For the best experience, open
https://m.bcsuddi.com
on your mobile browser.
Advertisement

ಇರ್ಫಾನ್ ಜೊತೆ ಡೇಟಿಂಗ್ ಹೋದಾಗ ಗೌತಮ್ ಗಂಭೀರ್ ಪದೇ ಪದೇ ಮಿಸ್ಡ್ ಕಾಲ್ ಕೊಡ್ತಿದ್ದರು-ಪಾಯಲ್ ಘೋಷ್ ಆರೋಪ

11:23 AM Dec 02, 2023 IST | Bcsuddi
ಇರ್ಫಾನ್ ಜೊತೆ ಡೇಟಿಂಗ್ ಹೋದಾಗ ಗೌತಮ್ ಗಂಭೀರ್ ಪದೇ ಪದೇ ಮಿಸ್ಡ್ ಕಾಲ್ ಕೊಡ್ತಿದ್ದರು ಪಾಯಲ್ ಘೋಷ್ ಆರೋಪ
Advertisement

ಮುಂಬೈ: ನಾನು ಇರ್ಫಾನ್ ಪಠಾಣ್ ಜೊತೆ ಡೇಟಿಂಗ್ ಹೋದಾಗ ಗೌತಮ್ ಗಂಭೀರ್ ಪದೇ ಪದೇ ಮಿಸ್ಡ್ ಕಾಲ್ ಕೊಡುತ್ತಿದ್ದರು. ನಾನು ಆಗ ಈ ವಿಷಯವನ್ನು ಇರ್ಫಾನ್ ಪಠಾಣ್ ಗಮನಕ್ಕೂ ತಂದಿದ್ದೇನೆ. ಇರ್ಪಾನ್ ನನ್ನ ಫೋನ್‌ನಲ್ಲಿ ಕರೆ ಲಾಗ್‌ಅನ್ನು ಪರಿಶೀಲಿಸಿದ್ದಾರೆ. ಹಾಗಾಗಿ ಈ ವಿಷಯ ಅವರಿಗೂ ಗೊತ್ತಿದೆ ಎಂದು ನಟಿ ಪಾಯಲ್ ಘೋಷ್ ಆರೋಪಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿರುವ ಅವರು, ಗೌತಮ್ ಗಂಭೀರ್ ಹಾಗೂ ಅಕ್ಷಯ್‌ಕುಮಾರ್ ನನ್ನ ಹಿಂದೆ ಬಿದ್ದಿದ್ದರು. ಆದರೆ ನಾನು ಕೇವಲ ಇರ್ಫಾನ್ ಪಠಾಣ್ ಅವರನ್ನು ಮಾತ್ರ ಪ್ರೀತಿಸುತ್ತಿದ್ದೆ. ನನಗೆ ಅವರನ್ನು ಬಿಟ್ಟರೆ ಬೇರೆ ಯಾರೂ ಕಣ್ಣಿಗೆ ಕಾಣುತ್ತಿರಲಿಲ್ಲ. ಅವರ ಹೊರತಾಗಿ ನಾನು ಯಾರನ್ನೂ ಪ್ರೀತಿಸಿರಲಿಲ್ಲ. ಗೌತಮ್ ಗಂಭೀರ್ ಅವರು ನನಗೆ ಪದೇ ಪದೇ ಮಿಸ್ಡ್‌ ಕಾಲ್ ಕೊಡುತ್ತಿದ್ದ ವಿಷಯವನ್ನು ನನ್ನ ಎದುರೇ ಇರ್ಫಾನ್ ಅವರು ಯೂಸೂಫ್ ಅಣ್ಣ, ಹಾರ್ದಿಕ್ ಪಾಂಡ್ಯಾ, ಕೃನಾಲ್ ಪಾಂಡ್ಯಾ ಅವರಿಗೆ ಹೇಳಿದ್ದಾರೆ. ಇವರಿಗೆಲ್ಲ ಆ ವಿಷಯ ಗೊತ್ತಿದೆ ಎಂದು ನಟಿ ಪಾಯಲ್ ಘೋಷ್ 'ಎಕ್ಸ್‌'ನಲ್ಲಿ ಬರೆದುಕೊಂಡಿದ್ದಾರೆ.

Author Image

Advertisement