For the best experience, open
https://m.bcsuddi.com
on your mobile browser.
Advertisement

ಉತ್ತರಾಖಂಡದಲ್ಲಿ ಭೂಕುಸಿತ: ಬದರಿನಾಥ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಬಂದ್

11:14 AM Sep 14, 2024 IST | BC Suddi
ಉತ್ತರಾಖಂಡದಲ್ಲಿ ಭೂಕುಸಿತ  ಬದರಿನಾಥ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಬಂದ್
Advertisement

ಡೆಹ್ರಾಡೂನ್ : ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಭೂಕುಸಿತ ಉಂಟಾಗಿ, ಬದರಿನಾಥ ರಾಷ್ಟ್ರೀಯ ಹೆದ್ದಾರಿಯು ಬಂದ್ ಆಗಿದೆ ಎಂದು ಜಿಲ್ಲಾಡಳಿತ ಇಂದು ತಿಳಿಸಿದೆ.

ಭೂಕುಸಿತ ಸಂಭವಿಸಿ ಬೆಟ್ಟಗಳಿಂದ ಕಲ್ಲುಗಳು ಉರುಳಿ ರಸ್ತೆಗಳ ಮೇಲೆ ಬಿದ್ದಿದೆ. ಪರಿಣಾಮ ಲಂಬಗಡ, ನಂದಪ್ರಯಾಗ, ಸೋನಾಳ ಮತ್ತು ಬ್ಯಾರೇಜ್ ಕುಂಜ್‌ನಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಕಚೇರಿ ಹೇಳಿದೆ. ಜೊತೆಗೆ ಸಾಕೋಟ್-ನಂದಪ್ರಯಾಗ ನಡುವಿನ ಮಾರ್ಗವನ್ನು ಕೂಡ ನಿರ್ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು ಕಾಮೇದಾ ಬಳಿಯ ಬದರಿನಾಥ ರಾಷ್ಟ್ರೀಯ ಹೆದ್ದಾರಿಯನ್ನು ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ ಎಂದು ಚಮೋಲಿ ಪೊಲೀಸರು ಮಾಹಿತಿ ನೀಡಿದ್ದಾರೆ.

Advertisement

ಇತ್ತೀಚೆಗೆ ಕೇದಾರನಾಥದ ಬಳಿಯ ಲಿಂಚೋಲಿಯಲ್ಲಿನ ಶಿಬಿರದಲ್ಲಿ ಭೂಕುಸಿತ ಉಂಟಾಗಿತ್ತು. ಋಷಿಕೇಶದ ಶಿವಮಂದಿರ ಮತ್ತು ಮೀರಾನಗರ ಪ್ರದೇಶಗಳ ಬಳಿ ಹೊಳೆಗಳಲ್ಲಿ 2 ಮೃತದೇಹಗಳು ಪತ್ತೆಯಾಗಿದ್ದವು.

ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ

Author Image

Advertisement