For the best experience, open
https://m.bcsuddi.com
on your mobile browser.
Advertisement

ಇಂದು, ನಾಳೆ 'ಗೃಹಲಕ್ಷ್ಮಿ' ಹಣ ಖಾತೆಗೆ ಜಮೆ

04:19 PM Jun 29, 2024 IST | Bcsuddi
ಇಂದು  ನಾಳೆ  ಗೃಹಲಕ್ಷ್ಮಿ  ಹಣ ಖಾತೆಗೆ ಜಮೆ
Advertisement

ಬೆಳಗಾವಿ: ಇಂದು ಅಥವಾ ನಾಳೆ 'ಗೃಹಲಕ್ಷ್ಮಿ' ಹಣ ಖಾತೆಗೆ ಕ್ರೆಡಿಟ್ ಆಗಲಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟನೆ ನೀಡಿದ್ದಾರೆ.

ಬೆಳಗಾವಿಯಲ್ಲಿ ಮಾತನಾಡಿದ ಅವರು, "ಯಾವುದೇ ಸಂದರ್ಭದಲ್ಲಿ ಐದು ಗ್ಯಾರಂಟಿಗಳನ್ನು ನಿಲ್ಲಿಸುವುದಿಲ್ಲ. ಬಿಜೆಪಿಯವರಿಗೆ ಮಾಡಲು ಕೆಲಸ ಇಲ್ಲ, ವಿನಾ ಕಾರಣ ಆರೋಪ ಮಾಡುತ್ತಿದ್ದಾರೆ. ಅಧಿಕಾರ ಕೊಟ್ಟಾಗ ನಲವತ್ತು ಪರ್ಸಂಟ್ ಕಮಿಷನ್ ತೆಗೆದುಕೊಂಡು ಮನೆಯಲ್ಲಿ ಕುಳಿತರು" ಎಂದು ಟೀಕಿಸಿದ್ದಾರೆ.

ಇನ್ನೂ ಗೃಹಲಕ್ಷ್ಮಿ ಹಣವನ್ನು ಮೇ 1ರಂದು ಕೊಟ್ಟಿದ್ದೆವು. ಜೂನ್ ತಿಂಗಳ ಹಣ ಈಗಾಗಲೇ ಟ್ರೆಷರಿಗೆ ಹಾಕಲಾಗಿದೆ ಎಂದು ತಿಳಿಸಿದ್ದಾರೆ.

Advertisement

ಮೇ ತಿಂಗಳಲ್ಲಿ ಎಲ್ಲರ ಅಕೌಂಟ್‌ಗೆ ಗೃಹಲಕ್ಷ್ಮಿ ಹಣ ಹೋಗಿದೆ. ಕಾಂಗ್ರೆಸ್ ಪಕ್ಷದ ಸರ್ಕಾರ ಐದು ವರ್ಷ ಕಾರ್ಯಭಾರ ಮಾಡುತ್ತದೆ. ಐದು ವರ್ಷ ಕೂಡ ಗೃಹಲಕ್ಷ್ಮಿ ಮನೆ ಮನೆ ಬಾಗಿಲಿಗೆ ಹೋಗುತ್ತಾಳೆ. ಗೃಹಲಕ್ಷ್ಮಿ ಮುಂದುವರೆಯುತ್ತದೆ. ಯಾರು ಕೂಡ ಆತಂಕಕ್ಕೊಳಗಾಗುವುದು ಬೇಡ ಎಂದು ಹೇಳಿದ್ದಾರೆ

Author Image

Advertisement