For the best experience, open
https://m.bcsuddi.com
on your mobile browser.
Advertisement

ಅಲಾಸ್ಕಾ ಏರ್‌ಲೈನ್ಸ್: ಹಾರಾಟದ ವೇಳೆ ತೆರೆದುಕೊಂಡ ವಿಮಾನ ಬಾಗಿಲು, ಮುಂದೇನಾಯ್ತು?

12:41 PM Jan 06, 2024 IST | Bcsuddi
ಅಲಾಸ್ಕಾ ಏರ್‌ಲೈನ್ಸ್  ಹಾರಾಟದ ವೇಳೆ ತೆರೆದುಕೊಂಡ ವಿಮಾನ ಬಾಗಿಲು  ಮುಂದೇನಾಯ್ತು
Advertisement

ಪೋರ್ಟ್ಲ್ಯಾಂಡ್: ಟೇಕ್-ಆಫ್ ಆದ ಕೆಲವೇ ನಿಮಿಷಗಳಲ್ಲಿ ವಿಮಾನದ ಬಾಗಿಲು ತೆರೆದುಕೊಂಡ ಕಾರಣ ಅಲಾಸ್ಕಾ ಏರ್‌ಲೈನ್ಸ್ ಬೋಯಿಂಗ್ 737-9 MAX ಶುಕ್ರವಾರದಂದು ಒರೆಗಾನ್‌ನಲ್ಲಿ ತುರ್ತು ಭೂಸ್ಪರ್ಶ ಮಾಡಬೇಕಾಯಿತು. ಪ್ರಯಾಣಿಕರು ಚಿತ್ರೀಕರಿಸಿದ ವೀಡಿಯೊಗಳು ಮಧ್ಯ-ಕ್ಯಾಬಿನ್ ನಿರ್ಗಮನ ಬಾಗಿಲು ವಿಮಾನದಿಂದ ಸಂಪೂರ್ಣವಾಗಿ ಬೇರ್ಪಟ್ಟಿರುವುದನ್ನು ತೋರಿಸುತ್ತವೆ.

ಘಟನೆಯಲ್ಲಿ ಪ್ರಯಾಣಿಕರು ಗಾಯಗೊಂಡಿರುವ ಬಗ್ಗೆ ಸ್ಪಷ್ಟವಾದ ಮಾಹಿತಿ ಲಭಿಸಿಲ್ಲ, ಆದರೆ ಈ ಘಟನೆ ಬಗ್ಗೆ ತನಿಖೆನ್ ನಡೆಸಲಾಗುತ್ತಿದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ. ವಿಮಾನದಲ್ಲಿ 174 ಪ್ರಯಾಣಿಕರು ಹಾಗೂ 6 ಸಿಬ್ಬಂದಿಗಳಿದ್ದು ಪೋರ್ಟ್ಲ್ಯಾಂಡ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಮಾಡಲಾಗಿದೆ" ಎಂದು ಏರ್ಲೈನ್ಸ್ ಹೇಳಿಕೆಯಲ್ಲಿ ತಿಳಿಸಿದೆ.

ಹಾರಾಟದ ಸಮಯದಲ್ಲಿ ವಿಮಾನವು ಗರಿಷ್ಠ 16,325 ಅಡಿ (4,876 ಮೀಟರ್) ಎತ್ತರಕ್ಕೆ ಏರಿದ್ದು, ನಂತರ ವಿಮಾನ ಲ್ಯಾಂಡಿಗ್ ಮಾಡಲು ಆರಂಭಿಸಿತು ಎಂದು ವಿಮಾನ ಚಲನೆಯ ರಿಯಲ್ ಟೈಮ್ ಮಾನಿಟರ್ Flightradar24 ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ತಿಳಿಸಿದೆ.

Advertisement

Author Image

Advertisement