ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಈ ಹತ್ತು ಸಲಹೆ ತಪ್ಪದೇ ಪಾಲಿಸಿದರೆ ಆರೋಗ್ಯ ಉತ್ತಮ

08:53 AM Aug 04, 2024 IST | BC Suddi
Advertisement

ಈ ಜಗತ್ತಿನಲ್ಲಿ ನಮ್ಮ ನಿಜವಾದ ಸಂಗಾತಿಯೆಂದರೆ, ಅದು ನಮ್ಮ  ದೇಹವಾಗಿದೆ. ಆದ್ದರಿಂದಲೇ 'ಆರೋಗ್ಯವಂತ ದೇಹವೇ ದೊಡ್ಡ ಸಂಪತ್ತು' ಎಂದು ಹೇಳಲಾಗುತ್ತದೆ. ನಾವು ನಮ್ಮನ್ನು ಆರೋಗ್ಯವಾಗಿ ಮತ್ತು ಸದೃಢವಾಗಿಡಲು ಜಿಮ್ ಗೆ ಹೋಗುತ್ತೇವೆ, ದುಬಾರಿ ಆಹಾರಗಳನ್ನು ತಿನ್ನುತ್ತೇವೆ, ಪೌಷ್ಟಿಕತಜ್ಞರಿಂದ ಸಲಹೆ ಪಡೆಯುತ್ತೇವೆ. ಆದರೆ ಕೆಲವು ಸಣ್ಣ ಸಲಹೆಗಳನ್ನು ಮರೆತು ಬಿಡಿ. ಪ್ರತಿದಿನ ಈ ಸಲಹೆಗಳನ್ನು ಅನುಸರಿಸಿದರೆ, ದೇಹವು ಹೆಚ್ಚಾಗಿ ಆರೋಗ್ಯಕರವಾಗಿರುತ್ತದೆ.

Advertisement

ಉತ್ತಮ ಆರೋಗ್ಯಕ್ಕೆ (Health) ಅತ್ಯಗತ್ಯವಾಗಿರುವ ಈ ಸಲಹೆಗಳನ್ನು ಸ್ವತಃ ತಜ್ಞರೆ ಸಲಹೆ ನೀಡಿದ್ದಾರೆ. ಈ ಸಲಹೆಗಳನ್ನು ಪಾಲಿಸಿ ಉತ್ತಮ ಆರೋಗ್ಯ ವನ್ನು ಪಡೆಯಿರಿ.

ಊಟ ಮಾಡುವಾಗ ಈಗೀಗ ಎಲ್ಲರೂ ಸಾಮಾನ್ಯವಾಗಿ ಟೇಬಲ್ - ಚೇರ್ ಬಳಕೆ ಮಾಡಿ ಊಟ ಮಾಡುತ್ತಾರೆ. ಆದರೆ ಇದು ಸರಿಯಾದ ಕ್ರಮ ಅಲ್ಲ. ಊಟವನ್ನು ಕೆಳಗೆ ಕುಳಿತು ಕೈಗಳಿಂದ ತಿನ್ನಬೇಕು. ಆಹಾರವನ್ನು ಚೆನ್ನಾಗಿ ಅಗಿಯಿರಿ. ಆವಾಗ ಮಾತ್ರ ಆಹಾರ (Food) ಸಂಪೂರ್ಣವಾಗಿ ದೇಹಕ್ಕೆ ಸೇರುತ್ತದೆ.

ಆಹಾರ ಸೇವಿಸುವಾಗ ಫೋನ್ (Mobile), ಟಿವಿ, ಲ್ಯಾಪ್ ಟಾಪ್ (Laptop) ಮುಂತಾದ ಎಲ್ಲಾ ಗ್ಯಾಜೆಟ್ ಗಳಿಂದ ದೂರವಿರಿ. ಇವುಗಳ ಕಡೆಗೆ ಹೆಚ್ಚಿನ ಗಮನ ಹರಿಸಿದರೆ ಊಟ (Meal) ಹೆಚ್ಚು, ತಿಂದರೂ, ಕಡಿಮೆ ತಿಂದರೂ ತಿಳಿಯುವುದಿಲ್ಲ. ಇದರಿಂದ ಊಟದ ಸ್ವಾದವನ್ನು (Taste) ಸಹ ಸವಿಯಲು ಸಾಧ್ಯವಿಲ್ಲ.

