ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಅಯೋಧ್ಯೆ ರಾಮಮಂದಿರದ ಸ್ಮರಣಾರ್ಥ ಮೋದಿಯಿಂದ ಅಂಚೆ ಚೀಟಿ ಬಿಡುಗಡೆ

05:43 PM Jan 18, 2024 IST | Bcsuddi
Advertisement

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆಯ ರಾಮಮಂದಿರದ ಸ್ಮರಣಾರ್ಥ ಅಂಚೆ ಚೀಟಿಗಳನ್ನು ಮತ್ತು ಭಗವಾನ್ ರಾಮನ ಕುರಿತು ಬಿಡುಗಡೆ ಮಾಡಲಾದ ಅಂಚೆ ಚೀಟಿಗಳ ಪುಸ್ತಕವನ್ನು ಬಿಡುಗಡೆ ಮಾಡಿದ್ದಾರೆ.

Advertisement

ಈ ಅಂಚೆ ಚೀಟಿಯಲ್ಲಿ ರಾಮ ಮಂದಿರ, ರಾಮಾಯಣ ಚೌಪಾಯಿ ‘ಮಂಗಲ್ ಭವನ ಅಮಂಗಲ್ ಹರಿ’, ಸೂರ್ಯ, ಸರಯೂ ನದಿ ಮತ್ತು ದೇವಾಲಯದ ಸುತ್ತಮುತ್ತಲಿನ ಶಿಲ್ಪಗಳು ಸೇರಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು ಆರು ಅಂಚೆಚೀಟಿಗಳು ರಾಮ ಮಂದಿರ, ಗಣೇಶ, ಹನುಮಾನ್, ಜಟಾಯು, ಕೇವತ್ರಾಜ್ ಮತ್ತು ಮಾ ಶಬರಿ ಬಗ್ಗೆ ಇವೆ.

48 ಪುಟಗಳ ಪುಸ್ತಕವು ಯುಎಸ್, ನ್ಯೂಜಿಲೆಂಡ್, ಸಿಂಗಾಪುರ, ಕೆನಡಾ, ಕಾಂಬೋಡಿಯಾ ಮತ್ತು ಯುಎನ್‌ನಂತಹ ಸಂಸ್ಥೆಗಳು ಸೇರಿದಂತೆ 20 ಕ್ಕೂ ಹೆಚ್ಚು ದೇಶಗಳು ಬಿಡುಗಡೆ ಮಾಡಿದ ಅಂಚೆಚೀಟಿಗಳನ್ನು ಒಳಗೊಂಡಿದೆ ಎನ್ನಲಾಗಿದೆ.

Advertisement
Next Article