ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಉಜ್ವಲ 2.0 ಯೋಜನೆಯಡಿ ಫ್ರೀ ಗ್ಯಾಸ್ ಸಿಲಿಂಡರ್‌ & ಸ್ಟೌವ್.!‌

03:03 PM Jan 16, 2024 IST | Bcsuddi
Advertisement

2016 ನೇ ವರ್ಷದಿಂದ ಕೇಂದ್ರದ ಪೆಟ್ರೋಲಿಯಂ & ನೈಸರ್ಗಿಕ ಅನಿಲ ಸಚಿವಾಲಯದಿಂದ ಗ್ರಾಮೀಣ ಭಾಗದ ಜನರಿಗೆ & ಅರ್ಥಿಕವಾಗಿ ಹಿಂದುಳಿದ ವರ್ಗದವರಿಗೆ LPG ಶುದ್ದ ಅಡುಗೆ ಇಂಧನ ಸಂಪರ್ಕ ನೀಡುವ ದೇಸೆಯಲ್ಲಿ ಪ್ರಧಾನ ಮಂತ್ರಿ ಉಜ್ವಲ ಯೋಜನೆ ಜಾರಿಗೆ ತರಲಾಯಿತು.

Advertisement

ಪ್ರಸ್ತುತ ಈ ಯೋಜನೆಯ 2ನೇ ಹಂತದ ಅನುಷ್ಠಾನಕ್ಕಾಗಿ 1.6 ಕೋಟಿ ಕುಟುಂಬಗಳಿಗೆ LPG ಸಂಪರ್ಕ ಒದಗಿಸಲು ಪುನಃ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಯೋಜನೆಯ ಲಾಭ ಪಡೆಯಲು ಯಾರೆಲ್ಲ ಅರ್ಜಿ ಸಲ್ಲಿಸಬವುದು? ಅಗತ್ಯ ದಾಖಲಾತಿಗಳೇನು? ಮೊಬೈಲ್ ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ ?.

ಯಾರೆಲ್ಲ ಅರ್ಜಿ ಸಲ್ಲಿಸಬವುದು?

ಈ ಯೋಜನೆಯ ಪ್ರಯೋಜನ ಪಡೆಯಲು ತನ್ನ ಹೆಸರಿನಲ್ಲಿ ಮನೆಯಲ್ಲಿ LPG ಕನೆಕ್ಷನ್ ಇಲ್ಲದೆ ಇರುವವರು, ಬಡ ಕುಟುಂಬಕ್ಕೆ ಸೇರಿದ ವಯಸ್ಕ ಮಹಿಳೆಯರು ಈ ಯೋಜನೆಯಡಿ ಅರ್ಜಿ ಹಾಕಬಹುದಾಗಿದೆ .

ಈ ಯೋಜನೆಯ ಪ್ರಯೋಜನ ಪಡೆಯಲು ತನ್ನ ಹೆಸರಿನಲ್ಲಿ ಮನೆಯಲ್ಲಿ LPG ಕನೆಕ್ಷನ್ ಇಲ್ಲದೆ ಇರುವವರು, ಬಡ ಕುಟುಂಬಕ್ಕೆ ಸೇರಿದ ವಯಸ್ಕ ಮಹಿಳೆಯರು ಈ ಯೋಜನೆಯಡಿ ಅರ್ಜಿ ಹಾಕಬಹುದಾಗಿದೆ.

SC, ST, ಪ್ರಧಾನ ಮಂತ್ರಿ ಆವಾಸ್ ಯೋಜನೆಯ, ಅತ್ಯಂತ ಹಿಂದುಳಿದ ವರ್ಗ, ಅಂತ್ಯೋದಯ ಅನ್ನ ಯೋಜನೆ, ಚಹಾ & ಮಾಜಿ ಚಹಾ ತೋಟದ ಬುಡಕಟ್ಟು, ದ್ವೀಪಗಳು, ಅರಣ್ಯವಾಸಿಗಳು & ನದಿಗಳ ಬಳಿ ವಾಸಿಸುವವರು ಅಗತ್ಯ ದಾಖಲೆಗಳನ್ನು ಸಲ್ಲಿಸಿ ಅರ್ಜಿ ಸಲ್ಲಿಸಬವುದು.

ಈ ಯೋಜನೆಯಡಿ ಯಾವೆಲ್ಲ ಸೌಲಭ್ಯ ನೀಡಲಾಗುತ್ತದೆ?

ಉಜ್ವಲ ಯೋಜನೆ 2.0 ಅಡಿ ಅರ್ಜಿ ಸಲ್ಲಿಸಿದ ಅರ್ಹ ಫಲಾನುಭವಿಗಳಿಗೆ ಉಚಿತವಾಗಿ LPG ಸ್ಟೌವ್ ಮತ್ತು ಫಸ್ಟ್ ರೀಫಿಲ್ ಮತ್ತು ಗ್ಯಾಸ್ ಸಿಲಿಂಡರ್ ನೀಡಲಾಗುವುದು ಇದಕ್ಕಾಗಿ ಯಾವುದೇ ಹಣ ಪಾವತಿಸಬೇಕಿಲ್ಲ ಸಂಪೂರ್ಣ ಉಚಿತವಾಗಿ ನೀಡಲಾಗುವುದು.

