ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಇಂದಿನಿಂದ ಮೂರು ದೇಶಿ ಕಾನೂನು ಜಾರಿ

09:26 AM Jul 01, 2024 IST | Bcsuddi
Advertisement

ನವದೆಹಲಿ: ಇಂದಿನಿಂದ ದೇಶದಲ್ಲಿ ಕಾನೂನು ಬದಲಾಗಲಿದೆ. ಬ್ರಿಟೀಷರ ಕಾಲದಿಂದ ಜಾರಿಯಲ್ಲಿದ್ದ ಐಪಿಸಿ (Indian Penal Code), ಸಿಆರ್‌ಪಿಸಿ (Code of Criminal Procedure), ಇಂಡಿಯನ್ ಎವಿಡೆನ್ಸ್ ಆಕ್ಟ್‌ಗೆ (Indian Evidence Act) ವಿದಾಯ ಹೇಳಿ , ಐಪಿಸಿ ಜಾಗದಲ್ಲಿ ಭಾರತೀಯ ನ್ಯಾಯ ಸಂಹಿತೆ ಸಿಆರ್‌ಪಿಸಿ ಜಾಗದಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ,ಇಂಡಿಯನ್ ಎವಿಡೆನ್ಸ್ ಆಕ್ಟ್ ಜಾಗದಲ್ಲಿ ಭಾರತೀಯ ಸಾಕ್ಷ್ಯ ಅಧಿನಿಯಮ ಜಾರಿಗೆ ಬರುತ್ತಿದೆ.

Advertisement

ಭಾರತೀಯ ನ್ಯಾಯ ಸಂಹಿತೆಯು 358 ಸೆಕ್ಷನ್ ಒಳಗೊಂಡಿದೆ. 20 ಹೊಸ ಅಪರಾಧಗಳು ಸೇರಿಸಲ್ಪಟ್ಟಿವೆ, 33 ಅಪರಾಧಗಳ ಶಿಕ್ಷೆ ಅವಧಿ ಹೆಚ್ಚಿಸಲಾಗಿದೆ. ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 531 ಸೆಕ್ಷನ್ ಒಳಗೊಂಡಿದೆ. 177 ಕಲಂಗಳನ್ನು ಬದಲಿಸಲಾಗಿದೆ. ಭಾರತೀಯ ಸಾಕ್ಷ್ಯ ಅಧಿನಿಯಮ 170 ಸೆಕ್ಷನ್ ಒಳಗೊಂಡಿದೆ.

ಈಗ ಎಷ್ಟು ಸೆಕ್ಷನ್‌ಗಳು ಇದೆ?
ಭಾರತೀಯ ದಂಡ ಸಂಹಿತೆ (IPC) 511 ಸೆಕ್ಷನ್‌ ಇದ್ದರೆ ಭಾರತೀಯ ನ್ಯಾಯ ಸಂಹಿತಾ(BNS)-358 ಸೆಕ್ಷನ್‌ಗಳು ಇದೆ.ಕ್ರಿಮಿನಲ್ ಪ್ರೊಸೀಜರ್ ಕೋಡ್ (CrPC) 484 ಸೆಕ್ಷನ್‌ಗಳು ಇದ್ದರೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ(BNSS) – 531 ಸೆಕ್ಷನ್‌ಗಳು ಇದೆ.ಭಾರತೀಯ ಸಾಕ್ಷ್ಯ ಕಾಯ್ದೆ (IEA) 167 ಸೆಕ್ಷನ್‌ಗಳು ಇದ್ದರೆ ಭಾರತೀಯ ಸಾಕ್ಷ್ಯ ಅಧಿನಿಯಮ (BSA) 170 ಸೆಕ್ಷನ್‌ಗಳು ಇದೆ.

ಹೊಸ ಕಾನೂನಿನಲ್ಲಿ ಆಗಿರುವ ಬದಲಾವಣೆ ಏನು?
1.ಪೊಲೀಸ್ ಕಸ್ಟಡಿ ಗರಿಷ್ಠ ಅವಧಿ 14ದಿನದಿಂದ 60 ದಿನಗಳವರೆಗೂ ಹೆಚ್ಚಳ.
2. 3-7 ವರ್ಷ ಶಿಕ್ಷೆಯಾಗುವ ಕೇಸ್‌ಗಳಲ್ಲಿ ದೂರು ನೀಡಿದ 24 ಗಂಟೆಯೊಳಗೆ ಎಫ್‌ಐಆರ್.
3. 3-7 ವರ್ಷ ಶಿಕ್ಷೆಯಾಗುವ ಕೇಸ್‌ಗಳ ತನಿಖೆಯನ್ನು 14 ದಿನದಲ್ಲಿ ಒಂದು ಹಂತಕ್ಕೆ ತರಬೇಕು.
4. ಏಳು ವರ್ಷಕ್ಕಿಂತ ಹೆಚ್ಚು ಶಿಕ್ಷೆ ಆಗುವ ಪ್ರಕರಣಗಳಲ್ಲಿ ಫೊರೆನ್ಸಿಕ್ ತನಿಖೆ ಕಡ್ಡಾಯ.

