ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಅರವಿಂದ್ ಕೇಜ್ರಿವಾಲ್ ಮುಖ್ಯಮಂತ್ರಿ ಸ್ಥಾನದಿಂದ ವಜಾಗೊಳಿಸುವ ಪಿಐಎಲ್‌ ಅರ್ಜಿ ವಜಾ

04:10 PM Mar 28, 2024 IST | Bcsuddi
Advertisement

ನವದೆಹಲಿ: ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿರುವ ಅರವಿಂದ್ ಕೇಜ್ರಿವಾಲ್ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ವಜಾಗೊಳಿಸುವಂತೆ ಕೋ ರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದೆಹಲಿ ಹೈಕೋ ರ್ಟ್‌ ಗುರುವಾರ ವಜಾಗೊಳಿಸಿದೆ.

Advertisement

ಪ್ರಕರಣದ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ನೇತೃತ್ವದ ಪೀ ಠ ಇದು ನ್ಯಾಯಾಂಗದ ಪರಿಧಿಗೆ ಮೀ ರಿದ್ದು ಎಂದು ಹೇಳಿದೆ. ವಿಚಾರಣೆ ವೇಳೆ, ಕೇಜ್ರಿವಾಲ್ ಅವರು ಮುಖ್ಯಮಂತ್ರಿಯಾಗಿ ಮುಂದುವರಿಯಲು ಇರುವ ಕಾನೂನು ಅಡ್ಡಿಯನ್ನು ತೋರಿಸುವಂತೆ ಅರ್ಜಿದಾರ ಸುರ್ಜಿ ತ್ ಸಿಂಗ್ಯಾದವ್ ಅವರ ವಕೀಲರಿಗೆ ಪೀಠ ಸೂಚಿಸಿತು.

ಮುಖ್ಯಮಂತ್ರಿಯಾಗಿ ಮುಂದುವರಿಯಲು ಪ್ರಾಯೋಗಿಕ ತೊಂದರೆಗಳಿರಬಹುದು. ಆದರೆ, ಅದು ಬೇರೆ ವಿಷಯ. ಕಾನೂನು ತೊಡಕು ಏನಿದೆ?’ ಎಂದು ನ್ಯಾಯಾಲಯ ಕೇಳಿತ್ತು.

ಅಬಕಾರಿ ನೀತಿ ಹಗರಣ ಪ್ರಕರಣ ಸಂಬಂಧ ಮಾರ್ಚ್‌ 21ರಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇ ಜ್ರಿವಾಲ್ ಅವರ ಬಂಧನವಾಗಿದ್ದು, ಮಾರ್ಚ್ 28ರವರೆಗೆ ಇ.ಡಿ ಕಸ್ಟಡಿಗೆ ಒಪ್ಪಿಸಿ ದೆಹಲಿ ನ್ಯಾಯಾಲಯ ಆದೇಶ ಹೊರಡಿಸಿತ್ತು.

Advertisement
Next Article