ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಇದೇ 18 ರಂದು ಎಲ್ಲ ಸಂಸದರ ಪ್ರಮಾಣ ವಚನ, 20 ರಂದು ಬಹುಮತ ಸಾಬೀತು?

06:20 PM Jun 11, 2024 IST | Bcsuddi
Advertisement

ದೆಹಲಿ : ಬಿಜೆಪಿಯ ವತಿಯಿಂದ 240 ಸೀಟ್ ಗಳು ಸೇರಿದಂತೆ ಎನ್ ಡಿಎ ಅಂಗ ಪಕ್ಷಗಳ 292 ಸಂಸದರ ಬೆಂಬಲ ತಮಗಿದೆ ಎಂದು ಎಪ್ಪತ್ತೆರಡು ಸಚಿವ ಖಾತೆಗಳನ್ನು ಹಂಚಿ ಸಮ್ಮಿಶ್ರ ಸರ್ಕಾರ ರಚನೆ ಮಾಡುವಲ್ಲಿ ಯಶಸ್ವಿಯಾದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಷ್ಟರಲ್ಲೇ ಲೋಕಸಭೆಯಲ್ಲಿ ಬಹುಮತ ಸಾಬೀತುಪಸುವ ಅಗ್ನಿ ಪರೀಕ್ಷೆ ಎದುರಾಗಲಿದೆ. ಜೂನ್ 9 ರಂದು ಮುವತ್ತು ಮಂದಿ ಸಂಸದರ ಕ್ಯಾಬಿನೆಟ್ ಸಚಿವರಾಗಿ ಹಾಗೂ 72 ಸಂಸದರು ಸ್ವತಂತ್ರ ಮತ್ತು ರಾಜ್ಯ ಖಾತೆಯ ಸಚಿವರಾಗಿ ರಾಷ್ಟ್ರಪತಿ ಭವನದಲ್ಲಿ ಪ್ರಮಾಣ ವಚನವನ್ನು ಸ್ವೀಕರಿಸಿದ್ದರು. ಇದರ ಬೆನ್ನಲ್ಲೇ ಸ್ಪೀಕರ್ ಅವರ ಆಯ್ಕೆ ಪ್ರಕ್ರಿಯೆ ನಡೆಯಬೇಕಿದೆ. ಅದಾದ ಬಳಿಕ ಈ ಬಾರಿ ಲೋಕಸಭೆಗೆ ಆಯ್ಕೆಯಾದ ಎಲ್ಲ 543 ಮಂದಿ ಸಂಸದರ ಪ್ರಮಾಣ ವಚನ ಕಾರ್ಯಕ್ರಮ ನಡೆಯಬೇಕಿದೆ. ಅದಕ್ಕಾಗಿ ಸರ್ಕಾರ ಸಿದ್ಧತೆ ಮಾಡಿಕೊಂಡಿದ್ದು, ಜೂನ್ 18 ರಿಂದ ಎರಡು ದಿನಗಳ ಕಾಲ ಸಂಸದರ ಪ್ರಮಾಣ ಕಾರ್ಯಕ್ರಮ, ಜೂ.20 ರಂದು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ನೇತೃತ್ವದ ಎನ್ ಡಿ ಎ ಸರ್ಕಾರದ ಬಹುಮತ ಸಾಬೀತುಪಡಿಸಲಿದ್ದಾರೆಂದು ದೆಹಲಿ ಉನ್ನತ ಮೂಲಗಳು ತಿಳಿಸಿವೆ.

Advertisement

Advertisement
Next Article