For the best experience, open
https://m.bcsuddi.com
on your mobile browser.
Advertisement

'ಆರೋಗ್ಯ ಕ್ಷೇತ್ರ ಒಂದು ಉದ್ಯಮವಾಗಿ ಮಾರ್ಪಟ್ಟಿದೆ' - ಭಾಗವತ್ ಕಳವಳ

01:24 PM Nov 18, 2023 IST | Bcsuddi
 ಆರೋಗ್ಯ ಕ್ಷೇತ್ರ ಒಂದು ಉದ್ಯಮವಾಗಿ ಮಾರ್ಪಟ್ಟಿದೆ    ಭಾಗವತ್ ಕಳವಳ
Advertisement

ನಾಗ್ಪುರ: ಸಮಾಜದ ಸುಧಾರಣೆ ಹಾಗೂ ಒಳಿತಿಗಾಗಿ ದೇಣಿಗೆ ಸಂಗ್ರಹಿಸಲು ಅಥವಾ ಭಿಕ್ಷೆ ಬೇಡಲು ನಾನು ಎಂದಿಗೂ ಹಿಂಜರಿಯುವುದಿಲ್ಲ ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.

ನಾಗ್ಪುರದಲ್ಲಿ ಸ್ವಾಮಿ ವಿವೇಕಾನಂದ ವೈದ್ಯಕೀಯ ಮಿಷನ್ನ 50 ನೇ ವಾರ್ಷಿಕೋತ್ಸವದ ಅಂಗವಾಗಿ ಆಸ್ಪತ್ರೆಯ ನೂತನ ಹೃದ್ರೋಗ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಉದಾರವಾದ ದೇಣಿಗೆಗಳು ಉದಾತ್ತ ಕಾರಣಗಳನ್ನು ಬೆಂಬಲಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.ಸಮಾಜದ ಸುಧಾರಣೆಗೆ ದೇಣಿಗೆ ಕೇಳಲು ನಾಚಿಕೆ ಪಡಬೇಕಾಗಿಲ್ಲ.
ಹೆಚ್ಚಿನ ಒಳಿತಿಗಾಗಿ ಕೊಡುಗೆಗಳನ್ನು ಬೇಡಲು ನಾನು ಎಂದಿಗೂ ಹಿಂಜರಿಯುವುದಿಲ್ಲ ಎಂದರು.

ಇನ್ನು ದೇಶದಲ್ಲಿ ಆರೋಗ್ಯ ಕ್ಷೇತ್ರ ಒಂದು ಉದ್ಯಮವಾಗಿ ಮಾರ್ಪಟ್ಟಿದ್ದು, ಬಡವರು ದೊಡ್ಡ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಪರದಾಡುತ್ತಿದ್ದಾರೆ. ಅವರಿಗೆ ಅಗ್ಗದ ದರಗಳಲ್ಲಿ ಆರೋಗ್ಯ ಸೇವೆ ಒದಗಿಸಲು ಸರ್ಕಾರಗಳು ಯೋಜನೆ ರೂಪಿಸಬೇಕು ಎಂದು ಕಿವಿ ಮಾತು ಹೇಳಿದರು.

Advertisement

Author Image

Advertisement