For the best experience, open
https://m.bcsuddi.com
on your mobile browser.
Advertisement

ಇಂದು 6ನೇ ಹಂತದ ಮತದಾನ, 889 ಅಭ್ಯರ್ಥಿಗಳು ಕಣದಲ್ಲಿ

10:02 AM May 25, 2024 IST | Bcsuddi
ಇಂದು 6ನೇ ಹಂತದ ಮತದಾನ  889 ಅಭ್ಯರ್ಥಿಗಳು ಕಣದಲ್ಲಿ
Advertisement

ಬೆಂಗಳೂರು: ಭಾರತದಲ್ಲಿ ಸಾರ್ವತ್ರಿಕ ಲೋಕಸಭಾ ಚುನಾವಣೆಯು ಅಂತಿಮ ಘಟ್ಟದತ್ತ ಸಾಗಿದೆ. ಇಂದು ಶನಿವಾರ (ಮೇ 25) ದೇಶದ ಕೇಂದ್ರಾಡಳಿತ ಪ್ರದೇಶ ಒಳಗೊಂಡಂತೆ ಎಂಟು ರಾಜ್ಯಗಳಲ್ಲಿ 6ನೇ ಹಂತದ ಮತದಾನ ನಡೆಯಲಿದೆ. ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದೆ. ಸಂಜೆ 5ರವರೆಗೆ ಮತದಾರರು ಮತ ಚಲಾಯಿಸಲಿದ್ದಾರೆ.

ಇದು 08 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ವ್ಯಾಪ್ತಿಯ 58 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಒಟ್ಟು 889 ಅಭ್ಯರ್ಥಿಗಳ ಹಣೆಬರಹವನ್ನು ಇಂದು ಮತದಾರರು ಬರೆಯಲಿದ್ದಾರೆ. ಆಯಾ ರಾಜ್ಯಗಳ ಚುನಾವಣಾ ಅಧಿಕಾರಿಗಳು ಅಗತ್ಯ ಸಿದ್ಧತೆಯೊಂದಿಗೆ ಈಗಾಗಲೇ ಮತಗಟ್ಟೆಗಳಲ್ಲಿ ನಿಯೋಜನೆಗೊಂಡಿದ್ದಾರೆ. ನಂತರ ಜೂನ್ 01ರಂದು ಕೊನೆಯ ಹಂತದ ಮತದಾನ ನಡೆಯಲಿದ್ದು, ಜೂನ್ 04ರಂದು ಸಾರ್ವತ್ರಿಕ ಚುನಾವಣೆಯ ಎಲ್ಲ ಹಂತಗಳ ಫಲಿತಾಂಶವು ಪ್ರಕಟಗೊಳ್ಳಲಿದೆ.

Advertisement
Author Image

Advertisement