ಅರ್ಜಿ ಸಲ್ಲಿಸಲು ಅಗತ್ಯ ದಾಖಲಾತಿಗಳು:

1) ಅರ್ಜಿದಾರರ ಆಧಾರ್ ಕಾರ್ಡ ಪ್ರತಿ.(aadhar card)
2) ಫೋಟೋ. (photo)
3) ಬ್ಯಾಂಕ್ ಪಾಸ್ ಬುಕ್ ಪ್ರತಿ.(bank pass book)
4) ರೇಷನ್ ಕಾರ್ಡ. (ration card)
5) ಜಾತಿ & ಆದಾಯ ಪ್ರಮಾಣ ಪತ್ರ.
6) ರೇಷನ್ ಕಾರ್ಡನಲ್ಲಿರುವ ಎಲ್ಲಾ ಸದಸ್ಯರ ಅಧಾರ್ ಕಾರ್ಡ ಪ್ರತಿ.

ಎಲ್ಲಿ ಅರ್ಜಿ ಸಲ್ಲಿಸಬೇಕು?

ಆಸಕ್ತ ಅರ್ಹ ಅರ್ಜಿದಾರರರು 2 ವಿಧಾನದ ಮೂಲಕ ಅರ್ಜಿ ಸಲ್ಲಿಸಬವುದು ಒಂದು ನಿಮ್ಮ ಹತ್ತಿರ ಗ್ಯಾಸ್ ಎಜೆನ್ಸಿ ಕಚೇರಿಗೆ ಅಗತ್ಯ ದಾಖಲಾತಿಗಳ ಸಮೇತ ನೇರವಾಗಿ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಎರಡನೆಯದು ನೀವು ನಿಮ್ಮ ಮೊಬೈಲ್ ನಲ್ಲಿ ನೇರವಾಗಿ ಎಲ್ಲಾ ಮಾಹಿತಿ ಭರ್ತಿ ಮಾಡಿ ಅರ್ಜಿಯನ್ನು ಸಲ್ಲಿಸಬಹುದು.

tep-1: ಮೊದಲಿಗೆ ಈ ಲಿಂಕ್ ಮೇಲೆ Ujjwala yojana 2.0 application ಕ್ಲಿಕ್ ಮಾಡಿಕೊಳ್ಳಿ ಈ ಪುಟದ ಕೆಳಗೆ ಕಾಣುವ “ಆನ್ ಲೈನ್ ಪೋರ್ಟಲ್” button ಮೇಲೆ ಕ್ಲಿಕ್ ಮಾಡಿ ಬಳಿಕ ನಿಮಗೆ ಯಾವ ಕಂಪನಿಯ ಸಿಲಿಂಡರ್ ಅವಶ್ಯವಿದಿಯೋ ಆ ಕಂಪನಿಯನ್ನು ಆಯ್ಕೆ ಮಾಡಿಕೊಂಡು ಮುಂದುವರೆಯಿರಿ.

Step-2: ಮೇಲಿನ ಹಂತ ಮುಗಿಸಿದ ನಂತರ ಮುಂದಿನ ಪೇಜ್ ನಲ್ಲಿ “Type of Connection” ಆಯ್ಕೆ “Ujjwala 2.0 connection” ಎಂದು ಆಯ್ಕೆ ಮಾಡಿಕೊಳ್ಳಿ ರಾಜ್ಯ & ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡು Show list ಬಟನ್ ಮೇಲೆ ಕ್ಲಿಕ್ ಮಾಡಿ. ಇಲ್ಲಿ ತೋರಿಸುವ ಎಜೆನ್ಸಿಯಲ್ಲಿ ಒಂದನ್ನು ಆಯ್ಕೆ ಮಾಡಿಕೊಂಡು “contiune” button ಮೇಲೆ ಕ್ಲಿಕ್ ಮಾಡಿ.

Step-3: ಈ ಪೇಜ್ ನಲ್ಲಿ ನಿಮ್ಮ mobile number ಹಾಕಿ ಅಲ್ಲೆ ಕಾಣುವ ಕ್ಯಾಪ್ಚ್ ಕೋಡ್ ನಮೂದಿಸಿ OTP ನಮೂದಿಸಿ ಇತರೆ ವಿವರಗಳನ್ನು ಭರ್ತಿ ಮಾಡಿಕೊಂಡು ಅರ್ಜಿ ಸಲ್ಲಿಸಬೇಕು.

Advertisement
Next Article