For the best experience, open
https://m.bcsuddi.com
on your mobile browser.
Advertisement

ಇಂಡಿಗೋ ಪ್ರಯಾಣಿಕ ವಿಮಾನಕ್ಕೆ ಲಗೇಜ್ ಟ್ರ್ಯಾಕ್ಟರ್ ಡಿಕ್ಕಿ - 24 ವಿಮಾನ ಸೇವೆ ಎರಡು ದಿನಗಳವರೆಗೆ ರದ್ದು

06:32 PM Nov 21, 2023 IST | Bcsuddi
ಇಂಡಿಗೋ ಪ್ರಯಾಣಿಕ ವಿಮಾನಕ್ಕೆ ಲಗೇಜ್ ಟ್ರ್ಯಾಕ್ಟರ್ ಡಿಕ್ಕಿ   24 ವಿಮಾನ ಸೇವೆ ಎರಡು ದಿನಗಳವರೆಗೆ ರದ್ದು
Advertisement

ಚೆನ್ನೈ : ಇಂಡಿಗೋ ಏರ್ ಲೈನ್ ಎಟಿ ಆರ್ ಪ್ರಯಾಣಿಕ ವಿಮಾನಕ್ಕೆ ಲಗೇಜ್ ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಡಿಕ್ಕಿ ಹೊಡೆದ ಪರಿಣಾಮ ಚೆನ್ನೈ ಡೊಮೆಸ್ಟಿಕ್ ವಿಮಾನ ನಿಲ್ದಾಣದಿಂದ ಚೆನ್ನೈ ಹಾಗೂ ತಿರುಚ್ಚಿ ನಡುವಿನ 24 ವಿಮಾನ ಸೇವೆಗಳನ್ನು ಎರಡು ದಿನಗಳವರೆಗೆ ರದ್ದುಗೊಳಿಸಲಾಗಿದೆ. ವಿಮಾನಕ್ಕೆ ಲಗೇಜ್ ಟ್ರ್ಯಾಕ್ಟರ್ ಡಿಕ್ಕಿ ಹೊಡೆದ ತಕ್ಷಣವೇ ಬ್ಯುರೋ ಆಫ್ ಸಿವಿಲ್ ಏವಿಯೇಷನ್ಸ್ ಸೆಕ್ಯೂರಿಟಿ ವಿಮಾನದ ಸುರಕ್ಷತೆ ಬಗ್ಗೆ ಪರಿಶೀಲನೆ ನಡೆಸಿ ವಿಮಾನ ಹಾರಾಟಕ್ಕೆ ಅನರ್ಹವಾಗಿರುವುದಾಗಿ ಘೋಷಿಸಿತ್ತು. ಈ ಬಗ್ಗೆ ದೆಹಲಿಯ ನಾಗರೀಕ ವಿಮಾನ ನಿರ್ದೇಶನಾಲಯಕ್ಕೂ ಮಾಹಿತಿ ನೀಡಲಾಗಿದ್ದು, ಘಟನೆ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ. ಹಾನಿಗೊಳಲಾಗಿದ್ದ ವಿಮಾನವನ್ನು ದುರಸ್ತಿ ಪಡಿಸಲಾಗಿದ್ದು, ವಿಮಾನ ಸೇವೆ ಪುನರ್ ಆರಂಭಿಸಲಾಗುವುದು. ಪ್ರಯಾಣ ರದ್ದುಗೊಂಡಿರುವ ಪ್ರಯಾಣಿಕರಿಗೆ ಅವರ ಟಿಕೆಟ್ ದರವನ್ನು ಮರು ಪಾವತಿಸಲಾಗುವುದು ಇಂಡಿಗೋ ಏರ್ ಲೈನ್ಸ್ ತಿಳಿಸಿದೆ. ಅಪಘಾತದ ಬಗ್ಗೆ ತನಿಖೆ ನಡೆಯುತ್ತಿದ್ದು, ವಿಮಾನ ಹಾರಾಟಕ್ಕೆ ಅನುಮತಿ ದೊರೆತ ಬಳಿಕ ಮತ್ತೆ ವಿಮಾನ ಸಂಚಾರ ಪ್ರಾರಂಭವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.

Author Image

Advertisement