ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಅರಿಶಿನಶಾಸ್ತ್ರ ಯಾಕೆ ಮಾಡ್ತಾರೆ ಗೊತ್ತಾ..?

09:56 AM Dec 22, 2023 IST | Bcsuddi
Advertisement
ಅರಿಶಿನದ ಮಹತ್ವ ಎಲ್ಲರಿಗೂ ತಿಳಿದಿರುವಂತೆ ಅರಿಶಿನ ಅಡುಗೆಗೆ ಮಾತ್ರವಲ್ಲ, ಸೌಂದರ್ಯ, ಆರೋಗ್ಯಕ್ಕೂ ಉಪಕಾರಿ.ಜೊತೆಗೆ ಹಿಂದೂ ವಿವಾಹದಲ್ಲಿ ವಿಶೇಷ ಸ್ಥಾನವನ್ನು ಹೊಂದಿದೆ. ಮದುವೆಗೆ ಮುಂಚಿತವಾಗಿ ಅರಿಶಿನದ ಕೊರಡನ್ನು ಕುಟ್ಟಿ ಪುಡಿ ಮಾಡಿ, ಪೇಸ್ಟ್‌ ಮಾಡಿ ಅದನ್ನು ವಧು ವರರಿಗೆ ಹಚ್ಚುವ ಸಂಪ್ರದಾಯವಿದೆ. ನಂತರ ಸ್ನಾನ ಮಾಡಿಸುವ ಸಂಪ್ರದಾಯವಿದೆ. ಭಾರತದ ವಿವಿಧ ಪ್ರದೇಶಗಳಿಗೆ ಅನುಸಾರವಾಗಿ ಅರಿಶಿನ ಶಾಸ್ತ್ರವನ್ನು ವಿವಿಧ ಹೆಸರಿನಿಂದಲೂ ಕರೆಯಲಾಗುತ್ತೆ. ಆದರೆ ಸಾಂಪ್ರದಾಯಿಕ ಹೆಸರುಗಳು ಬೇರೆಯಾದರೂ ಈ ಆಚರಣೆಯ ಮಹತ್ವ ಒಂದೇ ಆಗಿದೆ. ಅದೇನು ಎನ್ನುವುದನ್ನು ಈ ಕೆಳಗೆ ವಿವರಿಸಲಾಗಿದೆ ನೋಡಿ. ಕೆಟ್ಟ ದೃಷ್ಟಿಯಿಂದ ದೂರವಿರಿಸಲು ಹಳದಿ ವಧು ಮತ್ತು ವರರನ್ನು ದುಷ್ಟಶಕ್ತಿಗಳಿಂದ ರಕ್ಷಿಸಲು ಅರಿಶಿನವನ್ನು ಹಚ್ಚಲಾಗುತ್ತೆ ಅಂತ ಅನೇಕರು ಹೇಳುತ್ತಾರೆ. ಅರಿಶಿನ ಶಾಸ್ತ್ರದ ನಂತರ ವಧು ವರರನ್ನು ಮನೆಯಿಂದಾಚೆ ಕಾಲಿಡಲು ಬಿಡುವುದಿಲ್ಲ. ಯಾಕೆಂದರೆ ಅವರ ಮೇಲೆ ಕೆಟ್ಟ ದೃಷ್ಟಿ ಬೀಳುತ್ತೆ ಎಂದು ಹೇಳುತ್ತಾರೆ.
ಹಳದಿ ಪ್ರಕಾಶಮಾನವಾದ ಬಣ್ಣ ಭಾರತೀಯ ಪದ್ಧತಿಗಳಲ್ಲಿ, ಅರಿಶಿನದ ಪ್ರಕಾಶಮಾನವಾದ ಹಳದಿ ಬಣ್ಣವು ಹೆಚ್ಚು ಭರವಸೆ ನೀಡುತ್ತೆ. ತಮ್ಮ ಹೊಸ ಜೀವನವನ್ನು ಒಟ್ಟಿಗೆ ಪ್ರಾರಂಭಿಸುತ್ತಿರುವ ದಂಪತಿಗಳು, ಅರಿಶಿದ ಮಂಗಳಕರ ಪ್ರಭಾವ ಮತ್ತು ಅದರ ಬಣ್ಣದಿಂದಾಗಿ ಸಮೃದ್ಧಿಯನ್ನು ಹೊಂದುತ್ತಾರೆ. ಈ ಕಾರಣಕ್ಕಾಗಿ, ವಧು ಮತ್ತು ವರರು ತಮ್ಮ ಮದುವೆಯ ಮುಂಚಿತ ವಿವಿಧ ಸಂಪ್ರದಾಯಗಳಲ್ಲಿ ಹಳದಿ ಉಡುಪುಗಳನ್ನು ಧರಿಸುತ್ತಾರೆ.