5.ಆರ್ಥಿಕ ಅಪರಾಧ ಕೇಸ್‌ಗಳಲ್ಲಿ ಪೊಲೀಸರಿಗೆ ಸ್ಥಿರಾಸ್ತಿ-ಚರಾಸ್ತಿ ಜಪ್ತಿ ಮಾಡುವ ಅಧಿಕಾರ.
6. ಮಹಿಳೆ, ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು 2 ತಿಂಗಳಲ್ಲಿ ತನಿಖೆ ಮುಗಿಸಬೇಕು.
7. ರೇಪ್ ಕೇಸ್‌ಗಳಲ್ಲಿ ಸಂತ್ರಸ್ತೆ ಹೇಳಿಕೆಯನ್ನು ಆಕೆಯ ಸಂಬಂಧಿಕರ ಸಮ್ಮುಖದಲ್ಲಿ ಮಹಿಳಾ ಅಧಿಕಾರಿಯ ಮುಂದೆ ಹೇಳಬೇಕು.

8. ಪೋಕ್ಸೋ ಕೇಸ್‌ಗಳಲ್ಲಿ ಸಂತ್ರಸ್ತರ ಹೇಳಿಕೆಯನ್ನು ಮಹಿಳಾ ಅಧಿಕಾರಿ ಕೂಡ ದಾಖಲಿಸಿಕೊಳ್ಳಬಹುದು.

9.ಕ್ರಿಮಿನಲ್ ಕೇಸ್ ವಿಚಾರಣೆ. ಕೋರ್ಟ್ ಗರಿಷ್ಠ 2-3 ವಾಯಿದೆಗಳನ್ನು ಮಾತ್ರ ನೀಡಬೇಕು.
10 ತನಿಖೆ, ಕೋರ್ಟ್ ಸಮನ್ಸ್‌ಗಳನ್ನು ಮಸೇಜ್‌, ವಾಟ್ಸಪ್ ಸೇರಿ ಡಿಜಿಟಲ್ ರೂಪದಲ್ಲಿಯೇ ಕಳಿಸಬಹುದು.
11 ಕೇಸ್ ನಮೂದು-ಕೋರ್ಟ್ ವಿಚಾರಣೆವರೆಗೂ ಸಂತ್ರಸ್ತರಿಗೆ ವಾಟ್ಸಪ್ ಮೂಲಕ ಪ್ರತಿಹಂತದ ಮಾಹಿತಿ.
12 ರಾಷ್ಟ್ರಮಟ್ಟದ ಡಿಜಿ ಲಾಕರ್‌ನಲ್ಲಿ ಸಾಕ್ಷಿಗಳ ಹೇಳಿಕೆ, ಆಡಿಯೋ, ವೀಡಿಯೋ ಸಾಕ್ಷ್ಯ ಭದ್ರ.
13 ರೇಡ್ ಪ್ರಕ್ರಿಯೆಯ ಕಡ್ಡಾಯ ಚಿತ್ರೀಕರಣ. 48 ಗಂಟೆಯಲ್ಲಿ ನ್ಯಾಯಾಲಯಕ್ಕೆ ವರದಿ.
14 ಸಂತ್ರಸ್ತರು ಠಾಣೆಗೆ ಹೋಗದೆಯೂ ಆನ್‌ಲೈನ್ ಮೂಲಕ ದೂರು ನೀಡಬಹುದು. ಮಹಿಳೆಯರು, ವಿಕಲಚೇತನರು, ರೋಗಿಗಳು, ಮಕ್ಕಳು, ಹಿರಿಯರು ಠಾಣೆಗೆ ಹೋಗುವ ಅಗತ್ಯವಿಲ್ಲ. ಈ ಐದು ವರ್ಗದ ಮಂದಿ ತಾವಿರುವ ಕಡೆಯೇ ಪೊಲೀಸರನ್ನು ಕರೆಸಬಹುದು.

15 ಯಾವುದೇ ಘಟನೆಯ ಮಾಹಿತಿಯನ್ನು ಆನ್‌ಲೈನ್ ಮೂಲಕ ಯಾವ ಠಾಣೆಗಾದ್ರೂ ತಿಳಿಸಬಹುದು.
16 ಝೀರೋ ಎಫ್‌ಐಆರ್; ಠಾಣಾ ವ್ಯಾಪ್ತಿ ಲೆಕ್ಕಿಸದೇ ಯಾವ ಠಾಣೆಗಾದ್ರೂ ದೂರು ಸಲ್ಲಿಸಬಹುದು.
17 ಆರೋಪಿಗಳ ಬಂಧನದ ಬಗ್ಗೆ ಅವರ ಸ್ನೇಹಿತರು, ಕುಟುಂಬ ಸದಸ್ಯರಿಗೆ ಪೊಲೀಸರು ತಿಳಿಸಬೇಕು.
18 ಆರೋಪಿಗಳಿಗೆ, ಸಂತ್ರಸ್ತರಿಗೆ ಎಫ್‌ಐಆರ್ ಕಾಪಿ ಉಚಿತವಾಗಿ ನೀಡಬೇಕು.
19ಮದುವೆ ಭರವಸೆ ನೀಡಿ ಲೈಂಗಿಕ ದೌರ್ಜನ್ಯ ಎಸಗುವವರಿಗೆ 10 ವರ್ಷಗಳವರೆಗೆ ಶಿಕ್ಷೆ.

 

Advertisement
Next Article