For the best experience, open
https://m.bcsuddi.com
on your mobile browser.
Advertisement

ಅಪ್ರಾಪ್ತ ದ್ವಿಚಕ್ರ ಚಾಲಕರಿಗೆ ಸಿಹಿ ಸುದ್ದಿ: ವಾಹನ ಚಲಾವಣೆಯಲ್ಲಿ ನಿಯಮ ಬದಲು- ಹೊಸ ನಿಯಮವೇನು..?

05:20 PM Oct 12, 2024 IST | BC Suddi
ಅಪ್ರಾಪ್ತ ದ್ವಿಚಕ್ರ ಚಾಲಕರಿಗೆ ಸಿಹಿ ಸುದ್ದಿ  ವಾಹನ ಚಲಾವಣೆಯಲ್ಲಿ ನಿಯಮ ಬದಲು  ಹೊಸ ನಿಯಮವೇನು
Advertisement

18 ವರ್ಷ ಮೀರದ ಅಪ್ರಾಪ್ತ ವಯಸ್ಕರು ಯಾವುದೇ ವಾಹನ ಚಲಾಯಿಸುವಂತಿಲ್ಲ. ಆದರೆ, ಈ ನಿಯಮದಲ್ಲಿ ಬದಲಾವಣೆ ಮಾಡಿ ಕೇಂದ್ರ ಸರ್ಕಾರ ಮಹತ್ವದ ಬದಲಾವಣೆ ತಂದಿದೆ.

ದೇಶದಲ್ಲಿ ವಿದ್ಯುತ್ ಚಾಲಿತ ವಾಹನಗಳ ಬಳಕೆಗೆ ಉತ್ತೇಜನ ನೀಡಲು ಈ ನಿರ್ಧಾರ ಕೈಗೊಳ್ಳಲಾಗಿದೆ. 16 ವರ್ಷ ಪೂರ್ಣಗೊಂಡ ಚಾಲಕರಿಗೆ ಸಾರ್ವಜನಿಕ ರಸ್ತೆಯಲ್ಲಿ ಎಲೆಕ್ಟ್ರಿಕಲ್ ದ್ವಿಚಕ್ರ ವಾಹನ ಚಲಾಯಿಸಲು ಅವಕಾಶ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಆದರೆ, ಇ ವಾಹನದ ಗರಿಷ್ಟ ವೇಗದ ಮಿತಿ 25 ಕಿಲೋ ಮೀಟರ್, ಸ್ಕೂಟರ್ ಸಾಮರ್ಥ್ಯ 50 ಸಿಸಿ ಮೋಟಾರ್ ಶಕ್ತಿ ಗರಿಷ್ಟ 1500 ವ್ಯಾಟ್‌ಗೆ ಸೀಮಿತವಾಗಿರಬೇಕು ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ನಿಗದಿಪಡಿಸಿದೆ. ಈ ಸಂಬಂಧ ರಸ್ತೆ ಸಾರಿಗೆ ನಿಯಮಗಳಿಗೆ ತಿದ್ದುಪಡಿ ತರಲು ನಿರ್ಧರಿಸಲಾಗಿದೆ.

Advertisement

ಈ ನಿರ್ಧಾರದಿಂದ ಶಾಲೆ, ಕಾಲೇಜು, ಮನೆಪಾಠಕ್ಕೆ ತೆರಳಲು ಹರೆಯದ ಬಾಲಕ-ಬಾಲಕಿಯವರಿಗೆ ಹೆಚ್ಚಿನ ಅನುಕೂಲವಾಗಲಿದೆ.

ಈ ಕುರಿತು ವಿಧೇಯಕ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಮಂಡನೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

Author Image

Advertisement