For the best experience, open
https://m.bcsuddi.com
on your mobile browser.
Advertisement

ಇದೇ ಫೆಬ್ರವರಿ 28 ರಂದು ಪಿಎಂ ಕಿಸಾನ್‌ 16ನೇ ಕಂತಿನ ಹಣ ರೈತರ ಖಾತೆಗೆ ಜಮೆ

05:20 PM Feb 22, 2024 IST | Bcsuddi
ಇದೇ ಫೆಬ್ರವರಿ 28 ರಂದು ಪಿಎಂ ಕಿಸಾನ್‌ 16ನೇ ಕಂತಿನ ಹಣ ರೈತರ ಖಾತೆಗೆ ಜಮೆ
Advertisement

ರೈತರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ. ಪಿಎಂ ಕಿಸಾನ್‌ 16ನೇ ಕಂತಿನ 2,000 ರೂ. ಸಹಾಯಧನವು ಇದೇ ಫೆಬ್ರವರಿ 28 ರಂದು ರೈತರ ಖಾತೆಗೆ ಜಮಾ ಆಗಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಪಿಎಂ ಕಿಸಾನ್‌  ವೆಬ್‌ಸೈಟ್‌ನಲ್ಲಿ ಈ ಬಗ್ಗೆ ಅಧಿಕೃತ ಮಾಹಿತಿ ನೀಡಲಾಗಿದೆ. ಫೆಬ್ರವರಿ 28ರಂದು ಪ್ರಧಾನಿ ಮೋದಿ ಅವರು 16ನೇ ಕಂತನ್ನು DBT ಮೂಲಕ ದೇಶಾದ್ಯಂತ ರೈತರ ಖಾತೆಗಳಿಗೆ ಕಳುಹಿಸಲಿದ್ದಾರೆ.

ಪಿಎಂ ಕಿಸಾನ್‌  ಯೋಜನೆಯಡಿ ಕೇಂದ್ರ ಸರ್ಕಾರ ರೈತರಿಗೆ 4 ತಿಂಗಳಿಗೊಮ್ಮೆ 2,000 ರೂ.ನಂತೆ ವಾರ್ಷಿಕ 6,000 ರೂ. ಸಹಾಯಧನ ಒದಗಿಸುತ್ತಿದೆ.

Advertisement

Author Image

Advertisement