ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಅಸಹಜ ಲೈಂಗಿಕ ದೌರ್ಜನ್ಯ ಕೇಸ್‌: ಸೂರಜ್‌ ಪರ ಇಂದು ಜಾಮೀನು ಅರ್ಜಿ ಸಲ್ಲಿಕೆ

09:40 AM Jun 24, 2024 IST | Bcsuddi
Advertisement

ಬೆಂಗಳೂರು: ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ವಿಧಾನ ಪರಿಷತ್‌ ಸದಸ್ಯ ಸೂರಜ್‌ ರೇವಣ್ಣ ಪರ ಇಂದು ಜಾಮೀನು ಅರ್ಜಿ ಸಲ್ಲಿಸುವುದಾಗಿ ಸೂರಜ್ ಪರ ವಕೀಲ ನಿಖಿಲ್ ಕಾಮತ್ ಮಾಹಿತಿ ನೀಡಿದ್ದಾರೆ.

Advertisement

ಸೂರಜ್‌ ರೇವಣ್ಣ ಅವರನ್ನ ಬಂಧಿಸಿದ್ದ ಹಾಸನ ಹೊಳೆನರಸೀಪುರ ಪೊಲೀಸರು ಕೋರಮಂಗಲದಲ್ಲಿರುವ 42ನೇ ಎಸಿಎಂಎಂ ನ್ಯಾಯಾಧೀಶರಾದ ಶಿವಕುಮಾರ್ ಮುಂದೆ ಹಾಜರು ಪಡಿಸಿದ್ದರು. ಈ ವೇಳೆ ರಾಜು ಸರ್ಕಾರದಿಂದ ಕೇಸ್‌ ಸಿಐಡಿಗೆ ವರ್ಗಾವಣೆ ಆಗಿರುವ ಆದೇಶವಾಗಿದೆ. ಆದ್ರೆ ಅಧಿಕೃತವಾಗಿ ಕೇಸ್‌ ದಾಖಲಾಗಿಲ್ಲ. ಆದ ಕಾರಣ ಸಿಐಡಿ ಅಧಿಕಾರಿಗಳು ಭಾನುವಾರ ನ್ಯಾಯಾಧೀಶರ ಮುಂದೆ ಹಾಜರಾಗಿಲ್ಲ. ಕಸ್ಟಡಿಗೆ ಬೇಕಿದ್ದರೆ ಓಪನ್ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿ ಪಡೆಯಿರಿ ಅಂತ ನ್ಯಾಯಾಧೀಶರು ಸೂಚಿಸಿ, ನ್ಯಾಯಾಧೀಶರು ಸೂರಜ್‌ ರೇವಣ್ಣರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ಪ್ರಕಟಿಸಿದರು.

ಸಂತ್ರಸ್ತನ ವಿರುದ್ಧ ನೀಡಿದ್ದ ದೂರಿಗೆ ಸಾಕ್ಷಿ ನೀಡಲು ಸೂರಜ್ ರೇವಣ್ಣ ಶನಿವಾರ ಸಂಜೆ ಹಾಸನದ ಸೆನ್ ಠಾಣೆಗೆ ತೆರಳಿದ್ದರು. ಈ ವೇಳೆ ಸೂರಜ್ ರೇವಣ್ಣರನ್ನ ವಶಕ್ಕೆ ಪಡೆದ ಹಾಸನ ಪೊಲೀಸರು ಮುಂಜಾನೆಯವರೆಗೂ ಸುದೀರ್ಘ ವಿಚಾರಣೆಗೆ ಒಳಪಡಿಸಿದರು. ಭಾನುವಾರ ಬೆಳಗ್ಗಿನ ಜಾವ ಸೂರಜ್‌ರನ್ನ ಅಧಿಕೃತವಾಗಿ ಬಂಧಿಸಿದರು.

 

Advertisement
Next Article