ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಇಂದಿನಿಂದಲೇ ಐದು ದಿನಗಳ ಕಾಲ ಬಾರ್‌ಗಳು ಬಂದ್, ಎಣ್ಣೆ ಪ್ರಿಯರಿಗೆ ಕಸಿವಿಸಿ!

01:49 PM Jun 01, 2024 IST | Bcsuddi
Advertisement

ಬೆಂಗಳೂರು: ಇದೇ ತಿಂಗಳ 3 ರಂದು ಮೇಲ್ಮನೆ ಶಿಕ್ಷಕರ ಹಾಗೂ ಪದವೀಧರ ಮತಕ್ಷೇತ್ರಗಳ ಚುನಾವಣೆ ಮತ್ತು 4 ರಂದು ಲೋಕಸಭೆ ಚುನಾವಣೆಯ ಫಲಿತಾಂಶ ಹಿನ್ನೆಲೆ ಹಾಗೂ ಜೂನ್ 5 ರಂದು ಮೇಲ್ಮನೆ ಚುನಾವಣೆಯ ಪ್ರಕಟವಾಗುವುದರಿಂದ ಒಟ್ಟು ಐದು ದಿನಗಳ ಕಾಲ ರಾಜ್ಯದಲ್ಲಿ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಸರ್ಕಾರ ಈ ಬಗ್ಗೆ ಸಾಕಷ್ಟು ಮುಂಚಿತವಾಗಿಯೇ ಸುತ್ತೋಲೆ ಹೊರಡಿಸಿದೆ.

Advertisement

ಪರಿಣಾಮ ಮೇ 31 ರಂದೇ ಎಣ್ಣೆ ಅಂಗಡಿಗೆ ಹೋಗುವವರ ಸಂಖ್ಯೆ ತುಸು ಜಾಸ್ತಿ ಇತ್ತು. ಇಂದಿನಿಂದ 5ನೇ ತಾರೀಖಿನವರೆಗೆ ಮದ್ಯ ಮಾರಾಟಕ್ಕೆ ನಿಷೇಧವಿದ್ದು ಮಧ್ಯದಲ್ಲೂ 5 ನೇ ತಾರೀಖು ಒಂದು ದಿನ ಸಾರಾಯಿ ಮಾರಾಟಕ್ಕೆ ಅವಕಾಶವಿದೆ. ಮತ್ತೆ 6ನೇ ತಾರೀಖು ವಿಧಾನಪರಿಷತ್ ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರಗಳಿಗೆ ನಡೆವ ಚುನಾವಣೆಯ ಫಲಿತಾಂಶ ಅಂದು ಹೊರ ಬೀಳಲಿರುವುದರಿಂದ ದಿನಾಂಕ 6 ರಂದು ಮದ್ಯ ಮಾರಾಟ ಇರುವುದಿಲ್ಲ.‌ ಇದರಿಂದ ವ್ಯಾಪಾರಕ್ಕೆ ದೊಡ್ಡ ಹೊಡೆತ ಬೀಳುವಂತಾಗುತ್ತೆ ಅಂತಾ ಮದ್ಯ ಮಾರಾಟಗಾರರು ತಮ್ಮ‌ ಅಳಲು ತೋಡಿಕೊಳ್ಳುತ್ತಿದ್ದರೆ, ಇತ್ತ ಮದ್ಯಪ್ರಿಯರು ಹೇಳೋದೇ ಬೇರೆಯ ಮಾತು.

ಸರ್ಕಾರ ಐದು ದಿನಗಳ ಕಾಲ ಮದ್ಯ ಮಾರಾಟವನ್ನು ಬ್ಯಾನ್ ಮಾಡಿರುವುದರಿಂದ ಎಣ್ಣೆ ಅಂಗಡಿ ಮಾಲೀಕರು ಕಳ್ಳ ಮಾರ್ಗದಲ್ಲಿ ಒಂದಕ್ಕೆ ಹತ್ತರಷ್ಟು ಹೆಚ್ಚಿನ ದರಕ್ಕೆ ಮಾರಾಟ ಮಾಡುವುದರಿಂದ ನಮ್ಮಂಥ ಎಣ್ಣೆಪ್ರಿಯರ ಜೇಬಿಗೆ ಮತ್ತಷ್ಟು ಕತ್ತರಿ ಬೀಳುವಂತಾಗುತ್ತೆ ಅಂತಾರೆ! ಚುನಾವಣೆಯ ಸಂದರ್ಭದಲ್ಲಿ ಕುಡಿದ ಮತ್ತಿನಲ್ಲಿ ಯಾವುದೇ ಅಹಿತಕರ ಘಟನೆಗಳು ಜರುಗಬಾರದೆಂಬ ಉದ್ದೇಶದಿಂದ ಸರ್ಕಾರ ಚುನಾವಣೆಯ ಮತದಾನ ಮತ್ತು ಫಲಿತಾಂಶ ಪ್ರಕಟವಾಗುವ ಸುತ್ತಮುತ್ತಲಿನ ದಿನ ಮದ್ಯ ಮಾರಾಟವನ್ನು ಬಂದ್ ಮಾಡುತ್ತೆ. ಆದರೆ, ಇದರ ಸೈಡ್ ಎಫೆಕ್ಟ್ ಕೆಲವರ ಮೇಲಾಗುತ್ತೆ ಅಷ್ಟೆ.

Advertisement
Next Article