For the best experience, open
https://m.bcsuddi.com
on your mobile browser.
Advertisement

ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ನೀಡುವ ಗರಿಕೆ ಹುಲ್ಲು

09:09 AM Jun 19, 2024 IST | Bcsuddi
ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ನೀಡುವ ಗರಿಕೆ ಹುಲ್ಲು
Advertisement

ನೆಲದ ಮೇಲೆ ಹುಲ್ಲಿನಂತೆ ಹಸಿರು ಬಣ್ಣದಲ್ಲಿ ಹರಡಿಕೊಂಡಿರುವ ಗರಿಕೆ ಹುಲ್ಲುಗಳ ಬೇರು ಎಲೆ, ಕಾಂಡವೂ ಎಲ್ಲವೂ ಭರಪೂರ ಆರೋಗ್ಯ ಗುಣಗಳನ್ನು ಹೊಂದಿವೆ. ದೇಹದಲ್ಲಿ ರೋಗ ನಿರೊಧಕ ಶಕ್ತಿಯನ್ನು ಹೆಚ್ಚಿಸುವುದರಿಂದ ಹಿಡಿದು, ಜ್ವರ, ಮೈಕೈ ನೋವು ಎಲ್ಲದಕ್ಕೂ ಪರಿಣಾಮಕಾರಿ ಮನೆಮದ್ದಾಗಿದೆ. ಋತುಮಾನದ ಜ್ವರಕ್ಕೆ ರಾಮಬಾಣ : ಹುಲ್ಲಿನಂತೆ ಕಾಣುವ ಗರಿಕೆ ಹುಲ್ಲು ಕೆಲವೇ ಗಂಟೆಗಳಲ್ಲಿ ಜ್ವರವನ್ನು ನಿವಾರಿಸಿವ ಗುಣವನ್ನು ಹೊಂದಿದೆ. ದೂರ್ವೆ ಕಷಾಯದ ಸೇವನೆಯಿಂದ ದೇಹದಲ್ಲಿರುವ ಜ್ವರದ ವೈರಸ್‌ ನಾಶವಾಗಿ ದೇಹ ಸುಸ್ಥಿತಿಗೆ ಬರುತ್ತದೆ. ದೂರ್ವೆಯನ್ನು ಕಿತ್ತು ತಂದು ನೀರಿನಲ್ಲಿ ಸ್ವಚ್ಛಗೊಳಿಸಿ. ನಂತರ ಅದನ್ನು 2 ಕಪ್‌ ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ. ಅದು ರಸವನ್ನು ಬಿಟ್ಟ ಬಳಿಕ ಅದನ್ನು ಸೋಸಿ ಅದಕ್ಕೆ ಚಿಟಿಕೆ ಸಕ್ಕರೆ ಹಾಕಿ ದಿನಕ್ಕೆ 3 ರಿಂದ 4 ನಾಲ್ಕು ಬಾರಿ ಸೇವಿಸಿ. ಇದು ಜ್ವರವನ್ನು ನಿಯಂತ್ರಣಕ್ಕೆ ತರುತ್ತದೆ.​ಮೂತ್ರನಾಳದ ಸೋಂಕನ್ನು ನಿವಾರಿಸುತ್ತದೆ : ಮೂತ್ರನಾಳದ ಸೋಂಕು, ತುರಿಕೆ, ಅಲರ್ಜಿಯಂತಹ ಸಮಸ್ಯೆಗಳಿಗೆ ಗರಿಕೆ ಪರಿಹಾರ ನೀಡುತ್ತದೆ. ಗರಿಕೆಯ ದಂಟು, ಎಲೆಯನ್ನು ತಂದು ಜಜ್ಜಿ ರಸವನ್ನು ತೆಗೆದು ಅದಕ್ಕೆ ಲಿಂಬುರಸ ಮತ್ತು ಜೇನುತುಪ್ಪವನ್ನು ಬೆರೆಸಿ ಸೇವಿಸಿದರೆ ಮೂತ್ರನಾಳಕ್ಕೆ ಸಂಬಂಧಿಸಿದ ಸಮಸ್ಯೆಗಳು ಸರಿಯಾಗುತ್ತದೆ. ಗರಿಕೆಯ ರಸದ ಸೇವನೆಯಿಂದ ರಕ್ತ ಹೀನತೆ, ಸುಸ್ತು, ನಿಶ್ಯಕ್ತಿ ಕೂಡ ದೂರವಾಗುತ್ತದೆ. ಹೀಗಾಗಿ ದಿನಕ್ಕೆ ಒಂದು ಬಾರಿಯಾದರೂ ಗರಿಕೆಯ ರಸ ಸೇವನೆ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ.​ಮಧುಮೇಹಕ್ಕೆ ಮದ್ದು : ಗರಿಕೆ ಹುಲ್ಲಿನ ರಸದ ಸೇವನೆಯಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣಕ್ಕೆ ಬರುತ್ತದೆ. ಹೀಗಾಗಿ ಮಧುಮೇಹಕ್ಕೆ ಬೆಸ್ಟ್ ಮದ್ದಾಗಿದೆ. ಮಧುಮೇಹ ಇರುವವರು ಗರಿಕೆಯ ರಸವನ್ನು ಸೇವಿಸುತ್ತ ಬಂದರೆ ಮಧುಮೇಹವನ್ನು ತಡೆಗಟ್ಟಬಹುದಾಗಿದೆ. ಇದು ಸುಲಭವಾಗಿ ಹಾಗೂ ನೈಸರ್ಗಿಕವಾಗಿ ಸಿಗುವ ಮೂಲಿಕೆಯಾಗಿದ್ದರಿಂದ ಬಳಕೆಯೂ ಸುಲಭವಾಗಿದೆ.

Author Image

Advertisement