For the best experience, open
https://m.bcsuddi.com
on your mobile browser.
Advertisement

ಉಡುಪಿ: ನಗರದಲ್ಲಿ ಎರಡು ತಂಡಗಳ ನಡುವೆ ಗ್ಯಾಂಗ್ ವಾರ್ - ಇಬ್ಬರು ಅರೆಸ್ಟ್ , ಉಳಿದವರಿಗಾಗಿ ಶೋಧ

11:36 AM May 25, 2024 IST | Bcsuddi
ಉಡುಪಿ  ನಗರದಲ್ಲಿ ಎರಡು ತಂಡಗಳ ನಡುವೆ ಗ್ಯಾಂಗ್ ವಾರ್   ಇಬ್ಬರು ಅರೆಸ್ಟ್   ಉಳಿದವರಿಗಾಗಿ ಶೋಧ
Advertisement

ಉಡುಪಿ ನಗರದಲ್ಲಿ ಎರಡು ತಂಡಗಳ ನಡುವೆ ಗ್ಯಾಂಗ್ ವಾರ್ ನಡೆದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು , ಸದ್ಯ ಅದರ ವಿಡಿಯೋ ವೈರಲ್ ಆಗುತ್ತಿದೆ. ಮೇ 18ರಂದು ರಾತ್ರಿ ಎರಡು ತಂಡಗಳ ನಡುವೆ ನಡು ರಸ್ತೆಯಲ್ಲೇ ಹೊಡೆದಾಟ ನಡೆದಿದೆ.

ಅಡ್ಡಾದಿಡ್ಡಿ ಕಾರು ಚಲಾಯಿಸಿ ಎರಡೂ ಕಾರುಗಳು ಪರಸ್ಪರ ಡಿಕ್ಕಿ ಹೊಡೆದ ಬಳಿಕ ಎರಡು ತಂಡಗಳ ನಡುವೆ ಫೈಟ್ ನಡೆದಿದೆ.ಈ ವೇಳೆ ನಡುರಸ್ತೆಯಲ್ಲೇ ತಂಡವೊಂದು ತಲವಾರು ಹಿಡಿದು ಹೊಡೆದಾಟ ನಡೆಸಿದೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆಶಿಕ್ ಮತ್ತು ರಕೀಬ್ ಎಂಬಿಬ್ಬರು ಆರೋಪಿಗಳ ಬಂಧನವಾಗಿದ್ದು ,ಇವರಿಬ್ಬರು ಗರುಡ ಗ್ಯಾಂಗ್ ನವರು ಎಂದು ಎಸ್ಪಿ ತಿಳಿಸಿದ್ದಾರೆ.

Advertisement

ಎರಡು ಸ್ವಿಫ್ಟ್ ಕಾರು ,ಎರಡು ಬೈಕ್ ,ಒಂದು ತಲವಾರು ,ಒಂದು ಡ್ರ್ಯಾಗರ್ ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಉಳಿದ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

Author Image

Advertisement