ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಇಸ್ರೇಲ್‌ನತ್ತ ಏರ್ ಇಂಡಿಯಾ ವಿಮಾನ ಹಾರಾಟ ಸ್ಥಗಿತ..!

02:44 PM Nov 06, 2023 IST | Bcsuddi
Advertisement

ನವದೆಹಲಿ: ಇಸ್ರೇಲ್ ಮತ್ತು ಗಾಜಾಪಟ್ಟಿ ನಡುವಿನ ಯುದ್ಧ ದಿನೆ ದಿನೆ ಭೀಕರಗೊಳ್ಳುತ್ತಿರುವುದರ ಹಿನ್ನೆಲೆ ಇಸ್ರೇಲ್ ನ ರಾಜಧಾನಿ ಟೆಲ್ ಅವೀಗ್ ಗೆ ಸಂಚರಿಸುತ್ತಿದ್ದ ಏರ್ ಇಂಡಿಯಾದ ಎಲ್ಲ ವಿಮಾನಗಳ ಹಾರಾಟವನ್ನು ಭಾರತ ತಾತ್ಕಾಲಿಕವಾಗಿ ಬಂದ್ ಮಾಡಿದೆ. ಈ ಬಗ್ಗೆ ಪ್ರಕಟಣೆಯೊಂದರಲ್ಲಿ ತಿಳಿಸಿದ ಏರ್ ಇಂಡಿಯಾ, ವಾರದಲ್ಲಿ ಐದು‌ ದಿನಗಳ ಕಾಲ ಸಂಚಾರ ಮಾಡುತ್ತಿದ್ದ ಏರ್ ಇಂಡಿಯಾಕ್ಕೆ ಸೇರಿದ ಯಾವುದೇ ವಿಮಾನಗಳು ಸೋಮವಾರದಿಂದ ಈ ತಿಂಗಳ 30ರ ವರೆಗೆ ಇಸ್ರೇಲ್ ನತ್ತ ಹಾರಟ ನಡೆಸುವುದಿಲ್ಲ ಎಂದು ತಿಳಿಸಲಾಗಿದೆ. ಕಳೆದ ಒಂದು ತಿಂಗಳಿಂದಲೂ ಇಸ್ರೇಲ್ ಮತ್ತು ಹಮಾಸ್ ಉಗ್ರಗಾಮಿ ಸಂಘಟನೆಗಳ ನಡುವಿನ ಯುದ್ಧ ಹೆಚ್ಚಾಗುತ್ತಿದ್ದು, ಸಾವಿರಾರು ಮಂದಿ ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ. ಇನ್ನು, ಯುದ್ಧ ಪೀಡಿದ ಇಸ್ರೇಲ್ ನಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ರಕ್ಷಿಸಿ ಸ್ವದೇಶಕ್ಕೆ ಕರೆತರಲೆಂದು ಕೇಂದ್ರ ಆಪರೇಷನ್ "ಅಜೇಯ" ನಡೆಸಿತ್ತು. ಜೊತೆಗೆ ಭಾರತ ಪರ ಸ್ನೇಹಿ ರಾಷ್ಟ್ರವಾದ ಇಸ್ರೇಲ್ ಗೆ ಭಾರತ ತನ್ನ ಬೆಂಬಲ ಸೂಚಿತ್ತು. ಅಲ್ಲದೆ, ಇಸ್ರೇಲ್ ದಾಳಿಯಿಂದಾಗಿ ನಲುಗಿದ ಗಾಜಾಪಟ್ಟಿ ಜನತೆಗೆ ಮಾನವೀಯ ನೆರವು ಘೋಷಿಸಿತ್ತು. ಇದರ ಬೆನ್ನಲ್ಲೇ ಇದೀಗ ಭಾರತ ಇಸ್ರೇಲ್-ಭಾರತದ ನಡುವಿನ ನಾಗರಿಕರ ವಿಮಾನ ಹಾರಾಟವನ್ನು ಸ್ಥಗಿತಗೊಳಿದೆ ಎಂದು ಸಂಬಂಧಿಸಿದ ಇಲಾಖೆಯ ದೆಹಲಿ ಮೂಲಗಳು ಸ್ಪಷ್ಟಪಡಿಸಿವೆ

Advertisement

Advertisement
Next Article