For the best experience, open
https://m.bcsuddi.com
on your mobile browser.
Advertisement

ಅಯೋಧ್ಯೆ ರಾಮ ಪ್ರಾಣಪ್ರತಿಷ್ಠೆ ಹಿನ್ನಲೆ ಜನವರಿ 22ರಂದು ಷೇರು ಮಾರುಕಟ್ಟೆಗೆ ರಜೆ

11:48 AM Jan 20, 2024 IST | Bcsuddi
ಅಯೋಧ್ಯೆ ರಾಮ ಪ್ರಾಣಪ್ರತಿಷ್ಠೆ ಹಿನ್ನಲೆ ಜನವರಿ 22ರಂದು ಷೇರು ಮಾರುಕಟ್ಟೆಗೆ ರಜೆ
Advertisement

ಮುಂಬೈ : ಜನವರಿ 22 ರಂದು ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮ ನಡೆಯಲಿರುವ ಹಿನ್ನಲೆ ಈಗಾಗಲೇ ಕೇಂದ್ರ ಸರಕಾರ ತನ್ನ ನೌಕರರಿಗೆ ಅರ್ಧದಿನ ರಜೆ ಘೋಷಿಸಿದೆ. ಈ ನಡುವೆ ಶೇರ್ ಮಾರುಕಟ್ಟೆ ಕೂಡ ಸೋಮವಾರ ಜನವರಿ 22 ರಂದು ರಜೆ ಘೋಷಿಸಿದೆ.

ಮಹಾರಾಷ್ಟ್ರ ಸರಕಾರವು ಸೋಮವಾರ ನೆಗೋಷಿಯೇಬಲ್ ಇನ್‌ಸ್ಟ್ರುಮೆಂಟ್ಸ್ ಆಕ್ಟ್, 1881 ರ ಸೆಕ್ಷನ್ 25 ರ ಅಡಿಯಲ್ಲಿ ಘೋಷಿಸಲಾದ ಸಾರ್ವಜನಿಕ ರಜೆಯ ಕಾರಣ ಜನವರಿ 22 ರಂದು ಸೋಮವಾರ ವ್ಯಾಪಾರ ರಜೆಯನ್ನು ಘೋಷಿಸಲಾಗಿದೆ ಎಂದು ಎನ್‌ಎಸ್‌ಇ ತನ್ನ ಬಿಡುಗಡೆಯಲ್ಲಿ ತಿಳಿಸಿದೆ.

ಈ ನಡುವೆ ಜನವರಿ 20 ರಂದು ಶನಿವಾರ ಷೇರು ಮಾರುಕಟ್ಟೆಯಲ್ಲಿ ವಹಿವಾಟು ಇರಲಿದ್ದು, ಭಾರತೀಯ ಷೇರು ಮಾರುಕಟ್ಟೆಯು ಜನವರಿ 20 ರ ಶನಿವಾರದಂದು ಪೂರ್ಣ ವಹಿವಾಟು ಅವಧಿಯನ್ನು ಹೊಂದಿರುತ್ತದೆ ಎಂದು ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ ತಿಳಿಸಿದೆ.

Advertisement

Author Image

Advertisement