For the best experience, open
https://m.bcsuddi.com
on your mobile browser.
Advertisement

ಇಸ್ರೇಲ್ ಕೆಣಕಿದ ಹಿಜ್ಬುಲ್ಲಾ ಉಗ್ರರಿಗೆ ತಕ್ಕ ಉತ್ತರ ನೀಡಿದ ಇಸ್ರೇಲ್ ಸೇನೆ – ವೈಮಾನಿಕ ದಾಳಿ ಸಾವಿನ ಸಂಖ್ಯೆ 492ಕ್ಕೆ ಏರಿಕೆ

10:47 AM Sep 24, 2024 IST | BC Suddi
ಇಸ್ರೇಲ್ ಕೆಣಕಿದ ಹಿಜ್ಬುಲ್ಲಾ ಉಗ್ರರಿಗೆ ತಕ್ಕ ಉತ್ತರ ನೀಡಿದ ಇಸ್ರೇಲ್ ಸೇನೆ – ವೈಮಾನಿಕ ದಾಳಿ ಸಾವಿನ ಸಂಖ್ಯೆ 492ಕ್ಕೆ ಏರಿಕೆ
Advertisement

ಲೆಬನಾನ್ : ಗಾಜಾದ ಹಮಾಸ್ ಉಗ್ರರಿಗೆ ಸಪೋರ್ಟ್ ಆಗಿ ನಿಂತು ಇಸ್ರೇಲ್ ಮೇಲೆ ದಾಳಿ ನಡೆಸಿದ ಹಮಾಸ್ ಉಗ್ರರಿಗೆ ಇದೀಗ ಇಸ್ರೇಲ್ ತಕ್ಕ ಉತ್ತರ ನೀಡಿದ್ದು, ಇಸ್ರೇಲ್ ವಾಯು ಸೇನೆಯ ವೈಮಾನಿಕ ದಾಳಿಗೆ  ಮೃತಪಟ್ಟವರ ಸಂಖ್ಯೆ 492ಕ್ಕೆ ಏರಿಕೆಯಾಗಿದೆ ಎಂದು ಲೆಬನಾನ್‌ನ ಆರೋಗ್ಯ ಸಚಿವಾಲಯ ತಿಳಿಸಿದೆ.

ಮೃತರಲ್ಲಿ 35 ಮಕ್ಕಳು ಮತ್ತು 58 ಮಹಿಳೆಯರೂ ಸೇರಿದ್ದಾರೆ. ಇಸ್ರೇಲ್‌ ಸೇನೆಯ ದಾಳಿಗೆ ಕಳೆದ ಒಂದು ವಾರದಲ್ಲಿ 1,645 ಮಂದಿ ಗಾಯಗೊಂಡಿದ್ದಾರೆ’ ಎಂದು ಆರೋಗ್ಯ ಸಚಿವ ಫಿರಾಸ್ ಅಬಿಯದ್‌ ಹೇಳಿದ್ದಾರೆ.
ಹಮಾಸ್ ಉಗ್ರರ ವಿರುದ್ದಇಸ್ರೇಲ್ ನಡೆಸುತ್ತಿರುವ ಯುದ್ದದ ಸಂದರ್ಭ ಹಮಾಸ್ ಉಗ್ರರಿಗೆ ಹಿಜ್ಬುಲ್ಲಾ ಬೆಂಬಲ ನೀಡಿತ್ತು, ಆದರೂ ಇಸ್ರೇಲ್ ಲೆಬನಾನ್ ಮೇಲೆ ದಾಳಿಗೆ ಮುಂದಾಗಿರಲಿಲ್ಲ. ಇತ್ತೀಚೆಗೆ ಹಿಜ್ಬುಲ್ಲಾ ಕಮಾಂಡರ್ ಗಳ ಹತ್ಯೆ ಬಳಿಕ ಹಿಜ್ಬುಲ್ಲಾ ಇಸ್ರೇಲ್ ಮೇಲೆ ದಾಳಿ ಆರಂಭಿಸಿತ್ತು, ಇಸ್ರೇಲ್ ಮತ್ತು ಲೆಬನಾನ್ ನಡುವೆ ಕೇವಲ ಮಿಲಿಟಿರಿ ನೆಲೆಗಳ ಮೇಲೆ ಮಾತ್ರ ದಾಳಿಗೆ ಒಪ್ಪಂದ ಇತ್ತು, ಆದರೆ ಹಿಜ್ಬುಲ್ಲಾ ಉಗ್ರರು ಅದನ್ನು ಮೀರಿ ಇಸ್ರೇಲ್ ನಲ್ಲಿ ಜನವಸತಿ ಪ್ರದೇಶಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದ್ದರು. ಇದು ಇಸ್ರೇಲ್ ನ್ನು ಕೆರಳಿಸಿದ್ದು, ಇದೀಗ ಇಸ್ರೇಲ್‌–ಹಮಾಸ್‌ ಯುದ್ಧ ಆರಂಭವಾದ ಬಳಿಕ, ಇಸ್ರೇಲ್‌ ಸೇನೆ ಹಿಜ್ಬುಲ್ಲಾ ಬಂಡುಕೋರರನ್ನು ಗುರಿಯಾಗಿಸಿ ಇಷ್ಟೊಂದು ದೊಡ್ಡ ಮಟ್ಟದಲ್ಲಿ ವೈಮಾನಿಕ ದಾಳಿ ನಡೆಸಿದ್ದು ಇದೇ ಮೊದಲು. ದಾಳಿಯಲ್ಲಿ ಹಮಾಸ್‌ನ ಕಮಾಂಡರ್ ಮಹಮೂದ್ ಅಲ್ ನಾದರ್ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಸೋಮವಾರದ ದಾಳಿಯೂ ಸೇರಿದಂತೆ ಹಿಜ್ಬುಲ್ಲಾ ಬಂಡುಕೋರರ 300ಕ್ಕೂ ಹೆಚ್ಚು ತಾಣಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ ಎಂದು ಇಸ್ರೇಲ್‌ ಹೇಳಿದೆ. ‘ಶತ್ರುವಿನ ದಾಳಿಗೆ ಪ್ರತ್ಯುತ್ತರವಾಗಿ ಹೈಫಾದಲ್ಲಿರುವ ಸೇನಾ ನೆಲೆಗಳನ್ನು ಗುರಿಯಾಗಿಸಿ ರಾಕೆಟ್‌ ದಾಳಿ ನಡೆಸಿದ್ದೇವೆ’ ಎಂದು ಹಿಜ್ಬುಲ್ಲಾ ಪ್ರಕಟಣೆ ತಿಳಿಸಿದೆ.

Advertisement

Author Image

Advertisement