For the best experience, open
https://m.bcsuddi.com
on your mobile browser.
Advertisement

ಆಸ್ತಿ ಮಾಲೀಕರಿಗೆ ಸಿಹಿ ಸುದ್ದಿ: ಇನ್ಮುಂದೆ ಆನ್‌ಲೈನ್‌ನಲ್ಲೇ ಇ-ಖಾತೆ ಲಭ್ಯ

04:57 PM Oct 06, 2024 IST | BC Suddi
ಆಸ್ತಿ ಮಾಲೀಕರಿಗೆ ಸಿಹಿ ಸುದ್ದಿ  ಇನ್ಮುಂದೆ ಆನ್‌ಲೈನ್‌ನಲ್ಲೇ ಇ ಖಾತೆ ಲಭ್ಯ
Advertisement

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಗರವಾಸಿಗಳಿಗೆ ಆಸ್ತಿ ಖಾತಾ ಪಡೆಯುವ ಪ್ರಕ್ರಿಯೆಯನ್ನು ಸರಳಗೊಳಿಸಲು ಸಂಪರ್ಕರಹಿತ ಇ-ಖಾತಾ ವಿತರಣಾ ವ್ಯವಸ್ಥೆಯನ್ನು ಪ್ರಾರಂಭಿಸಿದೆ. ಕಂದಾಯ ಇಲಾಖೆ ರಾಜ್ಯಾದ್ಯಂತ ಆಸ್ತಿ ನೋಂದಣಿಗೆ ಇ-ಖಾತಾ ಕಡ್ಡಾಯಗೊಳಿಸಿರುವುದರಿಂದ ಬಿಬಿಎಂಪಿ ಇ-ಖಾತಾಗಳ ವಿತರಣೆಗೆ ಸರಳ ಮಾರ್ಗವನ್ನು ಆರಂಭಿಸಿದೆ. ಬಿಬಿಎಂಪಿ ಬಳಿ ಲಭ್ಯ ಇರುವ ಸುಮಾರು 21 ಲಕ್ಷ ಎ, ಬಿ ಖಾತೆಗಳ ಆಸ್ತಿಗಳ ದಾಖಲೆಗಳನ್ನು ಡಿಜಿಟಲೀಕರಣ ಮಾಡಲಾಗಿದೆ. ಅಕ್ಟೋಬರ್ 1ರಂದು ಮಂಗಳವಾರ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಫೇಸ್‌ಲೆಸ್, ಸಂಪರ್ಕರಹಿತ ಆನ್‌ಲೈನ್ ಡಿಜಿಟಲ್ ವ್ಯವಸ್ಥೆಗೆ ಚಾಲನೆ ನೀಡಿದರು. ಸಾರ್ವಜನಿಕರು https://bbmpeaasthi.Karnataka.gov.in ಲಿಂಕ್ ಮೂಲಕ ಕರಡು ಇ-ಖಾತಾ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ. ಅಂತಿಮ ಇ -ಖಾತಾವನ್ನು ಪಡೆಯಲು ಬಿಬಿಎಂಪಿಯಲ್ಲಿ ಯಾರನ್ನು ಭೇಟಿ ಮಾಡುವ ಅವಶ್ಯಕತೆ ಇರುವುದಿಲ್ಲ. ಇದು ಸಂಪೂರ್ಣವಾಗಿ ಆನ್‌ಲೈನ್ ವ್ಯವಸ್ಥೆ ಮತ್ತು ಸಂಪರ್ಕ ರಹಿತವಾಗಿದೆ. ಇ-ಖಾತೆ ಪಡೆಯಲು ಕಾವೇರಿ ತಂತ್ರಾಂಶ ಮೂಲಕ ಪಡೆಯುವ ಕ್ರಯ ಪತ್ರ ಅಥವಾ ನೋಂದಾಯಿತ ಪತ್ರದ ಸಂಖ್ಯೆ, 2004ರ ಏಪ್ರಿಲ್ 1ರಿಂದ ಈವರೆಗಿನ ಸ್ವತ್ತಿನ ಋಣಭಾರ ಪ್ರಮಾಣ ಪತ್ರ ಹಾಗೂ ಋಣ ಭಾರ ಪ್ರಮಾಣ ಪತ್ರ ಸಂಖ್ಯೆಯನ್ನು ನಮೂದಿಸಬೇಕು. ಆಸ್ತಿ ತೆರಿಗೆಯ 10 ಅಂಕಿಯ ಅರ್ಜಿ ಸಂಖ್ಯೆಯನ್ನು ನಮೂದಿಸಿ ಮಾಹಿತಿಯನ್ನು ವಿದ್ಯುನ್ಮಾನವಾಗಿ ಪಡೆಯಲಾಗುವುದು. ಮಾಲೀಕರ ಆಧಾರ್ ಇ-ಕೆವೈಸಿ, ಬೆಸ್ಕಾಂನ 10 ಅಂಕಿಯ ಖಾತಾ ಸಂಖ್ಯೆ ನಮೂದಿಸಿ ಮಾಹಿತಿಯನ್ನು ವಿದ್ಯುನ್ಮಾನವಾಗಿ ಪರಿಶೀಲಿಸಲಾಗುತ್ತದೆ. ಆಸ್ತಿಯ ಜಿಪಿಎಸ್ ಫೋಟೋ ಎ ಖಾತಾದ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ತಿಳಿಸಿದ ವಿವರಗಳನ್ನು ವಿದ್ಯುನ್ಮಾನವಾಗಿ ಒದಗಿಸಿದ ನಂತರ ತಂತ್ರಾಂಶ ಸ್ವತಃ ಎಲ್ಲ ದಾಖಲೆಗಳನ್ನು ಪರಿಶೀಲಿಸಿ ಸ್ವಯಂ ಚಾಲಿತವಾಗಿ ಅಂತಿಮ ಇ- ಖಾತೆ ನೀಡುತ್ತದೆ ಎಂದು ಹೇಳಲಾಗಿದೆ.

Author Image

Advertisement