ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಆದಿತ್ಯಾ ರಾಯ್ ಕಪೂರ್ ಗೆ ನಾಯಕಿಯಾಗಿ ನಟಿಸಲಿದ್ದಾರೆ ಸಮಂತಾ

12:28 PM Sep 21, 2024 IST | BC Suddi
Advertisement

ಮುಂಬೈ : ಸೌತ್ ನ ಬೆಡಗಿ ನಟಿ ಸಮಂತಾ 'ಸಿಟಾಡೆಲ್' ಬಳಿಕ ಮತ್ತೊಂದು ಬಾಲಿವುಡ್ ಪ್ರಾಜೆಕ್ಟ್ ಅನ್ನು ಒಪ್ಪಿಕೊಂಡಿದ್ದು, ನಟ ಆದಿತ್ಯಾ ರಾಯ್ ಕಪೂರ್ ಜೊತೆಗೆ ನಟಿಸಲು ತಯಾರಾಗಿದ್ದಾರೆ.

Advertisement

ವಿಜಯ್ ದೇವರಕೊಂಡ ಜೊತೆಗಿನ 'ಖುಷಿ' ಸಿನಿಮಾದ ರಿಲೀಸ್ ಆದ ಬಳಿಕ, ಅವರು ನಟಿಸುತ್ತಿದ್ದ 'ಸಿಟಾಡೆಲ್ ಹನಿ ಬನಿ' ವೆಬ್ ಸರಣಿ ಇದೇ ನವೆಂಬರ್‌ನಲ್ಲಿ ಬಿಡುಗಡೆಯಾಗಲಿದೆ. ಇದೀಗ 'ಸಿಟಾಡೆಲ್' ಬಳಿಕ ಸಮಂತಾ 'ರಕ್ತ ಬ್ರಹ್ಮಾಂಡ್' ಎಂಬ ಹೊಸ ವೆಬ್ ಸರಣಿಯಲ್ಲಿ ನಟಿಸಲಿದ್ದಾರೆ.

'ರಕ್ತ ಬ್ರಹ್ಮಾಂಡ್' ಎಂಬ ಈ ಹೊಸ ವೆಬ್ ಸರಣಿಯನ್ನು ರಾಜ್ ಮತ್ತು ಡಿಕೆ ನಿರ್ಮಾಣ ಮಾಡುತ್ತಿದ್ದು, ರಾಹಿ ಅನಿಲ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಇವರೊಂದಿಗೆ ಆದಿತ್ಯಾ ರಾಯ್ ಕಪೂರ್, ವಮಿಕಾ ಗಬ್ಬಿ, ಅಲಿ ಫಜಲ್ ಕೂಡ ನಟಿಸುತ್ತಿದ್ದಾರೆ. ಇನ್ನು ಮೊದಲ ಬಾರಿಗೆ ಆದಿತ್ಯಾ ರಾಯ್ ಕಪೂರ್ ಮತ್ತು ಸಮಂತಾ ತೆರೆಯ ಮೇಲೆ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಇವರಿಬ್ಬರ ಜೋಡಿಯ ಮೇಲೆ ಅಭಿಮಾನಿಗಳಿಗೆ ಭಾರೀ ನಿರೀಕ್ಷೆಯಿದೆ.

ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ

 

Advertisement
Next Article