ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಇಂದು ಬೆಳಗಾವಿಗೆ ಪ್ರಧಾನಿ ಮೋದಿ ಆಗಮನ - ಮಾರ್ಗ ಬದಲಾವಣೆಗೆ ಸೂಚನೆ

10:50 AM Apr 27, 2024 IST | Bcsuddi
Advertisement

ಬೆಳಗಾವಿ: ಬೆಳಗಾವಿ ನಗರಕ್ಕೆ ಆಗಮಿಸುವ ವಾಹನಗಳಿಗೆ ಪರ್ಯಾಯ ರಸ್ತೆ ಮಾರ್ಗ ಬಳಸಿಕೊಳ್ಳುವಂತೆ ಪೋಲಿಸ್ ಆಯುಕ್ತರು ಸೂಚನೆ ನೀಡಿದ್ದಾರೆ. ಹೌದು. ಬೆಳಗಾವಿಗೆ ಇಂದು ರಾತ್ರಿ 8:50ಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುವ ಹಿನ್ನೆಲೆಯಲ್ಲಿ ರಸ್ತೆ ಮಾರ್ಗ ಬದಲಾವಣೆ ಮಾಡಿ ಬೆಳಗಾವಿ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ ಮಾರ್ಬನ್ಯಾಂಗ್ ಆದೇಶ ಹೊರಡಿಸಿದ್ದಾರೆ.

Advertisement

ನಾಳೆ ಪ್ರಧಾನಿ ನರೇಂದ್ರ ಮೋದಿ ಅವರು ಬೃಹತ್ ಸಮಾವೇಶ ಕಾರ್ಯಕ್ರಮದಲ್ಲಿ ಭಾಗಿಯಾಗಲಿರುವ ಹಿನ್ನಲೆಯಲ್ಲಿ ಇಂದು ಮತ್ತು ನಾಳೆ ರಸ್ತೆ ಸಂಚಾರ ಹಾಗೂ ಭದ್ರತೆಯಲ್ಲಿ ಲೋಪ ಆಗದಂತೆ ಪ್ರಮುಖ ರಸ್ತೆ ಮಾರ್ಗಗಳ ಬದಲಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ. ವಿವಿಧ ಜಿಲ್ಲೆ ಹಾಗೂ ತಾಲೂಕಿನಿಂದ ಬರುವ ವಾಹನಗಳು ಪರ್ಯಾಯ ಮಾರ್ಗ ಬಳಸಿಕ್ಕೊಳ್ಳುವಂತೆ ಸೂಚನೆ ನೀಡಲಾಗಿದೆ.

ಕೊಲ್ಲಾಪೂರ, ನಿಪ್ಪಾಣಿ ಕಡೆಗಳಿಂದ ಬೆಳಗಾವಿಗೆ ಬರುವ ಎಲ್ಲ ವಾಹನಗಳು ಸಂಕೇಶ್ವರ ದಿಂದ ಹುಕ್ಕೇರಿ ಮಾರ್ಗ ಬಳಸಿಕೊಳ್ಳಬೇಕು. ಎಮ್.ಕೆ. ಹುಬ್ಬಳ್ಳಿ, ಧಾರವಾಡ ಕಡೆಯಿಂದ ಬರುವ ವಾಹನಗಳು ನೇಗಿನಹಾಳ, ನೇಸರಗಿ, ಬೆಂಡಿಗೇರಿ ಕ್ರಾಸ್ ಮಾರ್ಗಗಳನ್ನು ಬಳಸಿಕೊಳ್ಳುವುದು. ನಿಪ್ಪಾಣಿ, ಕೊಲ್ಲಾಪೂರ, ಯಮಕನಮರ್ಡಿ ಕಡೆಗಳಿಂದ ಬರುವ ವಾಹನಗಳು ರಾಮ ಡಾಬಾ ಹತ್ತಿರ ಬಲತಿರುವು ಪಡೆದುಕೊಂಡು ಮುಂದೆ ಸಂಚರಿಸಬೇಕು.

ಬಾಗಲಕೋಟ ಕಡೆಯಿಂದ ಬೆಳಗಾವಿ ನಗರ ಕಡೆಗೆ ಸಂಚರಿಸುವ ವಾಹನಗಳು ನೇಸರಗಿ ಗೋಕಾಕ ಮಾರ್ಗವಾಗಿ ಸಂಚರಿಸಬೇಕು. ಬೆಳಗಾವಿ ನಗರದಿಂದ ಯಡಿಯೂರಪ್ಪ ರಸ್ತೆ ಮೂಲಕ ಅಲಾರವಾಡ ಬ್ರಿಡ್ಜ್ ಕಡೆಗೆ ಸಂಚರಿಸುವ ವಾಹನಗಳು ಬದಲಿ ಮಾರ್ಗ ಬಳಸಿಕೊಳ್ಳಬೇಕು. ಶನಿವಾರ ಹಾಗೂ ರವಿವಾರ ಎರಡು ದಿನಗಳ ಕಾಲ ರಸ್ತೆ ಮಾರ್ಗಗಳನ್ನು ಬದಲಾವಣೆ ಮಾಡಿ ಆದೇಶ ನೀಡಿದ್ದಾರೆ.

Advertisement
Next Article