For the best experience, open
https://m.bcsuddi.com
on your mobile browser.
Advertisement

ಅಮಿತ್ ಶಾ ಅವರಿಗೆ ರಾಜ್ಯದ ಮತದಾರರಿಂದ ಮತ ಕೇಳುವ ನೈತಿಕ ಹಕ್ಕಿಲ್ಲ ಎಂದು ಏಕೆ ಹೇಳಿದ್ರು.?

07:27 AM Apr 03, 2024 IST | Bcsuddi
ಅಮಿತ್ ಶಾ ಅವರಿಗೆ ರಾಜ್ಯದ ಮತದಾರರಿಂದ ಮತ ಕೇಳುವ ನೈತಿಕ ಹಕ್ಕಿಲ್ಲ ಎಂದು ಏಕೆ ಹೇಳಿದ್ರು
Advertisement

ಮೈಸೂರು: ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರ ರಾಜ್ಯದ ಜನತೆಗೆ ದ್ರೋಹ ಬಗೆದಿದೆ . ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ರಾಜ್ಯದ ಮತದಾರರಿಂದ ಮತ ಕೇಳುವ ನೈತಿಕ ಹಕ್ಕಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಲೋಕಸಭಾ ಚುನಾವಣಾ ಪ್ರಚಾರಕ್ಕಾಗಿ ರಾಜ್ಯಕ್ಕೆ ಆಗಮಿಸಿರುವ ಅಮಿತ್ ಶಾ ಅವರಿಗೆ ಬರ ಪರಿಹಾರ ನೀಡುವಂತೆ ಬಿಜೆಪಿಯ ಮೈತ್ರಿ ಪಾಲುದಾರ ಮತ್ತು ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರು ಕೇಳಬೇಕಿತ್ತು ಎಂದು ಅವರು ಹೇಳಿದರು

Advertisement

ಅಮಿತ್ ಶಾ ಬರಲಿ ಅಥವಾ ನರೇಂದ್ರ ಮೋದಿ ಬರಲಿ ಅಥವಾ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಬರಲಿ. ಯಾರಾದರೂ ಬರಲಿ. ಅಮಿತ್ ಶಾ ಉನ್ನತಾಧಿಕಾರ ಸಮಿತಿಯ ಮುಖ್ಯಸ್ಥರಾಗಿದ್ದಾರೆ, ಅವರು ಬರ ಪರಿಹಾರ ನೀಡಿದ್ದಾರೆಯೇ ಕರ್ನಾಟಕದ ಜನರಿಂದ ಮತ ಕೇಳಲು ಅವರಿಗೆ ಯಾವ ನೈತಿಕ ಹಕ್ಕಿದೆ? ಎಂದು ಸಿದ್ದರಾಮಯ್ಯ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಪ್ರಶ್ನಿಸಿದರು.

Tags :
Author Image

Advertisement