For the best experience, open
https://m.bcsuddi.com
on your mobile browser.
Advertisement

ಉತ್ತರ ಪ್ರದೇಶದಲ್ಲಿ ಸಿಎಂv/s ಡಿಸಿಎಂ: ಯೋಗಿ ಸರ್ಕಾರದ ನಡುವೆ ಭುಗಿಲೆದ್ದ ಅಸಮಾಧಾನ

05:43 PM Jul 17, 2024 IST | Bcsuddi
ಉತ್ತರ ಪ್ರದೇಶದಲ್ಲಿ ಸಿಎಂv s ಡಿಸಿಎಂ  ಯೋಗಿ ಸರ್ಕಾರದ ನಡುವೆ ಭುಗಿಲೆದ್ದ ಅಸಮಾಧಾನ
Advertisement

ನವದೆಹಲಿ:  ಉತ್ತರ ಪ್ರದೇಶದ ಬಿಜೆಪಿಯಲ್ಲಿ ಅಸಮಾಧಾನದ ಭುಗಿಲೆದ್ದಿರುವುಉ ಬಹಿರಂಗವಾಗಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೊಂದಿಗೆ ಉಪಮುಖ್ಯ ಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಭಿನ್ನಾಭಿಪ್ರಾಯದ ಕುರಿತು ಭಾರೀ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಮೌರ್ಯ ಅವರು ಮಂಗಳವಾರ ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀ ಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ಉತ್ತರ ಪ್ರದೇಶದಲ್ಲಿ 10 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಮುನ್ನ ಬಿಜೆಪಿ ಕಾರ್ಯತಂತ್ರ ಹಣೆಯುತ್ತಿರುವ ವೇಳೆ ಈ ವಿದ್ಯಮಾನ ನಡೆದಿದೆ. ಕಳೆದ ವಾರ, ಲಕ್ನೋ ದಲ್ಲಿ ನಡೆದ ಬಿಜೆಪಿಯ ಉತ್ತರ ಪ್ರದೇಶ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮೌರ್ಯ ಅವರು ತಮ್ಮ ಸಂಘಟನೆ ಯಾವಾಗಲೂ ಸರ್ಕಾರಕ್ಕಿಂ ತ ದೊಡ್ಡದು ಎಂಬ ಹೇಳಿಕೆ ಚರ್ಚೆಗೆ ಕಾರಣವಾಯಿತು. ಅದೇ ಸಭೆಯಲ್ಲಿ ತಮ್ಮ ಭಾಷಣದಲ್ಲಿ ಯೋಗಿ ಆದಿತ್ಯನಾಥ್ ಅವರು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ನಿರೀಕ್ಷೆಗಳು ಮತ್ತು ಭರವಸೆಗಳನ್ನು ಘಾಸಿಯಾಗಲು ಅತಿಯಾದ ಆತ್ಮವಿಶ್ವಾಸ ಕಾರಣ ಎಂದಿದ್ದರು.

ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದ ನೇತೃತ್ವದಲ್ಲಿ ಇಂಡಿಯಾ ಮೈತ್ರಿಕೂಟ ಬಿಜೆಪಿಯನ್ನು ಮೀರಿದ ಸ್ಥಾನಗಳನ್ನು ಗೆದ್ದ ನಂತರ ಈ ಬೆಳವಣಿಗೆ ನಡೆದಿದೆ.

Advertisement

ಮೂಲಗಳ ಪ್ರಕಾರ ಬಿಜೆಪಿಯ ಉತ್ತರ ಪ್ರದೇಶ ಘಟಕ ಹಾಗೂ ಯೋಗಿ ಸಂಪುಟದಲ್ಲಿ ದೊಡ್ಡ ಬದಲಾವಣೆಯಾಗುವ ಸಾಧ್ಯತೆ ಇದ್ದು, ಸಭೆಯಲ್ಲಿ ಮುಖ್ಯಮಂತ್ರಿ ಸ್ಥಾನದ ಬದಲಾವಣೆಯ ಬಗ್ಗೆ ಯಾವುದೇ ಚರ್ಚೆ ನಡೆಸಲಾಗಿಲ್ಲ ಎಂದು ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ

Author Image

Advertisement