ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಇವಿಎಂ-ವಿವಿಪ್ಯಾಟ್ ಪ್ರಕರಣದ ಎಲ್ಲಾ ಅರ್ಜಿಗಳನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್‌

12:36 PM Apr 27, 2024 IST | Bcsuddi
Advertisement

ನವದೆಹಲಿ: ವಿದ್ಯುನ್ಮಾನ ಮತಯಂತ್ರ (ಇವಿಎಂ)ಗಳಲ್ಲಿ ಚಲಾವಣೆಯಾದ ಮತಗಳೊಂದಿಗೆ ವಿವಿಪ್ಯಾಟ್ ಸ್ಲಿಪ್‌ಗಳನ್ನೂ ಶೇಕಡಾ 100ರಷ್ಟು ಎಣಿಕೆ ಮಾಡಬೇಕೆಂದು ಕೋರಿ ಸಲ್ಲಿಸಲಾಗಿದ್ದ ಎಲ್ಲಾ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ ಶುಕ್ರವಾರ ವಜಾಗೊಳಿಸಿದೆ.

Advertisement

ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಾಂಕರ್ ದತ್ತಾ ಅವರ ದ್ವಿಸದಸ್ಯ ಪೀಠ ಏಕ ರೀತಿಯ ಪ್ರತ್ಯೇಕ ತೀರ್ಪುಗಳನ್ನು ಪ್ರಕಟಿಸಿದೆ. ಪ್ರಕರಣಗಳನ್ನು ಏಪ್ರಿಲ್ 18ರಂದು ಆದೇಶಗಳಿಗಾಗಿ ಕಾಯ್ದಿರಿಸಲಾಗಿದ್ದರೂ, ನ್ಯಾಯಪೀಠವು ಚುನಾವಣಾ ಆಯೋಗದಿಂದ ಕೆಲವು ತಾಂತ್ರಿಕ ಸ್ಪಷ್ಟೀಕರಣಗಳನ್ನು ಬಯಸಿದ್ದರಿಂದ ಅವುಗಳನ್ನು ಏಪ್ರಿಲ್ 24ರಂದು ಮತ್ತೆ ಪಟ್ಟಿ ಮಾಡಲಾಯಿತು.

ನೀಡಿದ ಉತ್ತರಗಳನ್ನು ಗಣನೆಗೆ ತೆಗೆದುಕೊಂಡು, ಶುಕ್ರವಾರ ಆದೇಶಗಳನ್ನು ಘೋಷಿಸಲಾಯಿತು. “ಸಮತೋಲಿತ ದೃಷ್ಟಿಕೋನ ಮುಖ್ಯವಾದರೂ, ಕಣ್ಣು ಮುಚ್ಚಿ ಒಂದು ವ್ಯವಸ್ಥೆಯನ್ನು ಶಂಕಿಸುವುದು ಸರಿಯಾಗದು, ಅರ್ಥಪೂರ್ಣ ಟೀಕೆ ಅಗತ್ಯವಿದೆ, ಅದು ನ್ಯಾಯಾಂಗ ಅಥವಾ ಶಾಸಕಾಂಗವೂ ಆಗಿರಬಹುದು. ಸಾಮರಸ್ಯ ಮತ್ತು ಎಲ್ಲಾ ಆಧಾರಸ್ಥಂಭಗಳ ಮೇಲಿನ ನಂಬಿಕೆಯ ಮೇಲೆ ಪ್ರಜಾಪ್ರಭುತ್ವ ನಿಂತಿದೆ.

ವಿಶ್ವಾಸ ಮತ್ತು ಸಹಯೋಗದ ಸಂಸ್ಕೃತಿಯನ್ನು ಪ್ರೋತ್ಸಾಹಿಸುವ ಮೂಲಕ ನಾವು ನಮ್ಮ ಪ್ರಜಾಪ್ರಭುತ್ವದ ಧ್ವನಿಯನ್ನು ಬಲಪಡಿಸಬಹುದು.,” ಎಂದು ನ್ಯಾಯಮೂರ್ತಿ ದತ್ತಾ ಹೇಳಿದರು. ಸಾಕ್ಷ್ಯವನ್ನು ಗಮನಿಸಿ ಈ ಪ್ರಕರಣದಲ್ಲಿ ನ್ಯಾಯಾಲಯ ತನ್ನ ತೀರ್ಮಾನ ಪ್ರಕಟಿಸಿದೆ ಎಂದು ಅವರು ಹೇಳಿದರು.

Advertisement
Next Article