For the best experience, open
https://m.bcsuddi.com
on your mobile browser.
Advertisement

ಇಂದು 40,235 ಕಿ.ಮೀ‌. ವೇಗದಲ್ಲಿ ಭೂಮಿಯತ್ತ ಧಾವಿಸುತ್ತಿರುವ ಕ್ಷುದ್ರಗ್ರಹ: ನಾಸಾ ಮಾಹಿತಿ

11:10 AM Sep 15, 2024 IST | BC Suddi
ಇಂದು 40 235 ಕಿ ಮೀ‌  ವೇಗದಲ್ಲಿ ಭೂಮಿಯತ್ತ ಧಾವಿಸುತ್ತಿರುವ ಕ್ಷುದ್ರಗ್ರಹ  ನಾಸಾ ಮಾಹಿತಿ
Advertisement

ವಾಷಿಂಗ್ಟನ್: ಬೃಹತ್ ಕ್ಷುದ್ರಗ್ರಹವೊಂದು ಭೂಮಿಯತ್ತ ಭಾರೀ ಬೇಗದಲ್ಲಿ ಚಲಿಸುತ್ತಿದೆ ಎಂದು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಕೇಂದ್ರ ನಾಸಾ ತಿಳಿಸಿದೆ. 2024 ಒಎನ್ ಎಂದು ಈ ಕ್ಷುದ್ರಗ್ರಹವನ್ನು ಹೆಸರಿಸಲಾಗಿದ್ದು, ಇದು 60 ಅಂತಸ್ತಿನ ಕಟ್ಟಡದಷ್ಟು ಅಥವಾ ಸುಮಾರು 2 ಫುಟ್‍ಬಾಲ್ ಮೈದಾನಗಳ ಗಾತ್ರದಷ್ಟು ದೊಡ್ಡದಿದೆ‌. ಗಂಟೆಗೆ 40,235 ಕಿ.ಮೀ‌. ವೇಗದಲ್ಲಿ ಇದು ಭೂಮಿಯತ್ತ ಧಾವಿಸುತ್ತಿದೆ. 2024ರ ಸೆಪ್ಟಂಬರ್ 15ರಂದು ಭೂಮಿಯ ಅತ್ಯಂತ ನಿಕಟದಲ್ಲಿ ಹಾದುಹೋಗಲಿದೆ ಎಂದು ನಾಸಾ ವಿಜ್ಞಾನಿಗಳು ಹೇಳಿದ್ದಾರೆ.

2024ರ ಸೆಪ್ಟಂಬರ್ 5ರಂದು ಜಿ.ಬೊರಿಸೋವ್ ಈ ಕ್ಷುದ್ರಗ್ರಹವನ್ನು ಪತ್ತೆ ಹಚ್ಚಿದ್ದಾರೆ‌. ಕ್ಯಾಲಿಫೋರ್ನಿಯಾದಲ್ಲಿರುವ ನಾಸಾದ ಜೆಟ್ ಪ್ರೊಪಲ್ಷನ್ ಲ್ಯಾಬರೇಟರಿ ಕ್ಷುದ್ರಗ್ರಹದ ಪಥವನ್ನು ನಿಕಟವಾಗಿ ಗಮನಿಸುತ್ತಿದೆ. ಸೆಪ್ಟಂಬರ್ 15ರಂದು ಭೂಮಿಯ ಸುಮಾರು 6,20,000 ಮೈಲು ಸನಿಹದಲ್ಲಿ ಹಾದುಹೋಗಲಿದೆ. ಭೂಮಿಗೆ ಅಪ್ಪಳಿಸುವ ಸಾಧ್ಯತೆ ಬಹುತೇಕ ಇಲ್ಲ ಎಂದು ನಾಸಾ ಹೇಳಿದೆ.

Advertisement

ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ

Author Image

Advertisement