ಪ್ರತಿದಿನ ಆಹಾರದಲ್ಲಿ ಒಂದು ಹಿಡಿ ನಟ್ಸ್ (nuts) ಗಳನ್ನು ತಿನ್ನಿ. ಬೆಳಿಗ್ಗೆ ವಾಲ್ ನಟ್ ಅಥವಾ ಬಾದಾಮಿ (Almonds) ಮತ್ತು ಮಧ್ಯಾಹ್ನ ಕಡಲೆಕಾಯಿ (Groundnuts) ಅಥವಾ ಗೋಡಂಬಿ (Cashew Nuts) ಸೇವಿಸಿ. ಇತರ ಆಹಾರಗಳ ಜೊತೆಗೆ ನಟ್ಸ್, ಡ್ರೈ ಫ್ರುಟ್ಸ್ (Dry Fruits) ಸೇವನೆ ಮಾಡುವುದು ದೇಹಕ್ಕೆ ಹೆಚ್ಚಿನ ಶಕ್ತಿ (Energy) ನೀಡುತ್ತದೆ.

ಋತುಮಾನದ ಹಸಿರು ತರಕಾರಿಗಳನ್ನು (Green Vegetables) ಸೇವಿಸಿ. ಸೌತೆಕಾಯಿ, ಬದನೆ, ಸೊಪ್ಪು, ಬೆಂಡೆಕಾಯಿ ಮೊದಲಾದ ತರಕಾರಿಗಳನ್ನು ಸೇವಿಸುವುದನ್ನು ತಪ್ಪಿಸಬೇಡಿ. ಯಾವ ಕಾಲಕ್ಕೆ ಯಾವ ತರಕಾರಿಗಳು ಸಿಗುತ್ತವೆಯೋ ಅವುಗಳನ್ನು ಸೇವಿಸಿ. ಉತ್ತಮ ಆರೋಗ್ಯವನ್ನು ಪಡೆಯಿರಿ.

ಆಹಾರದಲ್ಲಿ ರಾಗಿ (Ragi), ಜೋಳದಂತಹ ಒರಟು ಧಾನ್ಯಗಳನ್ನು ಸೇರಿಸಿ. ಈ ಧಾನ್ಯಗಳು ಸದೃಢ ಶರೀರಕ್ಕೆ ಉತ್ತಮ ಆಹಾರವಾಗಿದೆ. ಇವುಗಳಿಂದ ರೊಟ್ಟಿ, ರಾಗಿ ಮುದ್ದೆ ಮೊದಲಾದ ಆಹಾರಗಳನ್ನು ಮಾಡಿ ಸೇವಿಸಬಹುದು. ಯಾವಾಗಲೂ ಸೇವನೆ ಮಾಡಲು ಸಾಧ್ಯವಾಗದಿದ್ದರೂ ವಾರದಲ್ಲಿ ಒಂದೆರಡು ಬಾರಿಯಾದರೂ ಇವು ನಿಮ್ಮ ಡಯಟ್ ನಲ್ಲಿರಲಿ.

