ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಇನ್ಫೋಸಿಸ್‌ ಟೆಕ್ಕಿಯ ಗುಂಡಿಕ್ಕಿ ಹತ್ಯೆ - ಗೆಳೆಯ ಬಂಧನ

11:14 AM Jan 29, 2024 IST | Bcsuddi
Advertisement

ಪುಣೆ: ಇನ್ಫೋಸಿಸ್‌ನಲ್ಲಿ ಕೆಲಸ ಮಾಡುತ್ತಿದ್ದ, ಮಹಿಳಾ ಸಾಫ್ಟ್‌ವೇರ್ ಇಂಜಿನಿಯರ್‌ನ್ನು, ಆಕೆಯ ಗೆಳೆಯನೇ ಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ಪುಣೆಯ ಹೊರವಲಯದಲ್ಲಿರುವ ಓಯೋ ಹೋಟೆಲ್‌ ನಲ್ಲಿ ಶನಿವಾರ ರಾತ್ರಿ ನಡೆದಿದೆ.

Advertisement

ಮೃತ ಮಹಿಳಾ ಟೆಕ್ಕಿ ವಂದನಾ ದ್ವಿವೇದಿಯಾಗಿದ್ದು, ಆಕೆಯ ಗೆಳೆಯ ರಿಷಬ್ ನಿಗಮ್ ನನ್ನು ಬಂಧಿಸಲಾಗಿದ್ದು ಆತನಿಂದ ಪಿಸ್ತೂಲ್ ವಶಕ್ಕೆ ಪಡೆಯಲಾಗಿದೆ. ಇಬ್ಬರು ಉತ್ತರ ಭಾರತ ಮೂಲದವರಾಗಿದ್ದಾರೆ.

ಪಿಂಪ್ರಿ ಚಿಂಚ್‌ವಾಡ್‌ನ ಹಿಂಜೆವಾರಿ ಪ್ರದೇಶದ ಓಯೋ ಹೋಟೆಲ್‌ನಲ್ಲಿ ಈ ಘಟನೆ ನಡೆದಿದೆ. ಗುಂಡಿನ ದಾಳಿಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಹೋಟೆಲ್‌ಗೆ ಆಗಮಿಸಿ ಪರಿಶೀಲಿಸಿದಾಗ ಮಹಿಳೆಯ ಶವ ಕಂಡುಬಂದಿದೆ.

ಪೊಲೀಸರ ಪ್ರಕಾರ, ಇವರಿಬ್ಬರ ನಡುವೆ ಪರಸ್ಪರ ಸಂಬಂಧವಿದ್ದು, ಜಗಳವೇ ಕೊಲೆಗೆ ಕಾರಣ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಹೋಟೆಲ್‌ನ ಸಿಸಿಟಿವಿ ಫೂಟೇಜ್‌ನಲ್ಲಿ ರಿಷಬ್ ತಡರಾತ್ರಿ ಕೊಠಡಿಯಿಂದ ಹೊರಬರುವುದನ್ನು ತೋರಿಸಿದ ನಂತರ ರಿಷಬ್ ಪೊಲೀಸರು ಬಲೆ ಬೀಸಿ ಚೆಕ್‌ಪೋಸ್ಟ್‌ಗಳಲ್ಲಿ ವಾಹನ ತಪಾಸಣೆ ಪ್ರಾರಂಭಿಸಿ ಆತನನ್ನು ಬಂಧಿಸಿದ್ದಾರೆ.

"ಹೋಟೆಲ್ ರೂಂ ಬುಕ್ಕಿಂಗ್ ಅನ್ನು ವಂದನಾ ಮತ್ತು ರಿಷಭ್ ಹೆಸರಿನಲ್ಲಿ ಮಾಡಲಾಗಿದೆ. ಆದ್ದರಿಂದ ರಿಷಭ್ ನಮ್ಮ ಪ್ರಮುಖ ಶಂಕಿತ. ಹೆಚ್ಚಿನ ತನಿಖೆ ನಡೆಯುತ್ತಿದೆ" ಎಂದು ಹಿರಿಯ ಪೊಲೀಸ್ ಅಧಿಕಾರಿ ವಿಶಾಲ್ ಹಿರೇ ಮಾಧ್ಯಮಗಳಿಗೆ ತಿಳಿಸಿದ್ದಾರೆ.

Advertisement
Next Article