For the best experience, open
https://m.bcsuddi.com
on your mobile browser.
Advertisement

ಆಡಳಿತ ನ್ಯಾಯಾಧೀಕರಣ ತರಬೇತಿ: ಪರಿಶಿಷ್ಟ ಜಾತಿಯ ಕಾನೂನು ಪದವೀಧರರಿಂದ ಅರ್ಜಿ ಆಹ್ವಾನ

07:43 AM Jun 15, 2024 IST | Bcsuddi
ಆಡಳಿತ ನ್ಯಾಯಾಧೀಕರಣ ತರಬೇತಿ  ಪರಿಶಿಷ್ಟ ಜಾತಿಯ ಕಾನೂನು ಪದವೀಧರರಿಂದ ಅರ್ಜಿ ಆಹ್ವಾನ
Advertisement

ಚಿತ್ರದುರ್ಗ: 2024-25 ನೇ ಸಾಲಿಗೆ ಆಡಳಿತ ನ್ಯಾಯಾಧೀಕರಣದಲ್ಲಿ ತರಬೇತಿ ನೀಡಲು ಪರಿಶಿಷ್ಟ ಜಾತಿಯ ಕಾನೂನು ಪದವೀಧರರನ್ನು ಆಯ್ಕೆ ಮಾಡಲು, ಪರಿಶಿಷ್ಟ ಜಾತಿಯ ಅರ್ಹ ಕಾನೂನು ಪದವೀಧರರಿಂದ ಅರ್ಜಿ ಆಹ್ವಾನಿಸಲಾಗಿದೆ

ಆಸಕ್ತ ಅಭ್ಯರ್ಥಿಗಳು www.sw.kar.nic.in ತಂತ್ರಾಂಶದಲ್ಲಿ  ಇದೇ ಜೂನ್ 18 ರಿಂದ ಅರ್ಜಿ ಸಲ್ಲಿಸಬಹುದು. ಜುಲೈ 31 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.

Advertisement

ಷರತ್ತುಗಳು: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆಯ ದಿನಾಂಕಕ್ಕೆ ಕಾನೂನು ಪದವಿಯನ್ನು ಪಡೆದು 2 ವರ್ಷ ಮೀರಿರಬಾರದು. ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕಕ್ಕೆ ಅಭ್ಯರ್ಥಿಯ ವಯಸ್ಸು 40 ವರ್ಷ ಮೀರಿರಬಾರದು. ತರಬೇತಿಯನ್ನು ಜಿಲ್ಲೆಯಲ್ಲಿಯೇ ಪಡೆದಿರಬೇಕು. ತರಬೇತಿಗೆ ಆಯ್ಕೆ ಮಾಡಲಾದ ಅಭ್ಯರ್ಥಿಗಳಿಗೆ ತರಬೇತಿ ಅವಧಿಯಲ್ಲಿ ರೂ.10,000 ಶಿಷ್ಯ ವೇತನ ನೀಡಲಾಗುವುದು. ಆಯ್ಕೆಯಾದ ಅಭ್ಯರ್ಥಿಗಳು ಜಿಲ್ಲಾ ಪಬ್ಲಿಕ್ ಪ್ರಾಸಿಕ್ಯೂಟರ್, ಸರ್ಕಾರಿ ವಕೀಲರು ಅಥವಾ 20 ವರ್ಷಗಳ ಕಾಲ ಕಡಿಮೆ ಇಲ್ಲದ ವಕೀಲ ವೃತ್ತಿಯಲ್ಲಿ ಸೇವೆ ಸಲ್ಲಿಸುತ್ತಿರುವ ನ್ಯಾಯವಾದಿಗಳ ಬಳಿ ತರಬೇತಿ ಪಡೆಯುತ್ತಿದ್ದೀರಿ ಎಂದು ಲಿಖಿತ ರೂಪದಲ್ಲಿ ತಿಳಿಸಿರಬೇಕು. ತರಬೇತಿ ಅವಧಿಯು 2 ವರ್ಷವಿದ್ದು ಮದ್ಯದಲ್ಲಿ ಬಿಡುವುದಿಲ್ಲ ಎಂದು ಅಥವಾ ಒಂದು ವೇಳೆ ಬಿಟ್ಟರೆ ತರಬೇತಿ ಅವಧಿಯಲ್ಲಿ ಪಡೆದ ಶಿಷ್ಯ ವೇತನವನ್ನು ಶೇ.10 ರಷ್ಟು ಬಡ್ಡಿಯೊಂದಿಗೆ ಸರ್ಕಾರಕ್ಕೆ ಮರುಪಾವತಿ ಮಾಡುವುದಾಗಿ ಮುಚ್ಚಳಿಕೆ ಬರೆದು ಕೊಡಬೇಕು. ಈ ನಿಯಮ ರಾಜ್ಯ ಮತ್ತು ಕೇಂದ್ರ ಸರ್ಕಾರದಲ್ಲಿ ಕೆಲಸ ಮಾಡುತ್ತಿದ್ದರೆ ಅನ್ವಯಿಸುವುದಿಲ್ಲ.  ಆಯ್ಕೆಯಾದ  ಅಭ್ಯರ್ಥಿಗಳು ಸುಳ್ಳು ಮಾಹಿತಿ ಸುಳ್ಳು ದಾಖಲೆಗಳನ್ನು ನೀಡಿ ಆಯ್ಕೆಯಾಗಿ ಶಿಷ್ಯ ವೇತನ ಪಡೆದರೆ, ಅಂತಹ ಅಭ್ಯರ್ಥಿಗಳು ತರಬೇತಿ ಅವಧಿಯಲ್ಲಿ ಪಡೆದ ಶಿಷ್ಯ ವೇತನವನ್ನು ಒಟ್ಟಿಗೆ 10% ರ ಬಡ್ಡಿಯೊಂದಿಗೆ ಸರ್ಕಾರಕ್ಕೆ ಹಿಂದಿರುಗಿಸಬೇಕು. ತಪ್ಪಿದರೆ ಭೂ ಕಂದಾಯ ಬಾಕಿ ವಸೂಲಿಯಂತೆ ವಸೂಲಿ ಮಾಡಲಾಗುತ್ತದೆ.

ಸಂದರ್ಶನ ನಡೆಯುವ ಸ್ಥಳ ಮತ್ತು ದಿನಾಂಕವನ್ನು ಅಂಚೆಯ ಮೂಲಕ ತಿಳಿಸಲಾಗುತ್ತದೆ. ಆಯ್ಕೆಯನ್ನು ಸಂದರ್ಶನದಲ್ಲಿ ಗಳಿಸುವ ಅಂಕಗಳ  ಆಧಾರದ ಮೇಲೆ ಪರಿಶೀಲಿಸಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಸಮಾಜ ಕಲ್ಯಾಣ ಇಲಾಖೆಯನ್ನು ಸಂಪರ್ಕಿಸಬಹುದು ಎಂದು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.

Tags :
Author Image

Advertisement