ಮನೆಯಲ್ಲಿ ಶೇಖರಿಸಿದ ಮೊಸರನ್ನು ಸೇವಿಸಿ. ಸಮೃದ್ಧವಾಗಿರುವ ಕ್ಯಾಲ್ಸಿಯಂ, ವಿಟಮಿನ್, ಕ್ಯಾಲೊರಿ, ಪ್ರೋಟೀನ್‍ಗಳು ದೇಹಕ್ಕೆ ಸೂಕ್ತವಾದ ಪೋಷಣೆಯನ್ನು ನೀಡುತ್ತವೆ. ಆದರೆ ಇದನ್ನು ಸರಿಯಾದ ಪ್ರಮಾಣದಲ್ಲಿ ಮತ್ತು ಸರಿಯಾದ ಸಮಯದಲ್ಲಿ ಸೇವಿಸಿದರೆ ಮಾತ್ರ ಆರೋಗ್ಯ ಉತ್ತಮವಾಗಿರುತ್ತದೆ. ಗ್ಯಾಸ್ಟ್ರಿಕ್, ಅಜೀರ್ಣ, ಮಲಬದ್ಧತೆ, ಹೊಟ್ಟೆಯ ಕಿರಿಕಿರಿ ಮೊದಲಾದ ಸಮಸ್ಯೆಗಳಿಗೂ ಇದು ಪರಿಹಾರ ನೀಡುತ್ತದೆ.

ಬೆಳಗಿನ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ ಒಂದು ಟೀ ಚಮಚ ತುಪ್ಪವನ್ನು ಸೇವಿಸಿರಿ. ಇದರಿಂದ ಹಲವು ಆರೋಗ್ಯ ಸಮಸ್ಯೆ ಮಾಯವಾಗುತ್ತದೆ. ತುಪ್ಪ ಕೊಬ್ಬಿನಲ್ಲಿ ಕರಗುವ ವಿಟಮಿನ್ ಡಿ, ಕೆ, ಇ, ಎ ಅನ್ನು ಹೊಂದಿರುತ್ತದೆ. ಇದು ರೋಗ ನಿರೋಧಕ ಶಕ್ತಿಯನ್ನ ಹೆಚ್ಚಿಸುತ್ತದೆ.

ಪ್ರತಿದಿನ ಕನಿಷ್ಠ 30 ನಿಮಿಷ ವ್ಯಾಯಾಮ ಮಾಡಿ ಮತ್ತು ದಿನವಿಡೀ ದೈಹಿಕ ಚಟುವಟಿಕೆ ಮಾಡಿ. ಯಾವುದೇ ಚಟುವಟಿಕೆ ಇಲ್ಲದೇ ಇದ್ದರೆ ದೇಹ ಜಡವಾಗುತ್ತದೆ ಮತ್ತು ಹಲವು ರೋಗಗಳು ಕಾಡುತ್ತವೆ. ಆದುದರಿಂದ ಪ್ರತಿದಿನ ವ್ಯಾಯಾಮ, ಯೋಗ ಅಥವಾ ವಾಕಿಂಗ್ ಮಾಡುವ ಅಭ್ಯಾಸವನ್ನು ರೂಢಿ ಮಾಡಿ.

ನಿದ್ದೆ ಮಾಡಲು ಸಮಯ ನಿಗದಿಪಡಿಸಿ ಪ್ರತಿದಿನ ಸರಿಯಾದ ಸಮಯಕ್ಕೆ  ಎದ್ದೇಳಿ. ಅನಗತ್ಯ ಸ್ಕ್ರೀನ್ ಟೈಮ್ ಅಂದರೆ ಟಿವಿ, ಲ್ಯಾಪ್ ಟಾಪ್, ಮೊಬೈಲ್ ಇತ್ಯಾದಿಗಳನ್ನು ಕಡಿಮೆ ಮಾಡಿ. ಇವು ನಿದ್ರೆಯ ಮೇಲೆ ಭಾರಿ ಪರಿಣಾಮ ಬೀರುತ್ತದೆ ಮತ್ತು ಕಣ್ಣಿಗೆ ಹಾನಿ ಮಾಡುವ ಸಾಧ್ಯತೆ ಕೂಡ ಹೆಚ್ಚಾಗಿದೆ.
Advertisement
Next Article