For the best experience, open
https://m.bcsuddi.com
on your mobile browser.
Advertisement

'ಇನ್ನು ಮುಂದೆ ಅಂಗನವಾಡಿಗಳಲ್ಲಿ ಸರ್ಕಾರಿ ಮಾಂಟೆಸರಿ, ಎಲ್‌ಕೆಜಿ, ಯುಕೆಜಿ ಟೀಚಿಂಗ್'- ಲಕ್ಷ್ಮೀ ಹೆಬ್ಬಾಳ್ಕರ್‌

05:35 PM Jun 24, 2024 IST | Bcsuddi
 ಇನ್ನು ಮುಂದೆ ಅಂಗನವಾಡಿಗಳಲ್ಲಿ ಸರ್ಕಾರಿ ಮಾಂಟೆಸರಿ  ಎಲ್‌ಕೆಜಿ  ಯುಕೆಜಿ ಟೀಚಿಂಗ್   ಲಕ್ಷ್ಮೀ ಹೆಬ್ಬಾಳ್ಕರ್‌
Advertisement

ಬೆಂಗಳೂರು: ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ ಹಿನ್ನೆಲೆ ಎಲ್​ಕೆಜಿ, ಯುಕೆಜಿ ಪ್ರಾರಂಭಕ್ಕೆ ಚಿಂತನೆ ನಡೆದಿದೆ.

ಶಾಲೆಗಳಲ್ಲಿ‌ ಮಾಡಲು ಚಿಂತನೆ ಕೊಟ್ಟಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯರು ಪ್ರತಿಭಟನೆ ಮಾಡ್ತಿದ್ದಾರೆ. ಗುಣಮಟ್ಟದ ಶಿಕ್ಷಣವನ್ನು ನೀಡಬೇಕು. ಸರ್ಕಾರಿ ಶಾಲೆಗಳಲ್ಲೇ ಎಲ್‌ಕೆಜಿ, ಯುಕೆಜಿಮಾಡಬೇಕೆಂಬ ಶಿಕ್ಷಣ ಇಲಾಖೆಯ ಕಳಕಳಿ ಇದೆ. ಆದರೆ ಅಂಗನವಾಡಿಯವರು ವಿರುದ್ಧವಿದ್ದಾರೆ. 40 ವರ್ಷಗಳಿಂದ ನಾವು ಕೆಲಸ ಮಾಡ್ತಿದ್ದೇವೆ. ಮಕ್ಕಳಿಗೆ ಕಲಿಸುವ ಕೆಲಸವೂ ಆಗ್ತಿದೆ. ಹಾಗಾಗಿ ಬೇಡ ಅನ್ನೋದು ಅವರ ವಾದ. ಈ ನಿಟ್ಟಿನಲ್ಲಿ ತಜ್ಞರ ಕಮಿಟಿ ರಚನೆ ಮಾಡುವ ಚರ್ಚೆಯಾಯ್ತು ಎಂದು ಸಚಿವೆ ಲಕ್ಷ್ಮೀ‌ ಹೆಬ್ಬಾಳ್ಕರ್ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು, 9000 ಪದವಿ ಪಡೆದ ಶಿಕ್ಷಕಿಯರು ಇದ್ದಾರೆ. ಸ್ನಾತಕ್ಕೋತ್ತರ ಪದವಿ ಪಡೆದವರು ಇದ್ದಾರೆ. ಹೀಗಾಗಿ ಸಿಎಂ ಫೈನಾರ್ನ್ ಡಿಪಾರ್ಟ್ ಮೆಂಟ್ ಅಪ್ರೂವಲ್ ಪಡೆದು ಮಾಡೋಣ ಎಂದಿದ್ದಾರೆ.

Advertisement

ಪ್ರಸ್ತುತ 2900 ಶಾಲೆಗಳಲ್ಲಿ ಸುತ್ತೋಲೆ ತಂದಿದ್ದಾರೆ. ಎಲ್ ಕೆಜಿ, ಯುಕೆಜಿ ಮಾಡೋಕೆ ಸುತ್ತೋಲೆ ಹೊರಡಿಸಿದ್ದಾರೆ, ಇದರ ಬಗ್ಗೆ ಅಂಗನವಾಡಿ ಕಾರ್ಯಕರ್ತರ ಜೊತೆ ಚರ್ಚಿಸಿದ್ದೇವೆ. ಯಾರನ್ನೂ ಕೆಲಸದಿಂದ ತೆಗೆಯೋದಿಲ್ಲ ಎಂದು ಸ್ಪಷ್ಟ ಪಡಿಸಿದರು.

Author Image

Advertisement