ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮದಿಂದ ಸ್ವಯಂ ಉದ್ಯೋಕ್ಕಾಗಿ ಸಾಲ, ಸಹಾಯಧನಕ್ಕೆ ಅರ್ಜಿ ಆಹ್ವಾನ
ದಾವಣಗೆರೆ; ಪ್ರಸಕ್ತ ಸಾಲಿನ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮ ವತಿಯಿಂದ ಅಲ್ಪಸಂಖ್ಯಾತರಾದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ದ, ಸಿಖ್ಖರು, ಪಾರ್ಸಿಗಳು ಹಾಗೂ ಆಂಗ್ಲೋ ಇಂಡಿಯಾನ್ ಜನಾಂಗಕ್ಕೆ ಸೇರಿದವರು ಸ್ವಯಂ ಉದ್ಯೋಗ ಯೋಜನೆಗೆ ಸಾಲ, ಸಹಾಯಧನ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.
ಸ್ವಯಂ ಉದ್ಯೋಗ ಯೋಜನೆಯ ವಿವರ: ವ್ಯಾಪಾರ, ಸಣ್ಣ ಪ್ರಮಾಣದ ಗುಡಿ ಕೈಗಾರಿಕೆ, ಸೇವಾ ಕ್ಷೇತ್ರ, ಕೃಷಿ ಆಧಾರಿತ ಚಟುವಟಿಕೆಗಳನ್ನು ಪ್ರಾರಂಭಿಸಲು ಸಾಲ ಮತ್ತು ಸಹಾಯಧನ ಪಡೆಯಬಹುದು. ಘಟಕದ ವೆಚ್ಚದ ಶೇ.33 ರಷ್ಟು ಅಥವಾ ಗರಿಷ್ಠ ಮಿತಿ ರೂ.1 ಲಕ್ಷದ ಸಹಾಯಧನ ನೀಡಲಾಗುವುದು. ಅರ್ಜಿ ಸಲ್ಲಿಸಲು ಫೆ.29 ಕೊನೆಯ ದಿನವಾಗಿರುತ್ತದೆ. ಅರ್ಜಿಯನ್ನು ವೆಬ್ ಸೈಟ್ ವಿಳಾಸ https://kmdconline.karnataka.gov.in ದಲ್ಲಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವ್ಯವಸ್ಥಾಪಕರು, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮ(ನಿ), ಕುರುಬರ ಹಾಸ್ಟೆಲ್ ಕಟ್ಟಡ ಜಯದೇವ ಸರ್ಕಲ್ ಹತ್ತಿರ, ಹದಡಿ ರಸ್ತೆ, ದಾವಣಗೆರೆ-577002 ದೂ.ಸಂ:08192-232349 ನ್ನು ಸಂಪರ್ಕಿಸಲು ನಿಗಮದ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.