ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಈ ಹಳ್ಳಿಯವರು ಮೀನುಗಾರಿಕೆ ಸಲಕರಣೆ ಕಿಟ್ ಗೆ ಅರ್ಜಿ ಸಲ್ಲಿಸಬಹುದು.!

07:39 AM Mar 16, 2024 IST | Bcsuddi
Advertisement

 

Advertisement

ಚಿತ್ರದುರ್ಗ : ಚಿತ್ರದುರ್ಗ ತಾಲ್ಲೂಕಿಗೆ ಸಂಬಂಧಿಸಿದಂತೆ ಗಣಿಬಾಧಿತ ಜಿಲ್ಲೆಗಳ ಸಮಗ್ರ ಅಭಿವೃದ್ದಿ ಯೋಜನೆಯಡಿ  (CEPMIZ)  2023-24 ನೇ ಸಾಲಿಗೆ ಸಂಬಂಧಿಸಿದಂತೆ ಮೀನುಗಾರಿಕೆ ಇಲಾಖೆ ವತಿಯಿಂದ ಅರ್ಹ ಫಲಾನುಭವಿಗಳಿಗೆ ಶೇ.100ರಷ್ಟು ಸಹಾಯಧನದಲ್ಲಿ  ಮೀನುಗಾರಿಕೆ ಸಲಕರಣೆ ಯೋಜನೆಯಡಿ ಆಸಕ್ತ ಮೀನುಗಾರ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಏಪ್ರಿಲ್ 20 ಕೊನೆ ದಿನವಾಗಿದೆ.

ಈ ಯೋಜನೆಗೆ ಚಿತ್ರದುರ್ಗ  ತಾಲ್ಲೂಕಿನ ಭೀಮಸಮುದ್ರ, ವಿ.ಪಾಳ್ಯ, ಮೇಗಳಹಳ್ಳಿ, ಮಾರಿಜೋಗಿಹಳ್ಳಿ, ಕಡ್ಲೆಗುದ್ದು, ಬೋಮವ್ವನಾಗ್ತಿಹಳ್ಳಿ, ತುರೆಬೈಲು, ಮಳಲಿ, ನೆಲ್ಲಿಕಟ್ಟೆ, ಹಿರೇಗುಂಟನೂರು, ಹಳಿಯೂರು, ಬೆಟ್ಟದನಾಗೇನಹಳ್ಳಿ, ಬಸವಪುರ, ಅಮೃತಪುರ, ದಿಂಡನಹಳ್ಳಿ, ಬೊಮ್ಮೆನಹಳ್ಳಿ, ಸಿದ್ದಾಪುರ, ಮಾನಂಗಿ, ಮಾಳಪ್ಪನಹಟ್ಟಿ, ಕೋಣನೂರು, ಚಿಕ್ಕೆನಹಳ್ಳಿ, ಡಿ.ಮದಕರಿಪುರ, ಆಲಘಟ್ಟ, ಸಿರಿಗೆರೆ, ಓಬವ್ವನಾಗ್ತಿಹಳ್ಳಿ, ಸಿದ್ದವ್ವನಹಳ್ಳಿ, ದೊಡ್ಡಿಗನಾಳ್, ಡಿ.ಹೊಸಹಟ್ಟಿ ಗ್ರಾಮಗಳ ಸಾರ್ವಜನಿಕರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಹೆಚ್ಚಿನ ಮಾಹಿತಿಗಾಗಿ ಚಿತ್ರದುರ್ಗ ಮೀನಿಗಾರಿಕೆ ಸಹಾಯಕ ನಿರ್ದೇಶಕರನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಿ  ಮಾಹಿತಿಯನ್ನು ಪಡೆಯಬಹುದು ಎಂದು ಪ್ರಕಟಣೆ ತಿಳಿಸಿದೆ.

Tags :
ಈ ಹಳ್ಳಿಯವರು ಮೀನುಗಾರಿಕೆ ಸಲಕರಣೆ ಕಿಟ್ ಗೆ ಅರ್ಜಿ ಸಲ್ಲಿಸಬಹುದು.!
Advertisement
Next Article