ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಇಶಿತಾ ಭಾಟಿಯಾ ತನ್ನ ವೈಫಲ್ಯಳನ್ನು ಯಶಸ್ಸಿಗೆ ಬದಲಿಸಿದ್ದು ಹೇಗೆ?

09:36 AM Dec 22, 2023 IST | Bcsuddi
Advertisement

ನವದೆಹಲಿ: ಇಶಿತಾ ಭಾಟಿಯಾ ಅವರ ಕಥೆ ಆರಂಭವಾಗುವುದೇ ಹಲವಾರು ವೈಫಲ್ಯಗಳಿಂದ. ಯಾಕೆಂದರೆ ಅನೇಕ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿದ್ದರೂ ಅವರು ಯಾವುದರಲ್ಲೂ ಯಶಸ್ವಿಯಾಗಿರಲಿಲ್ಲ. ಕೊನೆಗೆ ತನ್ನ ವೈಫಲ್ಯಳನ್ನು ಯಶಸ್ಸಿಗೆ ಬದಲಾಯಿಸಿಕೊಂಡು ಐಎಫ್‌ಎಸ್ ಅಧಿಕಾರಿಯಾದರು.

Advertisement

ಹಿಮಾಚಲ ಪ್ರದೇಶದ ಪ್ರಶಾಂತ ಪಟ್ಟಣವಾದ ಹಮೀರ್‌ಪುರ್‌ನಿಂದ ಬಂದ ಇಶಿತಾ ಹಮೀರ್‌ಪುರದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ 2015 ರಿಂದ 2019 ರವರೆಗೆ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿಂಗ್ (ಇಸಿಇ) ನಲ್ಲಿ ಪದವಿಯನ್ನು ಪಡೆದರು. ಆದರೆ ಅವರ ಆಕಾಂಕ್ಷೆ ತಾಂತ್ರಿಕತೆಯಿಂದ ಬೇರೆಡೆ ಹೊರಳಿತು.

ಪ್ರಕೃತಿಯೊಂದಿಗೆ ಬೆಳೆದ ಅವರು, ಆಧ್ಯಾತ್ಮಿಕ ಒಲವು ವಿಶ್ರಣವಾಗಿ ಅದು ಕೊನೆಗೆ ಅವರನ್ನು ಭಾರತೀಯ ಅರಣ್ಯ ಸೇವೆಯ ಅಧಿಕಾರಿಯನ್ನಾಗುವತ್ತ ಮಾಡಿತು. ಮೊದಲು ಅವರು ಪ್ರಯಾಣ ಆರಂಭಿಸಿದ್ದೇ ಐಎಎಸ್ ಆಗಬೇಕೆಂಬ ಹಂಬಲದಿಂದ , ಆದರೆ ಕ್ರಮೇಣ, ನನ್ನ ಐಎಫ್‌ಎಸ್ ತರಬೇತಿಯ ಸಮಯದಲ್ಲಿ, ಬಹುಶಃ ಇದೇ ನನ್ನ ಉದ್ದೇಶವಾಗಿತ್ತು ಎಂದು ನಾನು ಅರಿತುಕೊಂಡೆ! ಎನ್ನುತ್ತಾರೆ ಇಶಿತಾ.

ಇಶಿತಾ ಅವರು ಎದುರಿಸಿದ ವೈಫಲ್ಯಗಳು:

ಐಎಫ್‌ಎಸ್ ಅಧಿಕಾರಿಯಾಗುವ ಅವರ, ದಾರಿ ಸುಗಮವಾಗಿರಲಿಲ್ಲ. ಯಾಕೆಂದರೆ UPSC ಪೂರ್ವ 2019 ಮತ್ತು 2020, RBI ಗ್ರೇಡ್ B 2020, UPSC CAPF 2020, UPSC CDS 2020, ECGC PO 2021, HP20TC2020, ಇಂಟೆಲಿಜೆನ್ಸ್ ಬ್ಯೂರೋ, A20TC20, A20TC20 ಪ್ರಿ-2019 ಸೇರಿದಂತೆ ಹಲವು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅವರು ವೈಫಲ್ಯಗಳನ್ನೇ ಅನುಭವಿಸಿದ್ದರು. ಆದರೆ ಇದೆಲ್ಲಾವೂ ಆತ್ಮಾವಲೋಕನ ಮತ್ತು ಸ್ವಯಂ-ಅನುಮಾನದ ಅವಧಿಯಾಗಿತ್ತು. ಆದರೆ ವೈಫಲ್ಯಗಳಿಂದ ಅವರು ಕುಗ್ಗಲಿಲ್ಲ, ಅದೃಷ್ಟವು ತನಗಾಗಿ ಬೇರೆ ಮಾರ್ಗವನ್ನು ಹೊಂದಿದೆ ಎಂದು ಅವರು ಆಲೋಚಿಸುತ್ತಾ ಮುಂದುವರಿದರು.

