ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಅಲೆಮಾರಿ ಜನಾಂಗಕ್ಕೆ ಸೂರು ಕಲ್ಪಿಸಿ : ಕೆ ವೀರೇಶ್.!

07:49 AM Sep 06, 2024 IST | BC Suddi
Advertisement

ದಾವಣಗೆರೆ: ಅಲೆಮಾರಿ ಜನಾಂಗದವರಿಗೆ ಸೂಕ್ತ ಸೌಲಭ್ಯ ಕಲ್ಪಿಸಬೇಕೆಂದು ಜಿಲ್ಲಾ ಅನುಷ್ಠಾನ ಸಮಿತಿ ಸದಸ್ಯರು ಹಾಗೂ ವಕೀಲರಾದ ಕೆ. ವೀರೇಶ್ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಅಪರ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು.

Advertisement

ಹೊನ್ನಾಳಿ ನಗರ ಹಾಗೂ ದೇವನಾಯಕನಹಳ್ಳಿಯಲ್ಲಿ ಸುಮಾರು 40 ವರ್ಷಗಳಿಂದ ಟೆಂಟು, ಗುಡಾರ,ಗುಡಿಸಲುಗಳನ್ನು ನಿರ್ಮಿಸಿಕೊಂಡು ಸುಮಾರು 60ಕ್ಕೂ ಅಧಿಕ ಪರಿಶಿಷ್ಟ ಜಾತಿಯ ಅಲೆಮಾರಿ ಸಿಳ್ಳೇಕ್ಯಾತಸ್‌, ಹಂಡಿಜೋಗಿ/ಜೋಗಿ ಹಾಗೂ ಬುಡ್ಗಜಂಗಮ ಸಮುದಾಯದವರು ವಾಸ ಮಾಡುತ್ತಿದ್ದಾರೆ. ಇವರಿಗೆ ಸ್ವಂತ ನಿವೇಶನ ಕೂಡ ಇಲ್ಲಾ ಈ ಸಮುದಾಯದ ಹಿಂದುಳಿದಿದ್ದು ನಿವೇಶನ ಮತ್ತು ವಸತಿ ಕಲ್ಪಿಸಬೇಕೆಂದು ಒತ್ತಾಯಿಸಲಾಯಿತು. ಇರಲು ಸ್ವಂತ ಜಾಗವಿಲ್ಲದೆ  ಅತ್ಯಂತ ಸಂಕಷ್ಟದಲ್ಲಿ ಬದುಕಿರುತ್ತಿದ್ದಾರೆ. 15/20 ಅಡಿಯ ಜಾಗದ ಮನೆಯಲ್ಲಿ ಎರಡು- ಮೂರು ಕುಟುಂಬದ ಒಟ್ಟು 10-15 ಜನ ಯಾವುದೇ ಮೂಲಭೂತ ಸೌಕರ್ಯಗಳಿಲ್ಲದೇವಾಸಿಸುತ್ತಿದ್ದಾರೆ.

ಇಂತಹ ಅಲೆಮಾರಿ ಕುಟುಂಬಗಳಿಗೆ ಹೊನ್ನಾಳಿ ತಾಲ್ಲೂಕಿನ ಸುಂಕದಕಟ್ಟೆ ಸಮೀಪದ ಮಲ್ಲದೇವರಕಟ್ಟೆ ಬೇಚಾರಕ ಗ್ರಾಮದಲ್ಲಿ ನಿರ್ಮಿಸುತ್ತಿರುವ ಆಶ್ರಯ ಯೋಜನೆಯಡಿ ನಿವೇಶನಹಂಚಿಕೆಯಲ್ಲಿ ಈ ಪ.ಜಾತಿಯ ಅಲೆಮಾರಿಗಳಿಗೆ ಮೊದಲ ಆದ್ಯತೆಯ ಮೇಲೆ ನಿವೇಶನ ಕಾಯ್ದಿರಿಸಿಕುಟುಂಬಗಳಿಗೆ ಶಾಶ್ವತ ರಹಿತ ಅಲೆಮಾರಿ ಹಂಚಿಕೆ ಮಾಡಿ ವಸತಿ ದೊರಕಿಸಿಕೊಡಬೇಕೆಂದು ಒತ್ತಾಯ ಮಾಡಲಾಯಿತು.ಸಂದರ್ಭದಲ್ಲಿಕುಮಾರ್, ವೀರೇಶವೇಶಗಾರ್, ರಮೇಶ ಚನ್ನದಾಸ, ಮಣಿಕಂಠ, ಸುರೇಶ ದೊಂಬರ ನಲ್ಲೂರು, ರಾಜಪ್ಪ ಸಿಳೇಕ್ಯಾತಸ್,ಮುಂತಾದವರು ಉಪಸ್ಥಿತರಿದ್ದರು

 

Tags :
ಅಲೆಮಾರಿ ಜನಾಂಗಕ್ಕೆ ಸೂರು ಕಲ್ಪಿಸಿ : ಕೆ ವೀರೇಶ್.!
Advertisement
Next Article