ಮುಖದ ಕಾಂತಿ ಹೆಚ್ಚಿಸಲು ಅರಿಶಿನ ಮದುವೆಯಲ್ಲಿ ವಧೂವರರೇ ಎಲ್ಲರ ಕೇಂದ್ರಬಿಂದು ತಾನೆ. ಅದಕ್ಕಾಗಿಯೇ ಅವರ ಮುಖದ ಕಳೆ, ಕಾಂತಿ ಹೆಚ್ಚಿಸಲು ಮುಂದವೆಯ ಮುಂಚಿತವಾಗಿ ಅರಿಶಿನ ಶಾಸ್ತ್ರದ ಮೂಲಕ ಅರಿಶಿನವನ್ನು ಹಚ್ಚುತ್ತಾರೆ. ಹಿಂದಿನ ಕಾಲದಿಂದಲೇ ಈಗಿನಂತೆ ಕಾಸ್ಮೆಟಿಕ್‌ಗಳು ಇಲ್ಲದೇ ಇದ್ದ ಕಾಲದಲ್ಲಿ ಅರಿಶಿನವನ್ನೇ ನೈಸರ್ಗಿಕ ಸೌಂದರ್ಯವನ್ನು ಕಾಪಾಡಲು ಮುಖ್ಯವಾಗಿ ಬಳಸುತ್ತಿದ್ರು. ಅರಿಶಿನವು ತ್ವಚೆಯನ್ನು ಕಾಂತಿಯುತವಾಗಿ ಮತ್ತು ಹೊಳಪಾಗಿರಿಸುವ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿದೆ. ಹಾಗಾಗಿ ಮದುವೆಯ ಆಚರಣೆಗಳಲ್ಲಿ ಹಳದಿ ಸಮಾರಂಭಕ್ಕೆ ವಿಶೇಷ ಸ್ಥಾನವಿದೆ. ಆಂಟಿ ಬ್ಯಾಕ್ಟೀರಿಯಲ್‌ ಗುಣ ಹೊಂದಿರುವ ಅರಿಶಿನ ಅರಿಶಿನವನ್ನು ಹಳದಿ ಎಂದೂ ಕರೆಯುತ್ತಾರೆ, ಮದುವೆಯ ಮೊದಲು ವಧು ಮತ್ತು ವರರ ತ್ವಚೆಯು ತಿಳಿಯಾಗಿರಬೇಕೆಂದು ಅರಿಶಿವನ್ನು ಬಳಸುತ್ತಾರೆ. ಏಕೆಂದರೆ ಇದು ವೈದ್ಯಕೀಯ ಪ್ರಯೋಜನಗಳು ಮತ್ತು ಬ್ಯಾಕ್ಟೀರಿಯಾ ವಿರೋಧಿ ಸಾಮರ್ಥ್ಯಗಳಿಗೆ ಹೆಸರುವಾಸಿಯಾಗಿದೆ. ಮದುವೆಯ ಮೊದಲು ಅರಿಶಿನವನ್ನು ಹಚ್ಚುವುದರಿಂದ ವಧೂ ವರರು ಗಾಯಗಳು ಅಥವಾ ಅನಾರೋಗ್ಯದಿಂದ ಮುಕ್ತರಾಗುತ್ತಾರೆ ಎನ್ನುವ ನಂಬಿಕೆಯೂ ಇದೆ. ದೇಹವನ್ನು ಶುದ್ಧೀಕರಿಸುವ ಅರಿಶಿನ ಅರಿಶಿನವನ್ನು ಭಾರತೀಯ ಸಂಸ್ಕೃತಿಯಲ್ಲಿ ಹೆಚ್ಚು ಗೌರವಿಸಲಾಗುತ್ತದೆ ಏಕೆಂದರೆ ಇದು ದೇಹವನ್ನು ಸ್ವಚ್ಛ ಮತ್ತು ಶುದ್ಧೀಕರಿಸಲು ಸಹಾಯ ಮಾಡುತ್ತದೆ. ಇದು ಶಕ್ತಿಯುತ ಎಕ್ಸ್‌ಪೋಲಿಯೇಟಿಂಗ್ ಏಜೆಂಟ್ ಎಂದು ಹೆಸರುವಾಸಿಯಾಗಿದೆ. ಅರಿಶಿನವನ್ನು ಹಚ್ಚಿದ ನಂತರ ತೊಳೆಯುವಾಗ ಇದು ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ ಮತ್ತು ಚರ್ಮವನ್ನು ಡಿಟಾಕ್ಸ್‌ ಮಾಡುತ್ತದೆ.