ಒಂದು ಸಮಯದಲ್ಲಿ ನಿರಾಶೆಯ ಕರಾಳತೆ ಅವರನ್ನು ಅವರಿಸಿತ್ತು. ಸಂಪೂರ್ಣ ಅವರನ್ನು ಅವರೇ ಕಳೆದುಕೊಂಡಿದ್ದರು." ಯಾವುದನ್ನಾದರೂ ಅಧ್ಯಯನ ಮಾಡುವುದನ್ನು ಬಿಡಿ, ನಾನು ನನ್ನ ಹಾಸಿಗೆಯಿಂದ ಒಂದು ಇಂಚು ಚಲಿಸಲು ಬಯಸದೇ ಇದ್ದೆ, ನನ್ನ ದೈಹಿಕ ಆರೋಗ್ಯವೂ ಹದಗೆಟ್ಟಿತ್ತು. ಬೇಕಾಬಿಟ್ಟಿ ತಿನ್ನುತ್ತಿದ್ದೆ. ಈ ವೇಳೆ ನನ್ನ ಕುಟುಂಬವೂ ನೋವಿನಲ್ಲಿತ್ತು. ನಾನು ಏನನ್ನು ಸಾಧನೆ ಮಾಡದ ಕಾರಣದಿಂದಲ್ಲ. ಅವರು ನನ್ನನ್ನು ಸಂತೋಷದಿಂದ ನೋಡಲು ಬಯಸಿದ್ದರಿಂದ! ನನ್ನ ಸಂಕಟ ಅವರಲ್ಲೂ ಎದ್ದು ಕಾಣುತ್ತಿತ್ತು. ಇದೇ ವೇಳೆ ನಾನು ಪ್ಲಾನ್ ಬಿ ಬಗ್ಗೆ ಯೋಚಿಸುತ್ತಾ, ಅವರು MBA ಮಾಡಲು ಯೋಚಿಸಿದೆ. ಇದರೊಂದಿಗೆ ಐಚ್ಛಿಕ ವೃತ್ತಿಯಾಗಿ ಬೋಧನೆಯು ಪ್ಲಾನ್ ಬಿ ಯ ಬ್ಯಾಕಪ್ ಯೋಜನೆಯಾಗಿ ಹೊರಹೊಮ್ಮಿತು.

ಎರಡು ತಿಂಗಳುಗಳು ಮತ್ತೆ ಶ್ರಮಹಾಕಿ , ಪ್ರತಿ ವಿಷಯವನ್ನು ಕ್ರಮಬದ್ಧವಾಗಿ ನಿಭಾಯಿಸಿ IFS ಮೇನ್ಸ್‌ನ ಸವಾಲನ್ನು ಎದುರಿಸಿದರು. ಟೆಲಿಗ್ರಾಮ್ ಗುಂಪುಗಳು ಅವರಲ್ಲಿದ್ದ ಅನುಮಾನಗಳನ್ನು ಪರಿಹರಿಸುವ ಅಮೂಲ್ಯವಾದ ಸಂಪನ್ಮೂಲಗಳಾಯಿತು.

ಕೊನೆಗೂ ಇಶಿತಾ ಭಾರತೀಯ ಅರಣ್ಯ ಸೇವೆ (IFS) ಅಧಿಕಾರಿಯ ಪ್ರತಿಷ್ಠಿತ ಸಮವಸ್ತ್ರವನ್ನು ಧರಿಸಿದಾಗ ಅವರ ಶ್ರಮ ಸಾರ್ಥಕವಾಯಿತು

Advertisement
Next Article