For the best experience, open
https://m.bcsuddi.com
on your mobile browser.
Advertisement

'ಇದು ಎಕ್ಸಿಟ್‌ ಪೋಲ್‌ ಅಲ್ಲ, ಮೋದಿ ಮೀಡಿಯಾ ಪೋಲ್‌, ಫ್ಯಾಂಟಸಿ ಪೋಲ್‌ ಅಷ್ಟೇ'- ರಾಹುಲ್‌ ಟೀಕೆ

04:28 PM Jun 02, 2024 IST | Bcsuddi
 ಇದು ಎಕ್ಸಿಟ್‌ ಪೋಲ್‌ ಅಲ್ಲ  ಮೋದಿ ಮೀಡಿಯಾ ಪೋಲ್‌  ಫ್ಯಾಂಟಸಿ ಪೋಲ್‌ ಅಷ್ಟೇ   ರಾಹುಲ್‌ ಟೀಕೆ
Advertisement

ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ 7 ಹಂತಗಳಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಕೂಟಕ್ಕೆ ಬಹುಮತ ಎಂದು ಚುನಾವಣೋತ್ತರ ಸಮೀಕ್ಷೆಗಳು ಹೇಳುತ್ತಿದೆ.

ಈ ಕುರಿತು ದೆಹಲಿಯಲ್ಲಿ ಮಾತನಾಡಿರುವ ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ , ಇದು ಎಕ್ಸಿಟ್‌ ಪೋಲ್‌ ಅಲ್ಲ, ಮೋದಿ ಮೀಡಿಯಾ ಪೋಲ್‌, ಮೋದಿ ಫ್ಯಾಂಟಸಿ ಪೋಲ್‌ ಅಷ್ಟೇ ಎಂದು ಹೇಳಿದ್ದಾರೆ. ಇದೇ ವೇಳೆ ಇಂಡಿಯಾ ಒಕ್ಕೂಟ ಎಷ್ಟು ಸ್ಥಾನಗಳನ್ನು ಗೆಲ್ಲಲಿದೆ ಎಂಬ ಕುರಿತು ಪ್ರತಿಕ್ರಿಯಿಸಿದ ಅವರು, ಸಿಧು ಮೂಸೆವಾಲಾ ಅವರ ಸಾಂಗ್‌ ಕೇಳಿದ್ದೀರಲ್ಲ 295?, 295 ಸ್ಥಾನ ಬರುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಹೆಚ್ಚು ಕಡಿಮೆ ಬಿಜೆಪಿ 5 ರಾಜ್ಯಗಳಲ್ಲಿ ಕ್ವೀನ್‌ ಸ್ವೀಪ್‌ ಮಾಡಲಿದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಕೇಂದ್ರದಲ್ಲಿ ಅಧಿಕಾರಕ್ಕೆ ಏರಲು ಸರಳ ಬಹುಮತಕ್ಕೆ 272 ಸ್ಥಾನ ಬೇಕು. ಸದ್ಯ ಪ್ರಕಟವಾಗಿರುವ ಬಹುತೇಕ ಸಮೀಕ್ಷೆಗಳು ಎನ್‌ಡಿಎಗೆ 350+ ಸ್ಥಾನ ನೀಡಿವೆ. ಅದರಲ್ಲೂ ಟುಡೇಸ್‌ ಚಾಣಕ್ಯ ಬಿಜೆಪಿ 335 ± 15, ಎನ್‌ಡಿಎ 400 ± 15 ಸ್ಥಾನ ನೀಡಿದೆ.

Advertisement

ಇಂಡಿಯಾ ಟುಡೆ ಸಮೀಕ್ಷೆ ಈ ಬಾರಿಗೆ ಎನ್‌ಡಿಎಗೆ 361-401, ಇಂಡಿಯಾ ಒಕ್ಕೂಟಕ್ಕೆ 131-166, ಇತರರಿಗೆ 8-20 ಸ್ಥಾನಗಳನ್ನು ನೀಡಿದೆ. 7 ರಾಜ್ಯಗಳಲ್ಲಿ ಬಿಜೆಪಿ ಬಹುತೇಕ ಕ್ಲೀನ್‌ ಸ್ವೀಪ್‌ ಮಾಡಬಹುದು. ದಕ್ಷಿಣ ರಾಜ್ಯ ತಮಿಳುನಾಡಿನಲ್ಲಿ ಕನಿಷ್ಠ 1-3 ಖಾತೆಗಳನ್ನು ತೆರೆಯುವ ಮೂಲಕ ಐತಿಹಾಸಿಕ ಸಾಧನೆಗೆ ಬಿಜೆಪಿ ಸಾಕ್ಷಿಯಾಗಲಿದೆ ಎಂದು ಎಕ್ಸಿಟ್‌ ಪೋಲ್‌ ಹೇಳುತ್ತಿದೆ.

Author Image

Advertisement