ಅರಿಶಿನ ಆಂತಕವನ್ನು ಕಡಿಮೆ ಮಾಡುತ್ತೆ ಮದುವೆಯೆಂದರೆ ಆತಂಕ, ಒತ್ತಡ ಇದ್ದೇ ಇರುತ್ತೆ. ಅದರಲ್ಲೂ ವಧುವರರಲ್ಲಿ ಒತ್ತಡವು ಹೆಚ್ಚಾಗಿರುತ್ತೆ. ಹಾಗಾಗಿ ಮದುವೆಗೆ ಮುಂಚಿತವಾಗಿ ಅರಿಶಿನ ಶಾಸ್ತ್ರ ಮಾಡುತ್ತಾರೆ. ಇದು ದೇಹವನ್ನು ಡಿಟಾಕ್ಸ್‌ ಮಾಡುವುದರ ಜೊತೆಗೆ ವಧು ವರರ ಆತಂಕವನ್ನೂ ಕಡಿಮೆ ಮಾಡುತ್ತದೆ. ಅರಿಶಿನವು ಕರ್ಕ್ಯುಮಿನ್ ಎಂಬ ಉತ್ಕರ್ಷಣ ನಿರೋಧಕವನ್ನು ಹೊಂದಿರುತ್ತದೆ, ಇದು ಸಾಧಾರಣ ಖಿನ್ನತೆ-ಶಮನಕಾರಿ ಮತ್ತು ತಲೆನೋವು-ನಿವಾರಕ ಗುಣಲಕ್ಷಣಗಳನ್ನು ಹೊಂದಿದೆ. ಆದ್ದರಿಂದ ನಿಮ್ಮ ನರಗಳನ್ನು ಶಾಂತಗೊಳಿಸಲು ಮತ್ತು ನಿಮ್ಮ ಮದುವೆಯ ದಿನದಂದು ಚಿಂತೆ ದೂರ ಮಾಡಲು ಉತ್ತಮ ಮನೆಮದ್ದಾಗಿ ಕಾರ್ಯ ನಿರ್ವಹಿಸುತ್ತೆ. ಅಷ್ಟೇ ಅಲ್ಲ ಹಳದಿ ರೋಗನಿರೋಧಕ ವ್ಯವಸ್ಥೆಯನ್ನು ಬಲಪಡಿಸುತ್ತದೆ ಮತ್ತು ಹೊಟ್ಟೆಯ ಸಮಸ್ಯೆ ಬಾರದಂತೆ ತಡೆಯುತ್ತೆ. ಅರಿಶಿನ ಶಾಸ್ತ್ರ ಮದುವೆಯಾಗಲಿರುವ ನವಜೋಡಿಗಳಿಗೆ ಮಾತ್ರವಲ್ಲ. ಆ ಸಂತೋಷದ ಸಮಾರಂದಲ್ಲಿ ಭಾಗವಹಿಸಿ, ಅರಿಶಿನವನ್ನು ಕೈಂಟಿಸಿಕೊಳ್ಳುವ ಎಲ್ಲರಿಗೂ ಅರಿಶಿನ ಸಂತೋಷವನ್ನು ನೀಡುತ್ತೆ. ಇನ್ನೂ ಮದುವೆಯಾಗದಿರುವವರು ಅರಿಶಿನ ಶಾಸ್ತ್ರಕ್ಕೆ ಹೋಗಿ ಹಳದಿಯನ್ನು ಕೈಗಂಟಿಸಿಕೊಂಡರೆ ಅವರಿಗೂ ಶೀಘ್ರವಿವಾಹವಾಗುತ್ತೆ ಎನ್ನುವ ನಂಬಿಕೆಯೂ ಇದೆ. ಯಾಕೆಂದರೆ ಅರಿಶಿನಕ್ಕಿರುವ ಮಹತ್ವ ಹಿಂದೂ ಧರ್ಮದಲ್ಲಿ ಅಪಾರ. ಯಾವುದೇ ಶುಭಕಾರ್ಯವಂತೂ ಅರಿಶಿನವಿಲ್ಲದೇ ನಡೆಯದು. ಅಂತೆಯೇ ಅರಿಶಿನಶಾಸ್ತ್ರವಿಲ್ಲದೇ ಮದುವೆಯ ಕಾರ್ಯವೂ ಪೂರ್ತಿಗೊಳ್ಳದು.
Advertisement
Advertisement
Next Article