For the best experience, open
https://m.bcsuddi.com
on your mobile browser.
Advertisement

ಉಧಂಪುರ ದಾಳಿ ಸಂಚುಕೋರ, 26/11 ಮಾಸ್ಟರ್ ಮೈಂಡ್ ಹಫೀಜ್ ಸಯೀದ್‌ನ ಸಹಾಯಕ ಪಾಕ್‌ನಲ್ಲಿ ಹತ್ಯೆ

05:17 PM Dec 06, 2023 IST | Bcsuddi
ಉಧಂಪುರ ದಾಳಿ ಸಂಚುಕೋರ  26 11 ಮಾಸ್ಟರ್ ಮೈಂಡ್ ಹಫೀಜ್ ಸಯೀದ್‌ನ ಸಹಾಯಕ ಪಾಕ್‌ನಲ್ಲಿ ಹತ್ಯೆ
Advertisement

ಇಸ್ಲಾಮಾಬಾದ್‌: ಜಮ್ಮು ಮತ್ತು ಕಾಶ್ಮೀರದ ಉಧಂಪುರದಲ್ಲಿ ಬಿಎಸ್‌ಎಫ್ ಬೆಂಗಾವಲು ಪಡೆ ಮೇಲೆ 2015ರಲ್ಲಿ ನಡೆದ ದಾಳಿಯ ಮಾಸ್ಟರ್ ಮೈಂಡ್ ಲಷ್ಕರ್-ಎ-ತೊಯ್ಬಾ ಭಯೋತ್ಪಾದಕ ಹಂಝ್ಲಾ ಅದ್ನಾನ್‌ನನ್ನು ಪಾಕಿಸ್ತಾನದ ಕರಾಚಿಯಲ್ಲಿ ಗುಂಡಿಕ್ಕಿ ಕೊಲೆ ಮಾಡಲಾಗಿದೆ ಎಂದು ವರದಿಯಾಗಿದೆ. ಹಂಝ್ಲಾ ಅದ್ನಾನ್ 26/11 ಮುಂಬೈ ದಾಳಿಯ ಮಾಸ್ಟರ್‌ಮೈಂಡ್‌ ಹಾಗೂ ಎಲ್‌ಇಟಿ ಮುಖ್ಯಸ್ಥ ಹಫೀಜ್ ಸಯೀದ್ ಜೊತೆ ನಿಕಟ ಸಂಪರ್ಕ ಹೊಂದಿದ್ದ ಎಂದು ಹೇಳಲಾಗಿದೆ. ಡಿಸೆಂಬರ್ 2 ಮತ್ತು 3ರ ಮಧ್ಯರಾತ್ರಿಯಲ್ಲಿ ಹಂಝ್ಲಾ ಅದ್ನಾನ್‌ನನ್ನು ಆತನ ಮನೆಯ ಹೊರಗೆ ಕೊಲ್ಲಲಾಗಿದೆ ಎಂದು ವರದಿಯಾಗಿದೆ.

Author Image

Advertisement