For the best experience, open
https://m.bcsuddi.com
on your mobile browser.
Advertisement

ಅಮೇರಿಕಾದಲ್ಲಿ ಮತ್ತೊಬ್ಬ ಭಾರತೀಯ ವಿದ್ಯಾರ್ಥಿ ಶವವಾಗಿ ಪತ್ತೆ - ವಾರದೊಳಗೆ 3ನೇ ಪ್ರಕರಣ

11:33 AM Feb 02, 2024 IST | Bcsuddi
ಅಮೇರಿಕಾದಲ್ಲಿ ಮತ್ತೊಬ್ಬ ಭಾರತೀಯ ವಿದ್ಯಾರ್ಥಿ ಶವವಾಗಿ ಪತ್ತೆ   ವಾರದೊಳಗೆ 3ನೇ ಪ್ರಕರಣ
Advertisement

ನ್ಯೂಯಾರ್ಕ್: ಅಮೇರಿಕಾದಲ್ಲಿರುವ ಮತ್ತೊಬ್ಬ ಭಾರತೀಯ ವಿದ್ಯಾರ್ಥಿ ಶ್ರೇಯಸ್ ರೆಡ್ಡಿ ಎಂಬಾತ ಶವವಾಗಿ ಪತ್ತೆಯಾಗಿದ್ದು, ಒಂದು ವಾರದೊಳಗೆ ಇದು ಮೂರನೇ ಪ್ರಕರಣವಾಗಿದೆ.

ನ್ಯೂಯಾರ್ಕ್‌ನಲ್ಲಿರುವ ಭಾರತೀಯ ಕಾನ್ಸುಲೇಟ್ ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದು, ಶ್ರೇಯಸ್ ಅವರ ಕುಟುಂಬದೊಂದಿಗೆ ಸಂಪರ್ಕದಲ್ಲಿದೆ ಮತ್ತು ಅವರಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುತ್ತಿದೆ ಎಂದು ಹೇಳಿದೆ.

ಇನ್ನು ಈ ಬಗ್ಗೆ ಪೊಲೀಸ್ ತನಿಖೆ ನಡೆಯುತ್ತಿದ್ದು, ಸಾವಿಗೆ ಕಾರಣ ಇನ್ನೂ ತಿಳಿದು ಬಂದಿಲ್ಲ.

Advertisement

ಈ ಹಿಂದೆ ವಿವೇಕ್ ಸೈನಿ ಮತ್ತು ನೀಲ್ ಆಚಾರ್ಯ ಎಂಬ ಭಾರತೀಯ ವಿದ್ಯಾರ್ಥಿಗಳು ಸಾವನ್ನಪ್ಪಿದ್ದು, ಇದೀಗ ಶ್ರೇಯಸ್ ರೆಡ್ಡಿ ಅವರ ಸಾವು ವಾರದೊಳಗಿನ ಮೂರನೇ ಪ್ರಕರಣವಾಗಿದೆ.

Author Image

Advertisement