For the best experience, open
https://m.bcsuddi.com
on your mobile browser.
Advertisement

ಇನ್ಫೋಸಿಸ್ ನಲ್ಲಿ 2000 ಹೊಸ ಉದ್ಯೋಗಿಗಳಿಗೆ ಕೆಲಸದ ಪ್ರಕ್ರಿಯೆ ಚಾಲನೆ.!.!

07:39 AM Aug 27, 2024 IST | BC Suddi
ಇನ್ಫೋಸಿಸ್ ನಲ್ಲಿ 2000 ಹೊಸ ಉದ್ಯೋಗಿಗಳಿಗೆ ಕೆಲಸದ ಪ್ರಕ್ರಿಯೆ ಚಾಲನೆ
Advertisement

ದೆಹಲಿ: ಆಫರ್ ನೀಡಿರುವ 2000 ಜನರಿಗೆ ಕೆಲಸ ಕೊಡುವುದಾಗಿ ಇನ್ಫೋಸಿಸ್ ಸಿಇಒ ಸಲೀಲ್ ಪರೇಖ್ ತಿಳಿಸಿದ್ದಾರೆ.

ಆಫರ್ ನೀಡಿದವರಿಗೆ ಇನ್ಫೋಸಿಸ್ ಕೆಲಸಕ್ಕೆ ಸೇರಿಸಿಕೊಳ್ಳಲಿದೆ. ಈ ಪ್ರಕ್ರಿಯೆ ದಿನಾಂಕ ಮುಂದೂಡಲಾಗಿದೆಯೇ ಹೊರತು ನೇಮಕಾತಿಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲವೆಂದು ಅವರು ಹೇಳಿದ್ದಾರೆ.

Advertisement

2022ನೇ ಬ್ಯಾಚ್ ನ 2000 ಬಿಇ ವಿದ್ಯಾರ್ಥಿಗಳ ನೇಮಕಾತಿ ಮತ್ತು ವೇತನವಿಲ್ಲದ ತರಬೇತಿ, ಅನಿರೀಕ್ಷಿತ ಹೆಚ್ಚುವರಿ ಮೌಲ್ಯಮಾಪನ ನಡೆಸುವಲ್ಲಿ ಕಂಪನಿ ವಿಳಂಬ ಮಾಡುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಐಟಿ ಮತ್ತು ಐಟಿಇಎಸ್ ಒಕ್ಕೂಟವಾದ ಎನ್ಇಟಿಇಎಸ್ ವತಿಯಿಂದ ಈ ಬಗ್ಗೆ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದಲ್ಲಿ ದೂರು ದಾಖಲಿಸಿದ್ದು, ಇದರ ಬೆನ್ನಲ್ಲೇ ಸಲೀಲ್ ಪರೇಖ್ ಸ್ಪಷ್ಟನೆ ನೀಡಿ, ಆಫರ್ ಕೊಟ್ಟಿರುವ 2,000 ಜನರಿಗೆ ಕೆಲಸ ಕೊಡುವುದಾಗಿ ತಿಳಿಸಿದ್ದಾರೆ.

Tags :
Author Image

Advertisement