ಅರುಣಾಚಲ ಪ್ರದೇಶದ 8 ಮತಗಟ್ಟೆಗಳಲ್ಲಿ ಏ.26ರಂದು ಮರು ಮತದಾನಕ್ಕೆ ಆದೇಶ
12:37 PM Apr 22, 2024 IST
|
Bcsuddi
Advertisement
ಇಟಾನಗರ: ಏಪ್ರಿಲ್ 19ರಂದು ಅರುಣಾಚಲ ಪ್ರದೇಶದಲ್ಲಿ ಏಕಕಾಲಕ್ಕೆ ನಡೆದ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ ವೇಳೆ ನಡೆದ ಮತದಾನದ ಸಂದರ್ಭ ಇವಿಎಂಗೆ ಹಾನಿ ಮತ್ತು ಹಿಂಸಾಚಾರ ನಡೆದಿದ್ದ 8 ಮತಗಟ್ಟೆಗಳಲ್ಲಿ ಮರು ಮತದಾನ ನಡೆಸುವಂತೆ ಭಾರತೀಯ ಚುನಾವಣಾ ಆಯೋಗ ಆದೇಶ ಹೊರಡಿಸಿದೆ.
Advertisement
ಚುನಾವಣಾ ಆಯೋಗವು ಈ 8 ಮತಗಟ್ಟೆಗಳಲ್ಲಿ ನಡೆದಿರುವ ಮತದಾನವನ್ನು ಅನೂರ್ಜಿತಗೊಳಿಸಿದೆ. ಜೊತೆಗೆ ಏಪ್ರಿಲ್ 26ರಂದು ಬೆಳಿಗ್ಗೆ 6ರಿಂದ 2 ಗಂಟೆವರೆಗೆ ಮರುಮತದಾನಕ್ಕೆ ಆದೇಶಿಸಲಾಗಿದೆ ಎಂದು ಉಪ ಮುಖ್ಯ ಚುನಾವಣಾಧಿಕಾರಿ ಲಿಕೆನ್ ಕೊಯು ಮಾಹಿತಿ ನೀಡಿದ್ದಾರೆ.
ಪೂರ್ವ ಕಮೆಂಗ್ ಜಿಲ್ಲೆಯ ಬಮೆಂಗ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸರಿಯೋ, ಕುರುಂಗ್ ಕುಮೆಯ ನ್ಯಾಪಿನ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಲಾಂಗ್ ಲೋಥ್, ಡಿಂಗ್ರರ್, ಬೋಗಿಯಾ ಸಿಯುಮ್, ಜಿಂಬಾರಿ ಮತ್ತು ಮೇಲ್ ಸುಬಾನ್ಸಿರಿ ಜಿಲ್ಲೆಯ ನಾಚೋ ಕ್ಷೇತ್ರ ವ್ಯಾಪ್ತಿಯಲ್ಲಿರುವ ಲೆಂಗಿ ಮತಗಟ್ಟೆಗಳಲ್ಲಿ ಮರು ಮತದಾನ ನಡೆಸುವಂತೆ ಆದೇಶಿಸಲಾಗಿದೆ.
Next Article