For the best experience, open
https://m.bcsuddi.com
on your mobile browser.
Advertisement

ಆರ್‌ಬಿಐನ ನೂತನ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಮನೋರಂಜನ್ ಮಿಶ್ರಾ ನೇಮಕ

09:53 AM Nov 02, 2023 IST | Bcsuddi
ಆರ್‌ಬಿಐನ ನೂತನ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಮನೋರಂಜನ್ ಮಿಶ್ರಾ ನೇಮಕ
Advertisement

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ)ನ ನೂತನ ಕಾರ್ಯ ನಿರ್ವಾಹಕ ನಿರ್ದೇಶಕರನ್ನಾಗಿ ಮನೋರಂಜನ್ ಮಿಶ್ರಾ ಅವರನ್ನು ನೇಮಕ ಮಾಡಲಾಗಿದೆ.

ಮನೋರಂಜನ್ ಮಿಶ್ರಾ ಅವರು ಇದಕ್ಕೆ ಮೊದಲು ನಿಯಂತ್ರಣ ಇಲಾಖೆಯಲ್ಲಿ ಮುಖ್ಯ ಪ್ರಧಾನ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸುತ್ತಿದ್ದು, ಇದೀಗ ಮಿಶ್ರಾ ಅವರನ್ನು ನೇಮಕ ಮಾಡಿರುವ ಕುರಿತು ಆರ್‌ಬಿಐ ಮಾಹಿತಿ ನೀಡಿದೆ.

ಇನ್ನು ಮನೋರಂಜನ್ ಮಿಶ್ರಾ ಅವರು ಆರ್‌ಬಿಐನಲ್ಲಿ ಮೂರು ದಶಕಗಳಿಗೂ ಹೆಚ್ಚು ಅನುಭವವನ್ನು ಹೊಂದಿದ್ದು, ಬ್ಯಾಂಕ್‌ಗಳು ಮತ್ತು ಎನ್‌ಬಿಎಫ್‌ಸಿಗಳ ನಿಯಂತ್ರಣ, ಬ್ಯಾಂಕ್‌ಗಳ ಮೇಲ್ವಿಚಾರಣೆ ಮತ್ತು ಕರೆನ್ಸಿ ನಿರ್ವಹಣೆ ಕ್ಷೇತ್ರಗಳಲ್ಲಿ ಕೆಲಸ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

Advertisement

Author Image

Advertisement