ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಈರುಳ್ಳಿ ಬೆಲೆಯು ದಿಢೀರ್‌ ಏರಿಕೆ-ಶೇ.40ರಷ್ಟುಹೆಚ್ಚಳ

03:30 PM Feb 20, 2024 IST | Bcsuddi
Advertisement

ನವದೆಹಲಿ: ಬೆಳ್ಳುಳ್ಳಿ ದರ ಏರಿಕೆಯಾಗಿದ್ದ ಬೆನ್ನಲ್ಲೇ ಇದೀಗ ಈರುಳ್ಳಿ ಬೆಲೆಯು ಏರಿಕೆಯಾಗಿದೆ. ಇದೀಗ ಬೆಲೆ ಹೆಚ್ಚಾಳದಿಂದ ಜನಸಾಮಾನ್ಯರ ಜೇಬಿಗೆ ಹೊರೆ ಬಿದ್ದಂತಾಗಿದೆ.

Advertisement

ಈರುಳ್ಳಿ ರಫ್ತು ನಿಷೇಧವನ್ನು ಕೇಂದ್ರ ಸರ್ಕಾರ ಹಿಂಪಡೆದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿರುವುದಾಗಿ ವರದಿ ತಿಳಿಸಿದೆ. ದೇಶದ ಅತೀ ದೊಡ್ಡ ಈರುಳ್ಳಿ ಮಾರುಕಟ್ಟೆಯಾದ ಲಾಸಲ್ ಗಾಂವ್ ಕೃಷಿ ಉತ್ಪಾದನಾ ಮಾರುಕಟ್ಟೆ(ಎಪಿಎಂಸಿ)ಯಲ್ಲಿ ಈರುಳ್ಳಿ ರಖಂ ಮಾರಾಟ ಬೆಲೆ ಶೇ.40ರಷ್ಟು ಏರಿಕೆ ಕಂಡಿರುವುದಾಗಿ ವರದಿಯಾಗಿದೆ.

ಈರುಳ್ಳಿ ಪ್ರತಿ ಕ್ವಿಂಟಾಲ್ ಬೆಲೆ 1,280 ರೂಪಾಯಿಯಿಂದ 1,800 ರೂಪಾಯಿಗೆ ಏರಿಕೆಯಾಗಿದೆ. ಅದೇ ರೀತಿ ಕನಿಷ್ಠ ಬೆಲೆಯ 1,000 ಹಾಗೂ ಗರಿಷ್ಠ ಬೆಲೆ ಕ್ವಿಂಟಾಲ್ ಗೆ 2,100 ರೂಪಾಯಿಗೆ ಹೆಚ್ಚಳವಾಗಿರುವುದು ಕಂಡು ಬಂದಿದೆ.ಉತ್ತರಪ್ರದೇಶದಲ್ಲಿ ಇತ್ತೀಚೆಗೆ ಬೆಳ್ಳುಳ್ಳಿ ಬೆಲೆ ಒಂದು ಕೆಜಿಗೆ 550 ರೂಪಾಯಿಗೆ ಏರಿಕೆಯಾಗಿತ್ತು.

ಈರುಳ್ಳಿ ಬೆಳೆ ಲಭ್ಯತೆ ಕುರಿತು ನಿಗಾ ಇರಿಸಿರುವುದಾಗಿ ಕೇಂದ್ರ ಸರ್ಕಾರ ತಿಳಿಸಿದ್ದು, ಅದೇ ರೀತಿ ಗ್ರಾಹಕರು ಮತ್ತು ರೈತರಿಗೆ ಹೆಚ್ಚಿನ ಲಾಭ ತರುವ ನಿಟ್ಟಿನಲ್ಲಿ ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

 

Advertisement
Next Article