೇ ಘಟಿಕೋತ್ಸವದಲ್ಲಿ ರಾಜ್ಯಪಾಲ ಹಾಗೂ ಕುಲಾಧಿಪತಿ ಥಾವರ್ ಚಂದ್ ಗೆಹ್ಲೋಟ್, ಕುಲಪತಿ ಡಾ. ಡಿ.ವಿ. ಪರಮಶಿವಮೂರ್ತಿ, ಕುಲಚಿವ ಡಾ. ವಿಜಯ್ ಪೂಣಚ್ಚ ತಂಬAಡ ಅವರ ಸಮ್ಮುಖದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್,  ಎಂ.ಕೆ.ವಿನಯ್ ಅವರಿಗೆ ಪಿ.ಹೆಚ್.ಡಿ ಪದವಿಯನ್ನು  ಪ್ರಧಾನ ಮಾಡಲಿದ್ದಾರೆ.

Advertisement

Tags :
Author Image

Advertisement