For the best experience, open
https://m.bcsuddi.com
on your mobile browser.
Advertisement

ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯಲ್ಲಿ ಎಚ್‌ಡಿಕೆಗೆ ಸ್ಥಾನ

01:29 PM Jul 04, 2024 IST | Bcsuddi
ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯಲ್ಲಿ ಎಚ್‌ಡಿಕೆಗೆ ಸ್ಥಾನ
Advertisement

ನವದೆಹಲಿ: ಕೇಂದ್ರ ಸರ್ಕಾರವು ಎಂಟು ಸಂಪುಟ ಸಮಿತಿಗಳನ್ನು ಪುನರ್​ರಚನೆ ಮಾಡಿದ್ದು, ಆರ್ಥಿಕ ವ್ಯವಹಾರಗಳ ಎಲ್ಲಾ ಪ್ರಮುಖ ಸಂಪುಟ ಸಮಿತಿ ಹಾಗೂ ರಾಜಕೀಯ ವ್ಯವಹಾರಗಳ ಸಂಪುಟ ಸಮಿತಿಗಳಲ್ಲಿ ಎನ್​ಡಿಎ ಮಿತ್ರಪಕ್ಷಗಳ ಸದಸ್ಯರಿಗೆ ಅವಕಾಶ ಕಲ್ಪಿಸಿದೆ. ಅದರಂತೆ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯಲ್ಲಿ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಎಚ್.ಡಿ. ಕುಮಾರಸ್ವಾಮಿ ಸ್ಥಾನ ಪಡೆದಿದ್ದಾರೆ. ಸಮಿತಿಯಲ್ಲಿ ರಕ್ಷಣಾ ಸಚಿವ ರಾಜನಾಥ ಸಿಂಗ್, ಗೃಹ ಸಚಿವ ಅಮಿತ್ ಶಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ವಿದೇಶಾಂಗ ಸಚಿವ ಜೈ ಶಂಕರ್, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್, ವಾಣಿಜ್ಯ ಸಚಿವ ಪಿಯೂಶ್ ಗೋಯಲ್, ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಮತ್ತು ಪಂಚಾಯತ್ ರಾಜ್ ಮತ್ತು ಮೀನುಗಾರಿಕೆ ಸಚಿವ ರಾಜೀವ್ ರಂಜನ್ ಸಿಂಗ್ ಇದ್ದಾರೆ. ಭದ್ರತಾ ಸಂಪುಟ ಸಮಿತಿ, ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ, ಸಂಸದೀಯ ವ್ಯವಹಾರಗಳ ಸಂಪುಟ ಸಮಿತಿ,ರಾಜಕೀಯ ವ್ಯವಹಾರಗಳ ಸಮಿತಿ,ಹೂಡಿಕೆ ಮತ್ತು ಪ್ರಗತಿ ಸಮಿತಿ, ಕೌಶಲ, ಉದ್ಯೋಗ ಹಾಗೂ ಜೀವನೋಪಾಯ ಸಂಪುಟ ಸಮಿತಿಯ ಪುನರ್​ರಚನೆಯಾಗಿದೆ.

Author Image

Advertisement