ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಇಂಡಿಗೋ ಪ್ರಯಾಣಿಕರೊಬ್ಬರಿಗೆ ನೀಡಿದ ಸ್ಯಾಂಡ್ವಿಚ್ ನಲ್ಲಿ ಸ್ಕ್ರೂ ಪತ್ತೆ..!

02:46 PM Feb 14, 2024 IST | Bcsuddi
Advertisement

ಬೆಂಗಳೂರು: ಇಂಡಿಗೋ ವಿಮಾನದಲ್ಲಿ ಪ್ರಯಾಣಿಕರೊಬ್ಬರು ತನಗೆ ಪ್ರಯಾಣದ ವೇಳೆ ನೀಡಿದ್ದ ಸ್ಯಾಂಡ್ವಿಚ್ ನಲ್ಲಿ ಸ್ಕ್ರೂ ಪತ್ತೆಯಾಗಿದೆ ಎಂದು ಆರೋಪಿಸಿ, ಚಿತ್ರಗಳ ಸಮೇತ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

Advertisement

ಪ್ರಯಾಣದ ವೇಳೆ ನೀಡಿದ ಸ್ಯಾಂಡ್ವಿಚ್ ನ್ನು ವಿಮಾನದಿಂದ ಹೊರಬಂದ ಬಳಿಕ ಏರ್ ಪೋರ್ಟ್ ನಲ್ಲಿ ತಿಂದಿದ್ದು, ಹೀಗಾಗಿ ಇದನ್ನು ಕ್ಯಾಬಿನ್ ಸಿಬ್ಬಂದಿಗಳ ಗಮನಕ್ಕೆ ತರಲಾಗಲಿಲ್ಲ ಎಂದು ಪೋಸ್ಟ್ ನಲ್ಲಿ ತಿಳಿಸಿದ್ದಾರೆ. ಅವರ ಪೋಸ್ಟ್ ನಲ್ಲಿ ’ಬೆಂಗಳೂರು-ಚೆನ್ನೈ ನಡುವೆ ಕಾರ್ಯನಿರ್ವಹಿಸುವ 6E-904 ವಿಮಾನದಲ್ಲಿ ಸ್ಕ್ರೂ ಇದ್ದ ಪಾಲಕ್ ಮತ್ತು ಕಾರ್ನ್ ಸ್ಯಾಂಡ್ವಿಚ್ ಅನ್ನು ನೀಡಲಾಯಿತು ’ ಎಂದು ಬರೆದುಕೊಂಡಿದ್ದಾರೆ.

ಸ್ಯಾಂಡ್ವಿಚ್ ನಲ್ಲಿ ಸ್ಕ್ರೂ ಪತ್ತೆಯಾದ ಬಗ್ಗೆ ಪ್ರಯಾಣಿಕ ವಿಮಾನದಿಂದ ಹೊರ ಬಂದ ಬಳಿಕ ಈ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್ ನಲ್ಲಿ
ಇನ್ನು ವಿಮಾನದಿಂದ ಹೊರಬಂದ ಬಳಿಕ ಪ್ರಯಾಣಿಕ ಸ್ಕ್ರೂ ಪತ್ತೆಯಾಗಿರುವ ಕುರಿತು ಪೋಸ್ಟ್ ಹಂಚಿಕೊಂಡಿರುವ ಬಗ್ಗೆ ಇಂಡಿಗೋ ಸಂಸ್ಥೆ ಪ್ರತಿಕ್ರಿಯಿಸಿದ್ದು, 'ನಮ್ಮ ವಿರುದ್ಧದ ಆರೋಪ ನಿಜವೇ ಆಗಿದ್ದಲ್ಲಿ ಕ್ಷಮೆ ಯಾಚಿಸುತ್ತೇವೆ. ಆದರೆ ಸ್ಯಾಂಡ್ವಿಚ್ ನಲ್ಲಿ ಸ್ಕ್ರೂ ಪತ್ತೆಯಾಗಿರುವ ಘಟನೆ ನಮ್ಮಲ್ಲಿ ವರದಿಯಾಗಿಲ್ಲ' ಎಂದು ತಿಳಿಸಿದೆ.

'ನಮ್ಮ ಸಂಸ್ಥೆಯ ವಿಮಾನದಲ್ಲಿನ ಊಟದ ಗುಣಮಟ್ಟ ಹಾಘೂ ನೈರ್ಮಲ್ಯದ ಉನ್ನತ ಗುಣಮಟ್ಟವನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ ಪ್ರತಿಷ್ಠಿತ ಕ್ಯಾಟರರ್ ಗಳಿಂದ ಆಹಾರ ಪಡೆಯಲಾಗುತ್ತದೆ. ಪ್ರಯಾಣಿಕರಿಗೆ ಉಂಟಾದ ತೊಂದರೆಗಾಗಿ ನಾವು ವಿಷಾದಿಸುತ್ತೇವೆ' ಎಂದು ಇಂಡಿಗೋ ಸಂಸ್ಥೆ ಪ್ರಯಾಣಿಕನ ಪೋಸ್ಟ್ ಗೆ ಪ್ರತಿಕ್ರಿಯಿಸಿದೆ.

Advertisement
Next Article